ಕರಾವಳಿ

ಸುರತ್ಕಲ್ ಹೆದ್ದಾರಿ ಬದಿಯಲ್ಲೇ ಮಂಗಳಮುಖಿಯರಿಂದ ಖುಲ್ಲಂಖುಲ್ಲಾ ವೇಶ್ಯಾವಾಟಿಕೆ! – ವಿದ್ಯಾರ್ಥಿನಿಯರಿಗೂ ತಟ್ಟಿದ ಬಿಸಿ

Pinterest LinkedIn Tumblr

ಮಂಗಳೂರು : ಹೆಸರಾಂತ ಎನ್‍ಐಟಿಕೆ ಶಿಕ್ಷಣ ಸಂಸ್ಥೆ, ಬೀಚ್ ಪ್ರವಾಸೋದ್ಯಮ, ಪ್ರಸಿದ್ಧ ದೇವಸ್ಥಾನಗಳನ್ನು ಹೊಂದಿರುವ ಸುರತ್ಕಲ್‍ಗೆ ಅಂಟಿಕೊಂಡಿರುವ ಶಾಪವೆಂದರೆ ಮಂಗಳಮುಖಿಯರ ಅಕ್ರಮ ವೇಶ್ಯಾವಾಟಿಕೆ.

ಈ ಹಿಂದೆ ಇಲ್ಲಿನ ಕಾನ, ಪಣಂಬೂರು, ಬೈಕಂಪಾಡಿಗಷ್ಟೇ ಸೀಮಿತವಾಗಿದ್ದ ಇವರು ಕಳೆದ ಐದಾರು ತಿಂಗಳಿಂದ ಮುಕ್ಕ, ಎನ್‍ಐಟಿಕೆ ಟೋಲ್ ಗೇಟ್ ಪರಿಸರದಲ್ಲಿ ಬೀಡುಬಿಟ್ಟಿದ್ದಾರೆ. ಇಲ್ಲಿ ಟೋಲ್ ಪಾವತಿಸಲು ನಿಲ್ಲುವ ವಾಹನ ಸವಾರರಿಂದ ಹಣಕ್ಕಾಗಿ ಪೀಡಿಸುವುದು ಒಂದೆಡೆಯಾದರೆ ಸಂಜೆಯಾಗುತ್ತಲೇ ಇಲ್ಲಿ ವಿಟಪುರುಷರಿಗಾಗಿ ಕಾಯುತ್ತಾ ಹೆದ್ದಾರಿ ಪಕ್ಕವೇ ಖುಲ್ಲಂಖುಲ್ಲಾ ರತಿಕ್ರೀಡೆ ಯಾಡುತ್ತಿರುವುದು ವಾಹನ ಸವಾರರು, ವಿದ್ಯಾರ್ಥಿಗಳಿಗೆ ತೀರಾ ಮುಜುಗರ ಉಂಟು ಮಾಡುತ್ತಿದೆ. ಈ ಬಗ್ಗೆ ಕ್ರಮ ಜರುಗಿಸಬೇಕಾದ ಸುರತ್ಕಲ್ ಠಾಣಾ ಪೊಲೀಸರು ಎಲ್ಲಾ ಗೊತ್ತಿದ್ದೂ ಸುಮ್ಮನಿರುವುದೇಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಎನ್‍ಐಟಿಕೆ ಟೋಲ್ ಗೇಟ್ ಗಿಂತ ಕೆಲವೇ ಮೀಟರ್ ದೂರ ಉಡುಪಿ ಕಡೆಗೆ ಸಾಗುವ ಹೆದ್ದಾರಿ ಬದಿಯಲ್ಲಿ ಅರೆಬರೆ ಬಟ್ಟೆ ಧರಿಸಿ ನಿಲ್ಲುವ ಮಂಗಳಮುಖಿಯರು ಸಂಜೆಯಾಗುತ್ತಲೇ ವ್ಯವಹಾರಕ್ಕಿಳಿಯುತ್ತಾರೆ.

ಮೂರು ಮಂದಿ ಪ್ರತಿನಿತ್ಯ ಇಲ್ಲಿ ನಿಲ್ಲುತ್ತಿದ್ದು 500, 1000 ರೂ. ಎಂದು ರಸ್ತೆಯಲ್ಲಿ ಹೋಗಿಬರುವ ವಾಹನ ಸವಾರರ ಗಮನ ಸೆಳೆದು ಅಲ್ಲೇ ವ್ಯವಹಾರ ಕುದುರಿಸುತ್ತಾರೆ. ಒಂದೊಮ್ಮೆ ವ್ಯವಹಾರ ಫಿಕ್ಸ್ ಆದರೆ ಅಲ್ಲೇ ಅರೆಬರೆ ಕತ್ತಲಿರುವ ಸಮೀಪದ ಎನ್‍ಐಟಿಕೆ ಸಂಸ್ಥೆಯ ಕಂಪೌಂಡ್ ಹೊರಗಡೆ ಹೆದ್ದಾರಿಯಲ್ಲಿ ಸಾಗುವವರಿಗೆ ಕಾಣಿಸುವ ಜಾಗದಲ್ಲೇ ಸೆಕ್ಸ್ ಮಾಡುತ್ತಾರೆ.

ಪಾದಚಾರಿಗಳು, ವಾಹನ ಸವಾರರು ಇದನ್ನು ಕಂಡೂ ಕಾಣದಂತೆ ನಡೆಯಬೇಕಾದ ದುಸ್ಥಿತಿ ಒದಗಿ ಬಂದಿದೆ. ಇನ್ನು ಎನ್‍ಐಟಿಕೆ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಇಲ್ಲಿ ನಡೆದಾಡುವಂತಿಲ್ಲ, ನಿಲ್ಲುವಂತಿಲ್ಲ. ಯಾಕೆಂದರೆ ಅವರನ್ನೂ ವೇಶ್ಯೆಯರೆಂದು ಭಾವಿಸಿ ವಾಹನ ಸವಾರರು ಕರೆಯುವುದು ಮಾಮೂಲಾಗಿದೆ.

ಹೆದ್ದಾರಿಯ ಕೆಲವೇ ಮೀ. ದೂರದ ಕಂಪೌಂಡ್ ಹೊರಗಡೆಯೇ ನಿರ್ಲಜ್ಜ ರೀತಿಯಲ್ಲಿ ಸೆಕ್ಸ್ ದಂಧೆ ನಡೆಸ್ತಾ ಇರೋ ಇವರ ಬಗ್ಗೆ ಹತ್ತಿರದ ಠಾಣೆಯ ಪೊಲೀಸರಿಗೆ ತಿಳಿದಿಲ್ಲವೆಂದೇನಲ್ಲ. ಮಂಗಳಮುಖಿಯರು ನಿಂತಲ್ಲಿಯೇ ನಿಧಾನಕ್ಕೆ ಸುರತ್ಕಲ್ ಠಾಣೆಯ ಬೀಟ್ ವಾಹನ ಹತ್ತಾರು ಬಾರಿ ಅತ್ತಿಂದಿತ್ತ ಸಂಚರಿಸುತ್ತದೆ. ಆದರೂ ಕೆಟ್ಟ ದಂಧೆಯನ್ನು ಯಾಕೆ ನಿಯಂತ್ರಿಸಿಲ್ಲ ಅನ್ನೋದು ಜನರ ಅನುಮಾನ.

ತಡರಾತ್ರಿ 12 ಗಂಟೆ ಕಳೆದರೂ ಇಲ್ಲಿ ದಂಧೆ ನಿರತವಾಗಿರುವ ಇವರಿಂದಾಗಿ ಪಾದಚಾರಿಗಳು, ವಾಹನ ಸವಾರರು, ಕಾಲೇಜ್ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ ಅಷ್ಟಿಷ್ಟಲ್ಲ. ಉಡುಪಿ ನೋಂದಣಿಯ ವಾಹನಗಳು, ಮೀನಿನ ಲಾರಿಗಳು, ಟ್ರಕ್‍ಗಳು ರಾತ್ರಿಯಾದಂತೆ ಇಲ್ಲಿ ರಾಶಿ ರಾಶಿ ನಿಲ್ಲುತ್ತಿದ್ದು ವಾಹನದೊಳಗಡೆಯೇ `ಕೆಲಸ’ ಪೂರೈಸಿ ಹೋಗುತ್ತಿದ್ದಾರೆ. ದಿನವೊಂದಕ್ಕೆ ಒಬ್ಬೊಬ್ಬರು ತಲಾ 10 ಸಾವಿರದಿಂದ 20 ಸಾವಿರ ರೂ. ಕಮಾಯಿ ಮಾಡುತ್ತಿದ್ದು ಇದರಲ್ಲಿ ಯಾರಿಗೆ ಎಷ್ಟು ಪಾಲಿದೆ ಎಂಬ ಪ್ರಶ್ನೆಗೆ ಪೊಲೀಸರೇ ಉತ್ತರಿಸಬೇಕಿದೆ.

ವಿದ್ಯಾರ್ಥಿಗಳು, ಯುವಜನರನ್ನು ಕೆಟ್ಟದಾರಿಗೆ ಎಳೆಯುವ ಇಂಥ ದಂಧೆಯನ್ನು ಮಟ್ಟಹಾಕಲು ಕಮಿಷನರ್ ಅವರೇ ಗಮನಹರಿಸಬೇಕಾದ ಅಗತ್ಯವಂತೂ ಸದ್ಯಕ್ಕಿದೆ. ಇಲ್ಲವಾದರೆ ಎನ್‍ಐಟಿಕೆ ಟೋಲ್ ಗೇಟ್ ಪರಿಸರದಲ್ಲಿ ಮುಂದೊಂದು ದಿನ ದರೋಡೆ, ಕೊಲೆಯಂಥ ಗಂಭೀರ ಕೃತ್ಯಗಳು ನಡೆದರೂ ಅಚ್ಚರಿ ಪಡಬೇಕಿಲ್ಲ.

ಸುರತ್ಕಲ್ ಪೊಲೀಸರಿಗೆ ಇದು “ಮಾಮೂಲಿ” :

ಸುರತ್ಕಲ್ ಠಾಣೆಯ ಸರಹದ್ದಿನಲ್ಲಿ ಮುಂಬೈ ಕಾಮಾಟಿಪುರವನ್ನು ಮೀರಿಸುವ ಹಾಗೇ ಬಿಂದಾಸ್ ಆಗಿ ವೇಶ್ಯಾವಾಟಿಕೆ ನಡೀತಿದ್ರು ಪೊಲೀಸರು ಮಾತ್ರ ಇದು “ಮಾಮೂಲಿ” ಎಂಬಂತೆ ಸುಮ್ಮನಿದ್ದಾರೆ. ರಾತ್ರಿ ಇಲ್ಲೇ ನಿಲ್ಲುವ ಪೊಲೀಸರ ಗಸ್ತು ವಾಹನ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದು ಜನರ ಆಕ್ರೋಶಕ್ಕೂ ಕಾರಣವಾಗಿದೆ.

ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರೋ ಶಿಕ್ಷಣ ಸಂಸ್ಥೆಯ ಕಾಪೌಂಡ್ ನಲ್ಲೆ ನಿರ್ಲಜ್ಜ ಕಾಮಕ್ರೀಡೆ ನಿತ್ಯ ನಡೆಯುತ್ತಿದ್ದರೂ ಪೊಲೀಸರು ಎಚ್ಛೆತ್ತುಕೊಂಡಿಲ್ಲ ಯಾಕೇ ಅನ್ನೋದು ಜನರ ಪ್ರಶ್ನೆ. ಮೊದಲೇ ಗಾಂಜಾ ಡ್ರಗ್ಸ್ ದಂಧೆಯ ಅಡ್ಡೆಯಾಗಿರುವ ಎನ್ ಐಟಿಕೆ, ಸುರತ್ಕಲ್ ನಲ್ಲಿ ವೇಶ್ಯಾವಾಟಿಕೆ ದಂಧೆ ಚಿಗಿತುಕೊಂಡಿರುವುದು ಊರಿನ ಹೆಸರಿಗೆ ಕಳಂಕ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.

Comments are closed.