ಕರಾವಳಿ

ಹಿರಿಯಡ್ಕ: ಕಾರು-ಆಟೋ ರಿಕ್ಷಾ ಡಿಕ್ಕಿ, ಪಾದಚಾರಿ ಸಹಿತ ಇಬ್ಬರು ದಾರುಣ ಸಾವು

Pinterest LinkedIn Tumblr

ಉಡುಪಿ: ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಆಟೊ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಆತ್ರಾಡಿಯಲ್ಲಿ ಬುಧವಾರ ರಾತ್ರಿ 9:30ರ ಸುಮಾರಿಗೆ ಸಂಭವಿಸಿದೆ.

ಮೃತರನ್ನು ಪಾದಚಾರಿ ಆತ್ರಾಡಿ ನಿವಾಸಿ ಮಾಧವ ಶೆಟ್ಟಿಗಾರ್(60) ಹಾಗೂ ಆಟೋ ರಿಕ್ಷಾ ಚಾಲಕ ವಸಂತ ನಾಯಕ್(28) ಎಂದು ಗುರುತಿಸಲಾಗಿದೆ.

ಮಾಧವ ಶೆಟ್ಟಿಗಾರ್‌ಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಮಗುಚಿ ಬಿದ್ದಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಕಾರು ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಇಬ್ಬರು ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.