ಕರಾವಳಿ

ಒಂದೇ ವಾರದಲ್ಲಿ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮರಳು ಪ್ರಾರಂಭ-ಶಾಸಕ ರಘುಪತಿ ಭಟ್

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆಯ ವಿರುದ್ಧ ಹೋರಾಟ ನಡೆಸಿದ ಉಡುಪಿ ಶಾಸಕ ಕೆ. ರಘುಪತಿ ಭಟ್ ಇವರು ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.

(ಸಾಂದರ್ಭಿಕ ಚಿತ್ರ)

ಉಡುಪಿ ಜಿಲ್ಲೆಯ ಮರಳು ದಿಬ್ಬವನ್ನು ತೆರವುಗೊಳಿಸಲು ಕೆ.ಎಸ್.ಇ.ಝಡ್, ಸಿ.ಆರ್.ಝಡ್ ಸಮಿತಿಯಿಂದ ಬಾಕಿ ಇದ್ದ ನಿರ್ಣಯವನ್ನು ಪೂರ್ಣಗೊಳಿಸಿ ಕಾರ್ಯದರ್ಶಿಯವರು ನೀಡಿದ್ದಾರೆ. ಇನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಏಳು ಮಂದಿ ಸದಸ್ಯರ ಸಮಿತಿಯಲ್ಲಿ ಮಂಡಿಸಿ 171 ಜನ ಪರವಾನಗಿದಾರರಿಗೆ ಮರಳನ್ನು ನೀಡಿ ಮರಳು ವಿತರಣೆ ಆ್ಯಪ್ ಮೂಲಕ ಮಾಡಲು ಈ ನಿರ್ಣಯದಿಂದ ಅನುಕೂಲವಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಕೈಗೊಂಡ ನಿರ್ಧಾರದಂತೆ ಮತ್ತೆ ಮರಳು ದಿಬ್ಬವನ್ನು ತೆರವುಗೊಳಿಸುವ ಸಂಬಂಧ ಸೂಚನೆ ನೀಡಲಾಗಿದೆ. ಹೀಗಾಗಿ ಒಂದು ವಾರದ ಒಳಗೆ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮರಳು ಪ್ರಾರಂಭವಾಗಲಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಇವರು ತಿಳಿಸಿದ್ದಾರೆ.

Comments are closed.