ಕರಾವಳಿ

ಕೋರೋನಾ: ಭಿತ್ತಿಪತ್ರ ಅಂಟಿಸುವುದರ ಮೂಲಕ ಜನಜಾಗೃತಿ

Pinterest LinkedIn Tumblr

ಮಂಗಳೂರು ಮಾರ್ಚ್ 25 ; ನಗರದ ಪೋರ್ಟ್ ವಾರ್ಡಿನ ಕಂದಕ ಪ್ರದೇಶದ ಬದ್ರಿಯಾ ಕಾಲೇಜು ಜಂಕ್ಷನ್ ನಲ್ಲಿ ಕೋರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜನ ಜಾಗೃತಿ ಅಭಿಯಾನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ನಗರ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಕರಪತ್ರ ಹಾಗೂ ನಗರದಲ್ಲಿನ ಮೀನುಗಾರಿಕಾ ಧಕ್ಕೆ, ಆಟೋ-ಬಸ್ ನಿಲ್ದಾಣ, ಹಾಗೂ ಮನೆ ಮನೆಗಳಿಗೆ ಭೇಟಿ ನೀಡಿ ಭಿತ್ತಿಪತ್ರ ಅಂಟಿಸುವುದರ ಮೂಲಕ ಜನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಬಂದರ್, ರೊಝಾರಿಯಾ ಚರ್ಚ್ ಪಾಲನಾ ಸಮಿತಿಯ ಗಿಲ್ಬರ್ಟ್ ಡಿಸಿಲ್ವ, ಬದ್ರಿಯಾ ಮಸೀದಿಯ ಆದಿಲ್, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ಕೆಎಂ ಖಾಸಿಮ್, ಮನಪಾ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಮಧು ಎಸ್. ಮನೋಹರ್, ಶಬರಿನಾಥ ರೈ, ಕಿರಣ್ ಕುಮಾರ್, ರಕ್ಷಿತಾ ಮೊದಲಾದವರು ಉಪಸ್ಥಿತರಿದ್ದರು.

Comments are closed.