ಕರಾವಳಿ

ಪತ್ರಕರ್ತರ ಕೆಲಸದ ಕ್ಷೇತ್ರ ಪಾರದರ್ಶಕವಾಗಿ, ಮಾಧ್ಯಮ ಕ್ಷೇತ್ರ ಇನ್ನಷ್ಟು ಪರಿಪಕ್ವವಾಗಿ ಬೆಳೆಯಬೇಕು : ಸಚಿವ ಪೂಜಾರಿ

Pinterest LinkedIn Tumblr

ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಪ್ರಬಲ ಅಂಗವಾಗಿ ಬೆಳೆಯಬೇಕಾದರೆ ಪತ್ರಕರ್ತರು ಸಮಾಜದ ಒರೆಕೊರೆಗಳನ್ನು ತಿದ್ದಲು ಹೆಚ್ಚು ಗಮನಹರಿಸಬೇಕು. ಪತ್ರಕರ್ತ ಕೆಲಸದ ಕ್ಷೇತ್ರ ಪಾರದರ್ಶಕವಾಗಿ ಮಾಧ್ಯಮ ಕ್ಷೇತ್ರ ಇನ್ನಷ್ಟು ಪರಿಪಕ್ವವಾಗಿ ಬೆಳೆಯಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಕೋಟ ಹೇಳಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಯ ಸಭಾಂಗಣದಲ್ಲಿ ದ. ಕ. ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯ ದಲ್ಲಿ ಮಾರ್ಚ್ 7 ಹಾಗೂ 8ರಂದು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆಯಲಿರುವ ಪತ್ರಕರ್ತರ 35 ನೇ ರಾಜ್ಯ ಸಮ್ಮೇಳನದ ವೆಬ್ ಸೈಟ್ ಅನಾವರಣಗೊಳಿಸಿ ಮಾತನಾಡಿದರು.

ವಿಧಾನಸಭೆ ಹಾಗೂ ರಾಜ್ಯ ಸಭಾ ಸದನದಲ್ಲಿ ನಾವು‌ ಮಾಧ್ಯಮ ಇರುವಾಗ ಎಚ್ಚರಿಕೆಯಿಂದ ಇರುತ್ತೇವೆ. ಮಾಧ್ಯಮ ಪ್ರಜಾ ಪ್ರಭುತ್ವದಲ್ಲಿ ನಾಲ್ಕನೆ ಅಂಗವಾಗಿದ್ದು ಸಾಮಾಜಿಕ ಜವಾಬ್ದಾರಿ ಯನ್ನು ಹೊಂದಿದೆ. ಸಮಾಜಕ್ಕೆ ಉಪಯೋಗ ಗುವ ರೀತಿಯಲ್ಲಿ ಮಾಧ್ಯಮ ಕಾರ್ಯಚರಿಸಿ ಜನರ ಪ್ರಶಂಸೆಗೆ ಪಾತ್ರವಾಗಲಿ. ನಿಷ್ಪಕ್ಷಪಾತ ವಿಚಾರಗಳನ್ನು ಪ್ರಕಟಿಸಲಿ. ಪತ್ರಕರ್ತ ರ ರಾಜ್ಯ ಸಮ್ಮೇಳನ ಯಶಸ್ವಿಯಾಗಲಿ. ಪೂರ್ಣ ಸಹಕಾರ ನೀಡಲಾಗುವುದು ಎಂದರು.

ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಈ ಕಾರ್ಯಕ್ರಮ ಕ್ಕೆ ಪೂರ್ವಭಾವಿಯಾಗಿ ಸಭೆ ಸಂಘಟಿಸಿ ರಾಜ್ಯ ಸಮ್ಮೇಳನಕ್ಕೆ ಸಿದ್ದತೆ ನಡೆಸಲಾಗಿದೆ. ಜಿಲ್ಲಾಡಳಿತ ದಿಂದ ಉತ್ತಮ ಸಹಕಾರ ಸಿಕ್ಕಿದೆ.‌ಮುಂದೆಯೂ ಸಮ್ಮೇಳನದ ಪೂರ್ಣ ಯಶಸ್ಸಿಗೆ ಸಹಕಾರ ನೀಡಬೇಕು ಎಂದರು.ರಾಜ್ಯ ಸಮ್ಮೇಳನ ಹೊಸ ಸಂದೇಶ ನೀಡಲಿ‌‌‌‌‌‌‌ ಎಂದು ಹೇಳಿದರು .

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಗ್ರೀನ್ ಮಂಗಳೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಸಕರಾದ  ವೇದವ್ಯಾಸ ಕಾಮತ್, ಡಾ ಭರತ್ ಶೆಟ್ಟಿ , ಯು ಟಿ ಖಾದರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್,   ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.

Comments are closed.