ಕರಾವಳಿ

ಅಂಬುಲೆನ್ಸ್‍ನಲ್ಲಿ ರಸ್ತೆ ಮಧ್ಯೆ ಸುರಕ್ಷಿತ ಹೆರಿಗೆ : ತಾಯಿ ಮತ್ತು ಮಗು ಆರೋಗ್ಯ

Pinterest LinkedIn Tumblr

ಮಂಗಳೂರು ಫೆಬ್ರವರಿ 08 :ಮಂಗಳೂರು ಫೆಬ್ರವರಿ 6 ರಂದು ಕುಳ್ಳಾ ಯಿಂದ ರಾತ್ರಿ ಸುಮಾರು 11.10 ಗಂಟೆಗೆ ಹೆರಿಗೆ ನೋವು ಎಂದು ಕರೆ ಬಂದಾಗ ಸುರತ್ಕಲ್ ನಿಂದ 108 ಆಂಬುಲೆನ್ಸ್ ಕುಳಾಯಿಗೆ ತಲುಪಿದ್ದು ರೋಗಿಯನ್ನು ಆಂಬುಲೆನ್ಸ್ ನಲ್ಲಿ ಕುಳ್ಳಿರಿಸಿ ಮಂಗಳೂರು ಲೇಡಿಗೋಷನ್ ಆಸ್ಪತ್ರೆ ಹೋಗುವಾಗ ರಸ್ತೆ ಮಾರ್ಗದಲ್ಲಿ ಅಂದರೆ ಪಣಂಬೂರು ಎಂಬಲ್ಲಿ ಹೆರಿಗೆ ನೋವು ಜಾಸ್ತಿ ಕಾಣಿಸಿಕೊಂಡು ಅಂಬುಲೆನ್ಸ್ ಶುಶ್ರೂಷಕ ಅವಿನಾಶ್, ಚಾಲಕ ಬಶೀರ್ ಅಹ್ಮದ್ ಖಾನ್ ಸುರಕ್ಷಿತ ಹೆರಿಗೆ ಆಂಬುಲೆನ್ಸ್‍ನಲ್ಲಿ ಮಾಡಿದರು.

ನಂತರ ತಾಯಿ ಮತ್ತು ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇಲ್ಲಿಗೆ ದಾಖಲು ಮಾಡಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಮಂಗಳೂರು 108 ಅಂಬುಲೆನ್ಸ್ ಸರ್ವಿಸ್, ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

Comments are closed.