ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜಾತ್ಯತೀತ ಜನತಾದಳದ ಯುವ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬೆದರಿಕೆ ಹಾಕಿದ್ದು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಜಾತ್ಯತೀತ ಜನತಾದಳದ ಯುವ ಘಟಕದ ಅಧ್ಯಕ್ಷನಾದ ತನಗೆ ಸಾಮಾಜಿಕ ಜಾಲತಾಣ ಆಗಿರುವ ಫೇಸ್ ಬಕ್ ನಲ್ಲಿ ರಾಮ್ ಪ್ರಸಾದ್ ಎನ್ನುವ ವ್ಯಕ್ತಿ ಜೀವಬೆದರಿಕೆ ಹಾಕಿದ್ದು, ಉದ್ಯಮ ಕ್ಷೇತ್ರ, ಧಾರ್ಮಿಕ ಕ್ಷೇತ್ರ ಸಮಾಜ ಸೇವೆ ಹಾಗೂ ದಕ ಜಿಲ್ಲಾ ಯುವ ಜನತಾದಳದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಆತನ ವಿರುದ್ಧ ಕಠಿಣವಾದ ಕ್ರಮ ಜರುಗಿಸಬೇಕೆಂದು ಆಯಕ್ತರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮಹಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ, ಜಿಲ್ಲಾ ಉಪಾಧ್ಯಕ್ಷರು ಮೊಹಮ್ಮದ್ ಆಸಿಫ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಫೈಝಲ್, ಮಂಗಳೂರು ಉತ್ತರ ಕ್ಷೇತ್ರಾಧ್ಯಕ್ಷ ರತೀಶ್ ಕರ್ಕೇರ , ಉಪಾಧ್ಯಕ್ಷ ಹಿತೇಶ್ ರೈ, ಇತರರು ಉಪಸ್ತಿತರಿದ್ದರು

Comments are closed.