ಕರಾವಳಿ

ಸುರತ್ಕಲ್ : ಬಿಜೆಪಿ ಕಾರ್ಯಕರ್ತನ ಕೊಲೆಯತ್ನ – ಆರೋಪಿಗಳ ಸೆರೆ

Pinterest LinkedIn Tumblr

ಮಂಗಳೂರು: ಬಿಜೆಪಿ ಸಕ್ರಿಯ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆಗೈದು ಕೊಲೆಯತ್ನ ನಡೆಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಸುರತ್ಕಲ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುರತ್ಕಲ್ ಠಾಣಾ ವ್ಯಾಪ್ತಿಯ ಮುಂಚೂರು ಎಂಬಲ್ಲಿ ಕಳೆದ ಮಂಗಳವಾರ ತಡರಾತ್ರಿ ಘಟನೆ ನಡೆದಿತ್ತು.

ಮುಂಚೂರು ನಿವಾಸಿ ಯಶೋಧರ(28) ಎಂಬವರ ಮೇಲೆ ಸ್ಥಳೀಯ ನಾಲ್ವರು ಹಲ್ಲೆಗೈದು ಕೊಲೆಗೆ ಯತ್ನಿಸಿದ್ದರು. ಗಂಭೀರ ಗಾಯಗೊಂಡ ಅವರನ್ನು ಪದ್ಮಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಯಶೋಧರ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು ಸ್ಥಳೀಯವಾಗಿ ಪಕ್ಷ ಸಂಘಟನೆಯಲ್ಲಿ ದುಡಿಯುತ್ತಿದ್ದರು ಎನ್ನಲಾಗಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆ ಸಂದರ್ಭ ಪಕ್ಷದ ಪರ ದುಡಿದಿದ್ದ ಇವರ ಮೇಲೆ ಕಣ್ಣಿಟ್ಟಿದ್ದ ತಂಡ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.

ದಿವಾಕರ್, ದಿನೇಶ್ ಶೆಟ್ಟಿ, ಅಶ್ವಿತ್ ಕುಲಾಲ್, ಯಶೋಧರ ಅಗರಮೇಲು ಬಂಧಿತ ಆರೋಪಿಗಳಾಗಿದ್ದು ಸುರತ್ಕಲ್ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ಮೇಲೆ ಸೆಕ್ಷನ್ 307ರನ್ವಯ ಕೊಲೆಯತ್ನ ಪ್ರಕರಣ ದಾಖಲಾಗಿದೆ.

Comments are closed.