ಕರಾವಳಿ

ವಿಶ್ವನಾಥ್ ಕೋಡಿಕಲ್ ನಿರ್ದೇಶನದ ಬಹುನಿರೀಕ್ಷಿತ “ಎನ್ನ” ತುಳು ಸಿನಿಮಾ ನಾಳೆ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ

Pinterest LinkedIn Tumblr

ಮಂಗಳೂರು, ಫೆಬ್ರವರಿ.14: ಗ್ಲೋರಿಯಸ್ ಆಂಜೆಲೋರ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ವಿಶ್ವನಾಥ್ ಕೋಡಿಕಲ್ ನಿರ್ದೇಶನದಲ್ಲಿ ತಯಾರಾಗಿರುವ ಬಹುನಿರೀಕ್ಷಿತ “ಎನ್ನ” ತುಳು ಸಿನಿಮಾ ನಾಳೆ(ಫೆ. 1 ರಂದು) ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ವಿಶ್ವನಾಥ್ ಕೋಡಿಕಲ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನಿಮಾಸ್, ಪಿವಿ‌ಆರ್, ಸಿನಿಪೊಲೀಸ್, ಸುರತ್ಕಲ್‌ನಲ್ಲಿ ನಟರಾಜ್, ಉಡುಪಿಯಲ್ಲಿ ಅಲಂಕಾರ್, ಮಣಿಪಾಲ್, ಪುತ್ತೂರು, ಬೆಳ್ತಂಗಡಿ, ಸುಳ್ಯ ಮೊದಲಾದ ಕಡೆ ಏಕಕಾಲದಲ್ಲಿ ಸಿನಿಮಾ ತೆರೆಕಾಣಲಿದೆ.

ಸಿನಿಮಾರಂಗದಲ್ಲಿ ಹೊಸ ಪ್ರತಿಭೆ ಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಎನ್ನ ಸಿನಿಮಾದಲ್ಲಿ ಬಹಳಷ್ಟು ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಎನ್ನ ಸಿನೆಮಾವನ್ನು ಕ್ಯಾನೆಟ್ ಮಾತಾಯಸ್ ಪಿಲಾರ್ ನಿರ್ಮಾಣ ಮಾಡಿದ್ದು ವಿಶ್ವನಾಥ್ ಕೋಡಿಕಲ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಎನ್ನ ಸಿನಿಮಾದ ಹಾಡೊಂದು ಬಿಡುಗಡೆಗೊಂಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಮೂಡಿಬಂದಿದೆ ಎಂದು ತಿಳಿಸಿದ್ದಾರೆ.

ಎನ್ನ ಸಿನೆಮಾ ಸೆನ್ಸಾರ್‌ನಲ್ಲಿ ಯಾವುದೇ ಕಟ್ಸ್ ಇಲ್ಲದೆ ಸೆನ್ಸಾರ್ ಮಂಡಳಿಯಿಂದ ಯು ಎ ಸರ್ಟಿಫಿಕೇಟ್ ದೊರೆತಿದೆ. ಒಟ್ಟು 173ಹೊಸ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದರೆ. ಇದಲ್ಲದೆ ಕೋಸ್ಟಲ್ ವೂಡ್‌ನಲ್ಲಿ ಪ್ರಥಮ ಬಾರಿಗೆ ಮಹಿಳೆ ಯೊಬ್ಬರು ಛಾಯಾಗ್ರಹಣ ಮಾಡಿದ್ದೂ ಈ ಸಿನಿಮಾದ ಮತ್ತೊಂದು ವಿಶೇಷ. ಎನ್ನ ಸಿನಿಮಾಕ್ಕೆ ವೈಶಾಲಿ ಎಸ್ ಉಡುಪಿ ಛಾಯಾಗ್ರಹಣ ಮಾಡಿದ್ದೂ ಅನುಷ್ ಚಂದ್ರ ಸಂಕಲನ ಮಾಡಿದ್ದಾರೆ.

ಲೋಯ್ ವೆಲೆಂಟಿನ್ ಸಂಗೀತ ನಿರ್ದೇಶನ ಮಾಡಿರೋ ಎನ್ನ ಸಿನಿಮಾಕ್ಕೆ ಲೋಯ್ ವೆಲೆಂಟಿನ್ ಹಾಗು ಶಿಲ್ಪಾ ಕ್ಯೂಟಿನೊ ಹಾಡುಗಳನ್ನ ಹಾಡಿದ್ದಾರೆ. ಪ್ರಶಾಂತ್ ಸಿ ಕೆ ಹಾಗು ವಿಶ್ವನಾಥ್ ಕೋಡಿಕಲ್ ಸಂಭಾಷಣೆ ಬರೆದಿದ್ದು ಮ್ಯಾಕ್ಸಿಮ್ ಪಿರೇರಾ ಹಾಗು ಧನುಷ್ ಬಜಾಲ್ ಇವರ ಸಾಹಿತ್ಯ ಇದೆ ಎಂದು ವಿಶ್ವನಾಥ್ ಕೋಡಿಕಲ್ ಅವರು ಚಿತ್ರದ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಒಂದಕ್ಕಿಂತ ಒಂದು ವಿಭಿನ್ನ ಪೋಸ್ಟರ್ಸ್ ಗಳಿಂದ ಜನರ ಮನಗೆಲ್ಲುತ್ತಿರೋ ಎನ್ನ ಸಿನಿಮಾದ ಪೋಸ್ಟರ್ಸ್ ನ ಎಡಿಟಿವ್ ಕ್ರಿಯೇಷನ್ಸ್ ಡಿಸೈನ್ ಮಾಡಿದ್ದೂ ಸಿನಿಮಾಕ್ಕೆ ದಿಶಾಂತ್ ಉಜಿರೆ, ವಿನಯ್ ಉಜಿರೆ, ಭವ್ಯ ಶ್ರೀ ಕುಡುಪು, ಸತ್ಯವತಿ ಶೆಟ್ಟಿ, ಭಾರ್ಗವಿ ಕಲ್ಲಡ್ಕ ಹಾಗು ಗಣೇಶ್ ಪೈ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮ್ಯಾಕ್ಸಿಮ್ ಪಿರೇರಾ ಇವರ ಸಹ ನಿರ್ದೇಶನ ಇರುವ ಎನ್ನ ಸಿನಿಮಾಕ್ಕೆ ರಾಜೇಶ್ ಕಾರ್ಯಕಾರಿ ನಿರ್ವಹಣೆಯ ಜವಾಬ್ದಾರಿಯನ್ನ ಹೊತ್ತಿದಾರೆ.

ಎನ್ನ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ವಿನೀತ್ ಕುಮಾರ್, ಶ್ರುತಿ ಪೂಜಾರಿ, ಅಶ್ಮಿತ್ ರಾಜ್,ಪ್ರತೀಕ್ ಸನಿಲ್, ಪ್ರಶಾಂತ್ ಸಿ ಕೆ, ಧೀರಜ್ ನೀರ್‌ಮಾರ್ಗ, ಯತೀಶ್ ಪಾಲಡ್ಕ, ವಿನೋದ್ ಚಾರ್ಮಾಡಿ, ಗಾಡ್ವಿನ್ ಕ್ಯಾಸ್ಟಲಿನೋ, ಸಂದೀಪ್ ಶೆಟ್ಟಿ ರಾಯ್, ರಮೇಶ್ ರೈ ಕುಕ್ಕುವಳ್ಳಿ, ಕಾನ್ಯೂಟ್ ಮಾತಾಯಸ್ , ಜೋಸೆಫ್ ಮತಾಯಸ್ , ಸುಜಾತಾ ಶೆಟ್ಟಿ, ಕವಿತಾ ದಿನಕರ್, ಸ್ವಾತಿ ಕಾಪು ಅಭಿನಯಿಸಿದರೆ. ಪೃಥ್ವಿ ಅಂಬರ್ ವಿಶೇಷ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಕರೋಪಾಡಿ ಅಕ್ಷಯ ನಾಯಕ್ ಇವರ ಸ್ಥಿರ ಚಿತ್ರಣ ಇದ್ದು ಶ್ವೇತಾ ಅರೆಹೊಳೆ ಇವರ ನೃತ್ಯ ಸಂಯೋಜನೆ ಇದೆ. ಧ್ವನಿಮುದ್ರಣ ಜಿಟೋನ್ ಬಿಕರ್ನಕಟ್ಟೆ ಸೌಂಡ್ ಎಂಜಿನಿಯರ್ ಆಗಿ ರೈನಲ್ ಹಾಗೂ ಮ್ಯಾಕ್ಲಿನ್ ಡಿಸೋಜ ಕಾರ್ಯ ನಿರ್ವಹಿಸಿದ್ದಾರೆ.

Comments are closed.