ಕರಾವಳಿ

ಗಣರಾಜ್ಯೋತ್ಸವ ಸಮಾರಂಭ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಸೇರಿದಂತೆ ವಿವಿಧ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು ಜನವರಿ 26 : ನಗರದ ನೆಹರೂ ಮೈದಾನದಲ್ಲಿ ರವಿವಾರ ಗಣರಾಜ್ಯೋತ್ಸವ ಸಮಾರಂಭ ಹಾಗು ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಲಾಯಿತು. 2019-20ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಇಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ವಿತರಿಸಲಾಯಿತು.

ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ದ.ಕ. ಜಿಲ್ಲೆಯ 10 ಮಂದಿಗೆ ಸರ್ವೋತ್ತಮ‌ ಪ್ರಶಸ್ತಿ ಪ್ರದಾನಿಸಲಾಯಿತು ಹಾಗು 32 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಾಸಕರಾದ ಯುಟಿ‌ ಖಾದರ್, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಭೋಜೇಗೌಡ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬ್ಯಾರಿ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್, ತುಳು ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಐಜಿಪಿ ಅರುಣ್ ಚಕ್ರವರ್ತಿ, ಪೊಲೀಸ್ ಆಯುಕ್ತ ಡಾ. ಹರ್ಷ, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಜಿಪಂ ಸಿಇಒ ಸೆಲ್ವಮಣಿ, ಎಸ್ಪಿ ಲಕ್ಷ್ಮಿಪ್ರಸಾಸ್ ಮತ್ತಿತರರು ಉಪಸ್ಥಿತರಿದ್ದರು.

2019-20ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಅಯ್ಕೆಯಾದ ಸಾಧಕರ ವಿವರ:

– ಏಳಿಂಜೆ ಲಯನ್‌ ಎಂ.ಜೆ.ಎಫ್‌.ವೈ ಯೋಗೀಶ್‌ ರಾವ್‌ – ಮಂಗಳೂರು- ಸಮಾಜಸೇವೆ
– ಎನ್‌.ಎಸ್‌. ಉಮೇಶ್‌ ದೇವಾಡಿಗ – ಮಂಗಳೂರು – ಸಮಾಜಸೇವೆ
– ಋತ್ವಿಕ್‌ ಅಲೆವೂರಾಯ ಕೆ.ವಿ – ಮಂಗಳೂರು – ಕ್ರೀಡಾ ಕ್ಷೇತ್ರ
– ಪ್ರದೀಪ್‌ ಕುಮಾರ್‌ – ಮಂಗಳೂರು – ಕ್ರೀಡಾ ಕ್ಷೇತ್ರ
– ರಕ್ಷಿತ್‌ ಶೆಟ್ಟಿ – ಮಂಗಳೂರು – ಕ್ರೀಡಾ ಕ್ಷೇತ್ರ
– ಸರಯೂ ಬಾಲ ಯಕ್ಷವೃಂದ ಮಕ್ಕಳ ಮೇಳ – ಮಂಗಳೂರು – ಕಲಾ ಕ್ಷೇತ್ರ ಸಂಘ ಸಂಸ್ಥೆ
– ಗಂಗಾಧರ ಪುತ್ರನ್‌‌ ಯಾನೆ ಗಂಗೇಶ್‌ ಬೋಳಾರ್‌ – ಮಂಗಳೂರು – ಪರಿಸರವಾದಿ
– ಕುಮಾರಿ ಅನಘಾ- ಮಂಗಳೂರು – ಕ್ರೀಡಾ ಕ್ಷೇತ್ರ
– ಲಕ್ಷ್ಮೀ ನಾರಾಯಣ ಯಾನೆ ಅಣ್ಣು ಪೂಜಾರಿ – ಮಂಗಳೂರು – ಕಲಾ ಕ್ಷೇತ್ರ
– ಶ್ರೀ ವಿನಾಯಕ ಫ್ರೆಂಡ್ಸ್‌ ಕ್ಲಬ್‌ – ಮಂಗಳೂರು – ಸಮಾಜಸೇವೆ ಸಂಘ ಸಂಸ್ಥೆ
– ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಮಂಗಳೂರು – ಮಂಗಳೂರು – ಸಮಾಜಸೇವೆ ಸಂಘ ಸಂಸ್ಥೆ
– ಬಿರುವೆರ್‌ ಕುಡ್ಲ (ರಿ) ಮಂಗಳೂರು – ಮಂಗಳೂರು – ಸಮಾಜಸೇವೆ ಸಂಘ ಸಂಸ್ಥೆ
– ಎಂ. ಅದ್ವಿಕ ಶೆಟ್ಟಿ – ಮಂಗಳೂರು – ಕಲಾ ಕ್ಷೇತ್ರ
– ಎಚ್‌.ಕೆ ನಯನಾಡು – ಬಂಟ್ವಾಳ – ಕಲೆ ಮತ್ತು ಸಾಹಿತ್ಯ
– ಪ್ರಶಾಂತ್‌ ಜೋಗಿ – ಬಂಟ್ವಾಳ – ಕಲಾ ಕ್ಷೇತ್ರ
– ಅಶೋಕ್‌ ಪೊಳಲಿ – ಬಂಟ್ವಾಳ – ಕಲಾ ಕ್ಷೇತ್ರ
– ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್‌- ಮುಲ್ಕಿ- ಸಾಹಿತ್ಯ ಕ್ಷೇತ್ರ
– ವಿದ್ವಾನ್‌ ಎ. ರಘುನಾಥ ಸೇರಿಗಾರ – ಮೂಡಬಿದಿರೆ – ಕಲಾಕ್ಷೇತ್ರ
– ಎಸ್‌.ಕೆ. ಆನಂದ ಕುಮಾರ್‌ – ಪುತ್ತೂರು – ಸಮಾಜಸೇವೆ
– ಜಗದೀಶ ಆಚಾರ್ಯ- ಪುತ್ತೂರು – ಕಲಾ ಕ್ಷೇತ್ರ
– ರಾಜೇಶ್‌ ವಿಟ್ಲ – ಬಂಟ್ವಾಳ – ಕಲಾ ಕ್ಷೇತ್ರ
– ಶ್ರೀಧರ ಗೌಡ ಕೆಂಗುಡೇಲು – ಬೆಳ್ತಂಗಡಿ – ಸಮಾಜಸೇವೆ
– ವಸಂತ ಸಾಲಿಯಾನ – ಬೆಳ್ತಂಗಡಿ – ಸಮಾಜಸೇವೆ
– ಸುರೇಶ್‌ ರೈ ಸೂಡಿಮುಳ್ಳು – ಕಡಬ – ಸಮಾಜಸೇವೆ
– ವೆಂಕಪ್ಪ ಕಾಜವ – ಬಂಟ್ವಾಳ – ಸಮಾಜಸೇವೆ
– ಸೇವಾ ಭಾರತಿ ಸಂಸ್ಥೆ – ಬೆಳ್ತಂಗಡಿ – ಸಮಾಜಸೇವೆ ಸಂಘ ಸಂಸ್ಥೆ
– ಡಾ. ಉಮ್ಮರ್‌ – ಬೀಜದಕಟ್ಟೆ – ಸುಳ್ಯ – ಸಮಾಜಸೇವೆ
– ನಾರಾಯಣ ನಾಯಕ್‌ – ಬಂಟ್ವಾಳ
– ತಾರನಾಥ ಪಂಬದ – ಬಂಟ್ವಾಳ
– ಭರತ್‌ ಕುಮಾರ್‌ – ಮಂಗಳೂರು
– ಸ್ಟ್ಯಾನ್ಲಿ ಪಿಂಟೋ – ಬ್ಯೂರೋ ಚೀಫ್‌, ಟೈಮ್ಸ್‌ ಆಫ್‌ ಇಂಡಿಯಾ -ಪರ್ತಕರ್ತರು
– ಪುಂಡಲೀಕ ಪೈ – ಆಜ್‌ ತಕ್‌‌ ಚಾನಲ್‌, ಮಂಗಳೂರು – ಪರ್ತಕರ್ತರು.

Comments are closed.