ಕರಾವಳಿ

ಪರಿಶಿಷ್ಟರ ಕಾರ್ಯಕ್ರಮದ ಪ್ರಗತಿ ಪರಿಶೀಲನೆ : ಒಟ್ಟು 10 ಯೋಜನೆಗಳಲ್ಲಿ ಶೇಕಡಾ 96.82% ಪ್ರಗತಿ

Pinterest LinkedIn Tumblr

ಮಂಗಳೂರು ಫೆಬ್ರವರಿ 08 : ಅನುಸೂಚಿತ ಜಾತಿ ಉಪ ಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆಯ ಮೇಲ್ವಿಚಾರಣಾ ಸಮಿತಿ ಸಭೆ ಸಹಾಯಕ ಲೆಕ್ಕಾಧಿಕಾರಿ ಶಾರದ ಇವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಅನುಸೂಚಿತ ಜಾತಿ ಉಪ ಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆಯ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳ ಜೊತೆ ರಾಜ್ಯ ಮತ್ತು ಜಿಲ್ಲಾ ವಲಯಗಳ ಕಾರ್ಯಕ್ರಮಗಳ ಪ್ರಗತಿ ವರದಿಯ ಬಗ್ಗೆ ಚರ್ಚಿಸಲಾಯಿತು.

ಕೃಷಿ ಇಲಾಖೆ, ಗಿರಿಜನ ಉಪ ಯೋಜನೆ ಪ್ರಗತಿ ವರದಿಯ ಪ್ರಕಾರ ರಾಜ್ಯ ವಲಯದಲ್ಲ್ಲಿ ಮಣ್ಣಿನ ಸತ್ವ ಹೆಚ್ಚಿಸುವಿಕೆ ಕ್ರಾರ್ಯಕ್ರಮದಲ್ಲಿ ಒಟ್ಟು 99.29%, ಕೃಷಿ ಯಾಂತ್ರೀಕರಣದಲ್ಲಿ 95.68%, ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆ 100%, ಕೃಷಿ ಪರಿಕರ ಮತ್ತು ಗುಣ ನಿಯಂತ್ರಣ ಯೋಜನೆ 100%, ಕರಾವಳಿ ಪ್ಯಾಕೇಜ್ 98.99%, ಕೃಷಿ ಭಾಗ್ಯ ಯೋಜನೆಯಲ್ಲಿ 0%, 2019-20ನೇ ಸಾಲಿನ ತಾಂತ್ರಿಕ ಉತ್ತೇಜನಕರಿಗೆ ಗೌರವ ಧನ 70% ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಯೋಜನೆಯಡಿ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮ 94.17%, ಪಿ.ಎಮ್.ಕೆ.ಎಸ್.ವೈ ಯೋಜನೆ 97.34%, ಎಸ್.ಎಮ್.ಎ.ಎಮ್. ಯೋಜನೆಯಡಿ 98.68% ಒಟ್ಟು 10 ಯೋಜನೆಗಳಲ್ಲಿ ಶೇಕಡಾ 96.82% ಪ್ರಗತಿ ಸಾಧಿಸಿದ್ದು ಜಿಲ್ಲಾ ವಲಯದಲ್ಲಿ ಗಿರಿಜನ ಉಪ ಯೋಜನೆ ತಾಲೂಕು ಪಂಚಾಯತ್‍ನಲ್ಲಿ 99%, ಕೃಷಿ ಯಾಂತ್ರೀಕರಣದಲ್ಲಿ 100% ಪ್ರಗತಿ ಸಾಧಿಸಿದೆ.

ಪರಿಶಿಷ್ಟ ವರ್ಗಗಳ ಉಪಯೋಜನೆಯಲ್ಲಿ ಜಿಲ್ಲಾ ವಲಯ ಪ್ರಗತಿ ವರದಿಯ ಪ್ರಕಾರ ತೋಟಗಾರಿಕೆ ಇಲಾಖೆ ಗಿರಿಜನ ಉಪಯೋಜನೆ ಕಾರ್ಯಕ್ರಮದಡಿ 88% ಪ್ರಗತಿಯಾಗಿದೆ ಎಂದು ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿ ತಿಳಿಸಿದರು.

ಸಾಮಾಜಿಕ ಅರಣ್ಯ ವಲಯ ಮಂಗಳೂರು, ವಿಶೇಷ ಘಟಕ ಯೋಜನೆ ಪ್ರಗತಿ ವರದಿಯನ್ವಯ ರಾಜ್ಯ ವಲಯದಲ್ಲಿ 2019-20ನೇ ಸಾಲಿನಲ್ಲಿ ಆಯ್ದ ಫಲಾನುಭವಿಗಳಿಗೆ ಸೋಲಾರ್ ಲ್ಯಾಂಪ್ ಅಳವಡಿಸುವ ಕಾರ್ಯಕ್ರಮದಲ್ಲಿ ಅರ್ಹ 7 ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಸಭೆಗೆ ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆ, ವಿಶೇಷ ಘಟಕ ಯೋಜನೆ ಪ್ರಗತಿ ವರದಿಯನ್ವಯ ರಾಜ್ಯ ವಲಯದಲ್ಲಿ 41.98% ಪ್ರಗತಿ ಸಾಧಿಸಿದರೆ, ಜಿಲ್ಲಾ ವಲಯದಲ್ಲಿ ಒಟ್ಟು 100% ಪ್ರಗತಿ ಸಾಧಿಸಿದೆ. ಪ.ವರ್ಗಗಳ ಉಪಯೋಜನೆಯಲ್ಲಿ ರಾಜ್ಯ ವಲಯದಲಿ ್ಲ35.47% ಸಾಧಿಸಿದರೆ ಜಿಲ್ಲಾವಲಯದಲ್ಲಿ 100% ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಂಬಂಧಪಟ್ಟ ಮಹಾನಗರಪಾಲಿಕೆ ಅಧಿಕಾರಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಫೆಬ್ರವರಿ 2020ರ ವಿಶೇಷ ಘಟಕ ಯೋಜನೆ ಪ್ರಗತಿ ವರದಿ ಪ್ರಕಾರ, ಪೂರಕ ಪೌಷ್ಠಿಕ ಆಹಾರ ನೀಡುವಲ್ಲಿ 90.65%, ಉದ್ಯೋಗಿನಿ ಕಾರ್ಯಕ್ರಮದಡಿ ಒಂದು ಫಲಾನುಭವಿಯ ಅರ್ಜಿ ಮಂಜೂರಾಗಿದ್ದು ತರಬೇತಿ ಆಗಿರುತ್ತದೆ, ಭಾಗ್ಯಲಕ್ಷ್ಮೀ ಯೋಜನೆಯಡಿ 2019-20 ರ ಸಾಲಿನಲ್ಲಿ ಈವರೆಗೆ ಯಾವುದೇ ಅರ್ಜಿಗಳು ಬಂದಿರುವುದಿಲ್ಲ, ಸ್ತ್ರೀ ಶಕ್ತಿ ಯೋಜನೆಯಡಿ 1 ಗುಂಪು ರಚನೆಯಾಗಿದ್ದು ಪ್ರಗತಿ ಹಂತದಲ್ಲಿದ್ದು, ವಿಪರೀತ ಕಡಿಮೆ ತೂಕದ ಮಕ್ಕಳು ಮಾಹಿತಿಯ ಪ್ರಕಾರ ವಿಪರೀತ ಕಡಿಮೆ ತೂಕದ ಮಕ್ಕಳಿಗೆ ವಾರದ 5 ದಿನ ಮೊಟ್ಟೆ ಹಾಗೂ ಹಾಲು ವಿತರಿಸುತ್ತಿದ್ದು, 2019-20ನೇ ಸಾಲಿನಲ್ಲಿ ಇಲಾಖೆಯಿಂದ ವೈದ್ಯಕೀಯ ವೆಚ್ಚ ರೂ. 2 ಸಾವಿರ ಭರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಹೇಳಿದರು.

ಪ್ರ.ವರ್ಗಗಳ ಉಪ ಯೋಜನೆ ಪ್ರಗತಿ ವರದಿ ಪ್ರಕಾರ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಲ್ಲಿ 49.59% ಪ್ರಗತಿ ಸಾಧಿಸಿದ್ದು, ಉದ್ಯೋಗಿನಿ ಕಾರ್ಯಕ್ರಮದಡಿ ಒಂದು ಫಲಾನುಭವಿಯ ಅರ್ಜಿ ಮಂಜೂರಾಗಿದ್ದು ತರಬೇತಿ ಆಗಿರುತ್ತದೆ ಜೊತೆಗ ಸ್ತ್ರೀ ಶಕ್ತಿ ಯೋಜನೆಯಡಿ 100% ಪ್ರಗತಿ ಸಾಧಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಪ್ರವಾಸೋಧ್ಯಮ ಇಲಾಖೆಯ ರಾಜ್ಯ ವಲಯ ವಿಶೇಷ ಘಟಕ ಯೋಜನೆ ಪ್ರಗತಿ ವರದಿಯನ್ವಯ ಶೇಕಡಾ 100% ಪ್ರಗತಿ ಸಾಧಿಸಿದೆ. ಪ.ವರ್ಗಗಳ ಉಪಯೋಜನೆ ಪ್ರಗತಿ ವರದಿಯ ಪ್ರಕಾರ ಪ್ರವಾಸಿ ಟ್ಯಾಕ್ಸಿಗೆ 2019-20ನೇ ಸಾಲಿನಲ್ಲಿ 6 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಸಹಾಯಕ ಪ್ರವಾಸೋಧ್ಯಮ ಇಲಾಖೆ ಅಧಿಕಾರಿ ಹರಿಶ್ಚಂದ್ರ ಸಭೆಗೆ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2019-20ನೇ ಸಾಲಿನ ವಿಶೇಷ ಘಟಕ ಯೋಜನೆಯ ಕಾರ್ಯಕ್ರಮಗಳ ರಾಜ್ಯ ವಲಯ ಪ್ರಗತಿ ವರದಿಯನ್ವಯ 11% ಪ್ರಗತಿ ಸಾಧಿಸಿದೆ. ಜಿಲ್ಲಾ ವಲಯದಲ್ಲಿ 40.73% ಪ್ರಗತಿ ಸಾಧಿಸಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ತಿಳಿಸಿದರು.

ಸಭೆಯಲ್ಲಿ ತಾಲೂಕು ಮಟ್ಟದ ಮೇಲ್ವಿಚಾರಕ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತಾ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.