ಕುಂದಾಪುರ: ಕೊರೋನಾ ವೈರಸ್ ಹಿನ್ನಲೆ ಮಾ.17 ಮಂಗಳವಾರ (ನಾಳೆ) ನಡೆಯುವ ವಾರ್ಷಿಕ ಜಾತ್ರೆಗೆ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರು ಆಗಮಿಸದೆ ಇರುವುದು ಸೂಕ್ತ ಎಂದು ಸೂಚನೆ ನೀಡಲಾಗಿದೆ.


(ಸಂಗ್ರಹ ಚಿತ್ರ)
ನಾಳೆ ಕೊಲ್ಲೂರು ಹಬ್ಬವು ಮಾಮೂಲಿಯಂತೆ ನಡೆಯಲಿದ್ದು ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ಕೊರೋನಾ ಭೀತಿಯಿಂದ ಜನಸಂದಣಿ ಉಂಟಾಗುವ ಎಲ್ಲೆಡೆಯಲ್ಲಿ ಬಂದ್ ಆದೇಶದ ಜೊತೆ ಜಾತ್ರೆ, ಮದುವೆ,ಕ್ರೀಡಾಕೂಟ ಮೊದಲಾದ ಚಟುವಟಿಕೆಗಳಿಹೆ ಕಟ್ಟುನಿಟ್ಟಾಗಿ ನಿಷೇಧಿಸಿದ ಹಿನ್ನೆಲೆ ಕೊಲ್ಲೂರು ಜಾತ್ರೆಯಲ್ಲಿ ಕೇವಲ ದೇವಾಲಯದ ಸಿಬ್ಬಂದಿ ಮತ್ತು ಪುರೋಹಿತರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿದೆ.
ಸಾಮಾನ್ಯದಂತೆ ದೇವಾಲಯದಲ್ಲಿ ದೇವಿ ದರ್ಶನ, ಧಾರ್ಮಿಕ ವಿಧಿ- ವಿಧಾನಗಳು ನಡೆಯಲಿದ್ದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸೇರಬಾರದು ಎಂದು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.