ಕರಾವಳಿ

ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರಿಂದ ಜನ ಜಾಗೃತಿ ಸಮಾವೇಶದ ಸ್ಥಳ ಪರಿಶೀಲನೆ

Pinterest LinkedIn Tumblr

ಮಂಗಳೂರು, ಜನವರಿ.26 : ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಜನ ಜಾಗೃತಿಗಾಗಿ ಸೋಮವಾರ ಕೂಳೂರು ಗೋಲ್ಡ್ ಫಿಂಚ್‌ ಸಿಟಿ ಮೈದಾನದಲ್ಲಿ ನಡೆಯಲಿರುವ ಬೃಹತ್ ಜನ ಜಾಗೃತಿ ಸಮಾವೇಶದ ವೇದಿಕೆ ಮತ್ತು ಸಭಾಂಗಣವನ್ನು ರವಿವಾರ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರು ವಿವಿಧ ಬಿಜೆಪಿ ಮುಖಂಡರ ಜೊತೆ ಪರಿಶೀಲನೆ ನಡೆಸಿದರು.

ಇದೇ ವೇಳೆ ಬೃಹತ್ ಜನ ಜಾಗೃತಿ ಸಮಾವೇಶದ ವೇದಿಕೆ ಮತ್ತು ಸಭಾಂಗಣವನ್ನು ವೀಕ್ಷಿಸಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಕುಮಾರ್ ಶೆಟ್ಟಿ ಅವರು ಕೆಲವೊಂದು ಸಲಹೆ ಸೂಚನೆ ಗಳನ್ನೂ ನೀಡಿದರು.

ಈ ಸಂಧರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ, ಮುಖಂಡರಾದ ರವಿಶಂಕರ್ ಮಿಜಾರ್, ಜಗದೀಶ ಶೇಣವ,ಸಂದೇಶ ಶೆಟ್ಟಿ, ಸಂಜಯ ಪ್ರಭು,. ತಿಲಕ್ ರಾಜ್ ಮತ್ತಿತರರು ಹಾಜರಿದ್ದರು .

Comments are closed.