ಮಂಗಳೂರು ; ಎಸ್.ಕೆ.ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ (ರಿ) ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನೂತನ ಮೇಯರ್ ದಿವಾಕರ ಪಾಂಡೇಶ್ವರ ಹಾಗು ಉಪ ಮೇಯರ್ ವೇದಾವತಿ ಅವರನ್ನು ಪಾಲಿಕೆ ಸಿಬ್ಬಂದಿಗಳ ಪರವಾಗಿ ಅಭಿನಂದಿಸಲಾಯ್ತು.
ಈ ಸಂದರ್ಭ ಕಾರ್ಪೊರೇಟರ್ ಸುಧೀರ್ ಕಣ್ಣೂರು, ಎ ಸ್.ಕೆ.ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಬಾಲು,ಮಾಜಿ ಅಧ್ಯಕ್ಷ ಶಿವರಾಜ್ ಪಿ.ಬಿ.,ಉಪಾಧ್ಯಕ್ಷ ದೇವೇಂದ್ರಪ್ಪ, ಕಾರ್ಯದರ್ಶಿ ಭಾಸ್ಕರ ಸಿ., ಜತೆ ಕಾರ್ಯದರ್ಶಿ ಶ್ರೀನಿವಾಸ ಗಟ್ಟಿ, ಹೃದಯವಾಹಿನಿ ಪತ್ರಿಕೆಯ ಸಂಪಾದಕ ಮಂಜುನಾಥ್ ಸಾಗರ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎಸ್.ಕೆ.ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ ಹಾಗು ಹೃದಯವಾಹಿನಿ ಪತ್ರಿಕೆಯ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕುದ್ಮುಲ್ ರಂಗ ರಾವ್ ರಂಗ ಮಂದಿರದಲ್ಲಿ ಮೇ 23ರಂದು ನಡೆಯಲಿರುವ ರಾಷ್ಟ್ರೀಯ ಕನ್ನಡ ಸಮ್ಮೇಳನಕ್ಕೆ ಪಾಲ್ಗೊಳ್ಳಲು ಮಹಾಪೌರರು ಈಸಂದರ್ಭ ಆಹ್ವಾನಿಸಿದರು.
ಅಲ್ಲದೇ ಮಾರ್ಚ್ ಅಂತ್ಯದಲ್ಲಿ ರಾಜ್ಯೋತ್ಸವ ಪ್ರಶಸ್ತಿವಿಜೇತ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಯವರಿಂದ ” ಉಚಿತ ಯೋಗ ತರಬೇತಿ” ಕಾರ್ಯಕ್ರಮವಿದ್ದು ಮೇಯರ್ ದಿವಾಕರ ಹಾಗು ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗಡೆ ಪಾಲ್ಗೊಳ್ಳುವರೆಂದು ಪ್ರಕಟಿಸಿದ್ದಾರೆ.

Comments are closed.