ಕರಾವಳಿ

ಮಂಗಳೂರು : ಕರಾವಳಿ ಉತ್ಸವದಲ್ಲಿ ಖ್ಯಾತ ಕಲಾವಿದರ ಚಿತ್ರ ಪ್ರದರ್ಶನ

Pinterest LinkedIn Tumblr

ಮಂಗಳೂರು ಫೆಬ್ರವರಿ 11 : ಕರಾವಳಿ ಉತ್ಸವ 2019-20ರ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ವಸ್ತುಪ್ರದರ್ಶನದಲ್ಲಿ ಕರಾವಳಿ ಚಿತ್ರಕಲಾ ಚಾವಡಿ (ರಿ) ಮಂಗಳೂರು ಫೆಬ್ರವರಿ 23 ವರೆಗೆ ಪ್ರದರ್ಶನ ಇರುತ್ತದೆ. ಈ ಪ್ರದರ್ಶನದಲ್ಲಿ 30 ಕಲಾವಿದರ ಚಿತ್ರ ಕಲಾಕೃತಿಗಳನ್ನು ಪ್ರದರ್ಶಿಸಿಲಾಗುವುದು.

ಕರಾವಳಿಯಸಾಂಸ್ಕೃತಿಕ ವೈಭವ ಮಣ್ಣಿನ ಸೊಗಡಿನ ವೈಶಿಷ್ಟವನ್ನು ತುಂಬಿಕೊಂಡು ಚಿತ್ರ್ರಕಲಾಕೃತಿಗಳನ್ನು ರಚಿಸಿರುವರು, ಹೆಚ್ಚಿನ ಕಲಾಕೃತಿಗಳು ಅಕ್ರೆಲಿಕ್ ಮಾಧ್ಯಮದಲ್ಲಿ ರಚಿಸಲ್ಪಟ್ಟವುಗಳಾಗಿವೆ.

ಅಧ್ಯಕ್ಷರಾಗಿ ಕೋಟಿ ಪ್ರಸಾದ್ ಆಳ್ವ, ಉಪಾಧ್ಯಕ್ಷರಾಗಿ ಗಣೇಶ ಸೋಮಾಯಾಜಿ, ಕಾರ್ಯದರ್ಶಿಯಾಗಿ ಅನಂತ ಪದ್ಮನಾಭ ರಾವ್, ಸಂಯೋಜಕರಾದ ಜಾನ್ ಚಂದ್ರನ್ ಹಾಗೂ ಚಿತ್ರಕಲಾ ಛಾವಡಿಯ 28 ಕಲಾವಿದರು ಭಾಗವಹಿಸಿರುತ್ತಾರೆ.

ಮಂಗಳೂರು ಮಹಾನಗರ ಪಾಲಿಕೆ ಉಪ ಜಂಟಿ ಆಯುಕ್ತ(ಆಡಳಿತ) ಸಂತೋಷ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿಸರ್ಗ ಫೌಂಡೇಶನ್‍ನ ಮಂಜುನಾಥ್ ಡಿ ಉಪಸ್ಥಿತರಿದ್ದರು.

ಫೆಬ್ರವರಿ 23 ವರೆಗೆ ಪ್ರತಿದಿನ ಸಂಜೆ 4 ಗಂಟೆಗೆ ಪ್ರಾರಂಭವಾಗುತ್ತದೆ. ಕರಾವಳಿ ವಸ್ತುಪ್ರದರ್ಶನದಲ್ಲಿ ಅಮ್ಯೂಸ್‍ಮೆಂಟ್, ಆಹಾರ ಮಳಿಗೆಗಳು, ಗೃಹೋಪಕರಣಗಳು, ಆಹಾರ ತಿನಿಸುಗಳು ಅಕರ್ಷಣೀಯ ಕೇಂದ್ರ್ರಬಿಂದುವಾಗಿದ್ದು, ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳು ವಿದ್ಯಾರ್ಥಿ ಶಾಲಾ ಗುರುತು ಚೀಟಿ ತೋರಿಸಿದ್ದಲ್ಲಿ ಅಮ್ಯೂಸ್‍ಮೆಂಟ್ ಆಟದಲ್ಲಿ 50% ರಿಯಾಯತಿ ನೀಡಲಾಗುವುದು. (ವಾಟರ್‍ಬೋಟ್, ಧೂಮ್ ಬೈಕ್, ಜಂಪರ್, ಬೌನ್ಸರ್, ಪಿಗ್ಗಿ ಟ್ರೈನ್, ಹೆಲಿಕಾಪ್ಟರ್) ಸುಮಾರು 13ಕ್ಕೂ ಅಧಿಕ ಮಾದರಿಯ ಅಮ್ಯೂಸ್‍ ಮೆಂಟ್‍ಗಳು ಕರಾವಳಿಯ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡಿರುತ್ತದೆ.

Comments are closed.