ಕರಾವಳಿ

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಬೆಳೆಯಲಿ : ವಿವಿಯಲ್ಲಿ ಬಯಲು ರಂಗಮಂದಿರ ಉದ್ಘಾಟಿಸಿ ಮಹಾಬಲೇಶ್ವರ ಭಟ್

Pinterest LinkedIn Tumblr

ಮಂಗಳೂರು : 150ನೇ ವರ್ಷಾಚರಣೆಯ ಅತ್ಯಪರೂಪದ ಸಂಧರ್ಭದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜು ಮುಂದಿನ 150 ವರ್ಷಕ್ಕೆ ಬೇಕಾದ ತಯಾರಿ ನಡೆಸಬೇಕಿದೆ, ಎಂದು ಕರ್ಣಾಟಕ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಮಹಾಬಲೇಶ್ವರ ಭಟ್ ಎಂ. ಎಸ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಬುಧವಾರ ಸಂಜೆ ಕಾಲೇಜಿನ ಆವರಣದಲ್ಲಿ ನಡೆದ 17.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಬಯಲು ರಂಗಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ರಂಗಮಂದಿರ ಇಡೀ ನಗರಕ್ಕೆ ಸಹಾಯಕವಾಗಲಿದೆ. ಬ್ಯಾಂಕ್ ಹಿಂದಿನಿಂದಲೂ ಸಮಾಜಮುಖಿಯಾಗಿದೆ. ಈ ಪ್ರವೃತ್ತಿ ಎಲ್ಲರಲ್ಲೂ ಬಂದಾಗ ಅಭಿವೃದ್ಧಿ ಸಾಧ್ಯ”, ಎಂದರು. ಇದೇ ಸಂಧರ್ಭದಲ್ಲಿ ಕಾಲೇಜಿನ ವತಿಯಿಂದ ಮಹಾಬಲೇಶ್ವರ ಭಟ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ಧ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಫ್ರೋ ಎ.ಎಂ ಖಾನ್, ಬ್ಯಾಂಕ್ ನ ಈ ಕೊಡುಗೆ ವಿದ್ಯಾರ್ಥಿಗಳಿಗೂ ಪಾಠವಾಗಬೇಕು. 150 ನೇ ವರ್ಷಾಚರಣೆಯಲ್ಲಿರುವ ಕಾಲೇಜಿನ ಗ್ರಂಥಾಲಯ ಸದ್ಯದಲ್ಲೇ ಡಿಜಿಟಲೀಕರಣವಾಗಲಿದೆ. ಕಟ್ಟಡದ ದುರಸ್ಥಿ ಮತ್ತು ಹೊಸ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯಕ್ಕೂ ವಿಶ್ವವಿದ್ಯಾನಿಲಯ ಧನಸಹಾಯ ಒದಗಿಸಲಿದೆ, ಎಂದು ಭರವಸೆ ನೀಡಿದರು.

ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಪ್ರಾಂಶುಪಾಲ ಡಾ. ಉದಯ ಕುಮರ್ ಎಂ.ಎ, ಹೊಸ ರಂಗಮಂದಿರದಿಂದ ಕಾಲೇಜಿನ ಇತಿಹಾಸಕ್ಕೆ ಹೊಸ ಪುಟ ಸೇರಿದಂತಾಗಿದೆ. ಇನ್ನಷ್ಟು ಪ್ರತಿಭೆಗಳು ಈ ರಂಗಮಂದಿರದ ಮೂಲಕ ಬದುಕಿನ ಎತ್ತರಕ್ಕೆ ಏರುವಂತಾಗಲಿ ಎಂದರು. ಕಾರ್ಯಕ್ರಮದ ಅಂಗವಾಗಿ ರಂಗಮಂದಿರ ನಿರ್ಮಿಸಿದ ಉಡುಪಿ ನಿರ್ಮಿತಿ ಕೇಂದ್ರದ ಸಚಿನ್ ಕುಮಾರ್ ಅವರನ್ನು ಗೌರವಿಸಲಾಯಿತು. ಜೊತೆಗೆ ಅಶೋಕ್, ಜಯರಾಮ್, ದೇವರಾಜ್, ದೇವಾನಂದ, ವೀರೇಶ್ ಮತ್ತು ರಾಜೇಶ್ ಅವರಿಗೂ ನೆನಪಿನ ಕಾಣಿಕೆ ನೀಡಲಾಯಿತು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈವಿದ್ಯ ನಡೆಯಿತು.

ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಲ್ ಎನ್. ಶರತ್ ಭಂಡಾರಿ, ನಿಖಟಪೂರ್ವ ಅಧ್ಯಕ್ಷ ಧರ್ಮಣ ನಾಯಕ್, ಕರ್ಣಾಟಕ ಬ್ಯಾಂಕ್ ನ ಹಿರಿಯ ಅಧಿಕಾರಿಗಳು, ಹಿರಿಯ ಪ್ರಾಧ್ಯಾಪಕಿ ಸುಧಾ ಎನ್ ವೈದ್ಯ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಫ್ರೋ.. ಬಿ. ಎಮ್ ರಾಮಕೃಷ್ಣ ಧನ್ಯವಾದ ಸಮರ್ಪಿಸಿದರು.

Comments are closed.