ರಾಷ್ಟ್ರೀಯ

ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ; ಮುಗುಳ್ನಗೆ ಬೀರುತ್ತಾ ಬಂದ ಸಚಿವೆ ನಿರ್ಮಲಾ ಸೀತಾರಾಮನ್

Pinterest LinkedIn Tumblr

ನವದೆಹಲಿ: ಇಡೀ ದೇಶ ನಿರೀಕ್ಷೆ ಮಾಡುವ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ವಿತ್ತ ಖಾತೆ ಸಚಿವ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ ಹಣಕಾಸು ಸಚಿವಾಲಯಕ್ಕೆ ಆಗಮಿಸಿ ಬಜೆಟ್ ಪ್ರತಿಗಳನ್ನು ಸುತ್ತಿದ ಕೆಂಪು ಬಣ್ಣದ ಬಹಿ-ಖಾಟಾವನ್ನು ಹಿಡಿದುಕೊಂಡು ಮುಗುಳ್ನಗೆ ಬೀರುತ್ತಾ ತಮ್ಮ ತಂಡದೊಂದಿಗೆ ಸಚಿವಾಲಯದ ಹೊರಗೆ ಬಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ನಿಂತುಕೊಂಡರು.

ಇಂದು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ 2020-21ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಅದಕ್ಕೂ ಮುನ್ನ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಸಂಪ್ರದಾಯದಂತೆ ಒಪ್ಪಿಗೆ ಪಡೆದರು. ಇಂದು ಬೆಳಗ್ಗೆ 10.15ಕ್ಕೆ ಬಜೆಟ್ ಮಂಡನೆಗೆ ಮುನ್ನ ಸಂಸತ್ತು ಭವನದಲ್ಲಿ ಸಂಪುಟ ಸಭೆ ನಡೆಯಲಿದೆ.

Comments are closed.