ಕರಾವಳಿ

ಮಂಗಳೂರು ವೆನ್‌ಲಾಕ್ ಆಸ್ಪತ್ರೆ ಕೊರೊನಾ ಆಸ್ಪತ್ರೆಯಾಗಿ ಪರಿವರ್ತನೆ : ಸಚಿವ ಕೋಟ

Pinterest LinkedIn Tumblr

ಮಂಗಳೂರು , ಮಾರ್ಚ್.27: ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ COVID 19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ.ಆಸ್ಪತ್ರೆ ಯ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಕಟ್ಟಡವನ್ನು COVID 19 ಪೊಸಿಟಿವ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದ ಸಂದರ್ಭದಲ್ಲಿ ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲ್ ,ಶಾಸಕ ಭರತ್ ಶೆಟ್ಟಿ , ಜಿಲ್ಲಾಧಿಕಾರಿ ಸಿಂಧೂ .ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪ ಉಪಸ್ತಿತರಿದ್ದರು.

ವೆನ್ ಲಾಕ್‌ ಆಸ್ಪತ್ರೆಯ 20 ಹಾಸಿಗೆಗಳ ಆಯುಶ್ ಕಟ್ಟಡದಲ್ಲಿ ಸಂಶಯಿತ ಕೋವಿಡ್ ಪ್ರಖರಗಳನ್ನು ದಾಖಲಿಸುವುದು ಮತ್ತು ಯಾವುದಾದರೂ ಪೊಸಿಟಿವ್ ಬಂದಲ್ಲಿ ಸುಪರ್ ಸ್ಪೆಷಲಿಟಿ ಕಟ್ಟಡದ ವಾಡ್ ಗೆ ವರ್ಗಾಹಿಸಲಾಗುವುದು. 705 ಹಾಸಿಗೆಗಳ ವೆನ್ ಲಾಕ್‌ ಆಸ್ಪತ್ರೆ ಯ ಹಳೆಯ ಕಟ್ಟಡದ ವಾಡ್ರಗಳನ್ನು ಉಪಯೋಗಿಸಲಾಗುವುದು.

ಈ ನಿಟ್ಟಿನಲ್ಲಿ ಈಗಾಗಲೆ ಆಸ್ಪತ್ರೆಯಲ್ಲಿ ಬೇರೆ ಬೇರೆ ಖಾಯಿಲೆಗಳ ಚಿಕಿತ್ಸೆಗಾಗಿ ಒಳರೋಗಿಗಳಾಗಿ ದಾಖಲಾಗಿರುವ ಸುಮಾರು 218 ರೋಗಿಗಳನ್ನು ಹಂತ ಹಂತ ವಾಗಿ ಮೂರು ದಿನಗಳ ಒಳಗಾಗಿ ಸಮೀಪದ ವ್ವೆದ್ಯಕೀಯ ಕಾಲೇಜ್ ಆಸ್ಪತ್ರೆಗಳಿಗೆ ವಗ್ರಾಹಿಸಲಾಗುವುದು ಮತ್ತು ವೆನ್ ಲಾಕ್ಆಸ್ಪತ್ರೆಗೆ ಬರುವರನ್ನು ಕೂಡಾ ಸಮೀಪದ ವ್ವೆದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು.

ಮಾತ್ರವಲ್ಲದೆ ಬಿಪಿಲ್,ಆಯುಶ್ಮಾನ್,ವೆನ್ ಲಾಕ್ ಕಾಡ್ರಗೆ ವೆನ್ ಲಾಕ್ ಆಸ್ಪತ್ರೆಯ ದರ ಪಟ್ಟಿಯಂತೆ ಚಿಕಿತ್ಸೆನೀಡಲಾಗುವುದು ಎಂದು ತಿಳಿಸಿದರು. ಆರ್.ಎ.ಪಿ.ಸಿ.ಸಿ. ಯಲ್ಲಿ ದಾಖಲಾಗಿರುವ 140 ಮಕ್ಕಳನ್ನು ಸಮೀಪದ ವೆದ್ಯಕೀಯಕಾಲೇಜು ಆಸ್ಪತ್ರೆಗಳಿಗೆ ವಗ್ರಾಯಿಸುವ ಮೂಲಕ ಈ ಆಸ್ಪತ್ರೆಯನ್ನು ಉಪಯೋಗಿಸಲಾಗುವುದು.

ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಟ್ರಯಾಡ್ ರೂಂಗಳನ್ನು ಸ್ಥಾಪಿಸಿ ಅಲ್ಲಿ ಸಂಶಯಿತ ಪ್ರಖರಣಗಳು ಕಂಡು ಬಂದಲ್ಲಿ ತಕ್ಷಣ 108 ಆಂಬ್ಯುಲೆನ್ಸ್ ಮೂಲಕ ವೆನ್ ಲಾಕ್‌ಗೆ ಕರೆತಂದು ತಪಾಸಣೆಗೊಳಪಡಿ ಸಲಾಗುವುದು.ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 20 ಹಾಸಿಗೆಗಳ ಐಸೋಲೇಶನ್ ವಾಡ್ರುಗಳನ್ನು ತೆರೆಯಲಾಗುವುದು.

ಈ ಎಲ್ಲಾ ವ್ಯವಸ್ಥೆಗಳಿಗಾಗಿ ಒಂದು ಸಮನ್ವಯ ಸಮಿತಿಯನ್ನು ಮಾಡಲಾಗಿದ್ದು ಅದಕ್ಕೆ ಆರೋಗ್ಯ ಇಲಾಖೆಯ ವೆದ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ರವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಇದೇ ರೀತಿಯಲ್ಲಿ ವಿವಿಧ ನಾಲ್ಕು ತಾಲೂಕುಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಕ್ಕೆ ತಾಲೂಕು ಸರಕಾರಿ ಆಸ್ಪತ್ರೆ ಮತ್ತು ಸ್ಥಳೀಯ ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯ ಮಾಡಿಕೊಳ್ಳ ಲಾಗುವುದು ಎಂದು ತಿಳಿಸಿದರು.

ವೆನ್ ಲಾಕ್ ಆಸ್ಪತ್ರೆಯಲ್ಲಿರುವ ವೈದ್ಯರು ಮತ್ತು ಸುಮಾರು 122 ಮಂದಿ ಸ್ಟಾಫ್ ದಾದಿಯರು ಐಸಿಯು ತರಬೇತಿ ಹೊಂದಿದವರಾಗಿದ್ದು ಅಗತ್ಯಬಿದ್ದಲ್ಲಿ ಖಾಸಗಿ ವೆ ದ್ಯಕೀಯ ಕಾಲೇಜು ಆಸ್ಪತ್ರೆಯ ದಾದಿಯರಿಗೆ ತರಬೇತಿ ನೀಡಲು ಸಹಕಾರ ಪಡೆದುಕೊಳ್ಳಲಾಗುವುದು.

ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ,ವೆನ್ ಲಾಕ್ ಆಸ್ಪತ್ರೆಯ ಅಧೀಕ್ಷರು ಮತ್ತು ಎ.ಜೆ.ಆಸ್ಪತ್ರೆಯ ಡಾ. ಪ್ರಶಾಂತ್ ಮಾಲ್ರರವರ ಮುಂದಾಳತ್ವದಲ್ಲಿ ತಜ್ಣರ ತಂಡವು ಇಂದು ಸಭೆ ನಡೆಸಲಿದ್ದಾರೆ ಮತ್ತು ಈ ಸಭೆಯಲ್ಲಿ ಪಿ ಪಿ ಇ ಮತ್ತು ವೆಂಟಿಲೇಟರ್ ಚಿಕಿತ್ಸೆಗೆ ಅಗತ್ಯವಿರುವ ಇನ್ ಟೆನ್ಸಿವಿಸಿಟ್ ನ ವ್ಯವಸ್ಥೆಯ ಬಗ್ಗೆಯೂ ಸಮಾಲೋಚನೆ ನಡೆಸಲಿದ್ದಾರೆ ಎಂದ ಸಚಿವರು ವೆನ್ ಲಾಕ್ ಆಸ್ಪತ್ರೆಯಲ್ಲಿ 32 ವೆಂಟಿಲೇಟರ್ ಗಳಿದ್ದು ಹೊಸ ಕಟ್ಟಡದಲ್ಲಿ ಇನ್ನೊಂದು ವಾರದಲ್ಲಿ 100 ವೆಂಟಿಲೇಟರ್ ಗಳನ್ನು ಅಳವಡಿಸಲಾಗುವುದು. ಜಿಲ್ಲಾಡಳಿತವು ಸಂಪೂರ್ಣವಾಗಿ ಸಜ್ಜಾಗಿದ್ದು ಜನರು ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ . ಅಂತರಕಾಪಾಡಿಕೊಳ್ಳುವುದು, ಮನೆಯಿಂದ ಹೊರಬಾರದೆ ಮನೆಯೊಳಗೆ ಇದ್ದುಕೊಂಡು ಸಹಕಾರ ನೀಡುವಂತೆ ಮನವಿಮಾಡಿಕೊಂಡರು.

Comments are closed.