ಕರಾವಳಿ

ಕರಾವಳಿ ಉತ್ಸವ ಇಂದು ಸಂಜೆ ಸಮಾರೋಪ : ಇಂದಿನ ಕಾರ್ಯಕ್ರಮಗಳ ವಿವರ

Pinterest LinkedIn Tumblr

ಮಂಗಳೂರು ಜನವರಿ 19 : ಕರಾವಳಿ ಉತ್ಸವ ಸಮಾರೋಪ ಸಮಾರಂಭ ದಿನಾಂಕ :19-01-2020 ರಂದು ಸಂಜೆ ಪಣಂಬೂರ್ ಬೀಚ್‍ನಲ್ಲಿ ನಡೆಯಲಿದೆ. ಕರಾವಳಿ ಉತ್ಸವದಲ್ಲಿ ಇಂದು ನಡೆಯುವ ಕಾರ್ಯಕ್ರಮಗಳ ವಿವರ:

ಜನವರಿ 19 ರಂದು ಕದ್ರಿ ಉದ್ಯಾನವನದಲ್ಲಿ: ಬೆಳಿಗ್ಗೆ 6 ಗಂಟೆಯಿಂದ 7.30 ರವರೆಗೆ ದೇವಿಕಾ ಯೋಗ ಕೇಂದ್ರ, ಮಂಗಳೂರು ಇವರಿಂದ ಯೋಗ ಪ್ರದರ್ಶನ, ಬೆಳಿಗ್ಗೆ 7 ಗಂಟೆಯಿಂದ 8 ರವರೆಗೆ ವಿಭಾನಾಯಕ್ ಮಂಗಳೂರು ಮತ್ತು ತಂಡದಿಂದ ಉದಯರಾಗ ಕಾರ್ಯಕ್ರಮ.

ಸಂಜೆ 6 ಗಂಟೆಯಿಂದ 7.30 ರವರೆಗೆ ಅಮಿತ್ ಕುಮಾರ್ ಮತ್ತು ತಂಡ ಮಂಗಳೂರು ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ದಾಸವಾಣಿ, ಸಂಜೆ 7.30 ಗಂಟೆಯಿಂದ 9 ರವರೆಗೆ ಆರಾಧನ ಡ್ಯಾನ್ಸ್ ಅಕಾಡೆಮಿ, ಭುವನೇಶ್ವರ ಇವರಿಂದ ಗೋಟಿಪುವ ಸಮೂಹ ನೃತ್ಯ ಕಾರ್ಯಕ್ರಮ ನಡೆಯಲಿದೆ.

ವಸ್ತು ಪ್ರದರ್ಶನ ವೇದಿಕೆಯಲ್ಲಿ (ಕರಾವಳಿ ಉತ್ಸವ ಮೈದಾನ): ಸಂಜೆ 6 ಗಂಟೆಯಿಂದ 7.30 ರವರೆಗೆ ಆರಾಧನ ನೃತ್ಯ ಕೇಂದ್ರ, ಮೂಡಬಿದ್ರೆ ಇವರಿಂದ ನೃತ್ಯ ರಂಜನಿ, ಸಂಜೆ 7.30 ಗಂಟೆಯಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ(ರಿ), ಕಾಸರಗೋಡು ಇವರಿಂದ ಯಕ್ಷಗಾನ ಬೊಂಬೆಯಾಟ – ನರಕಾಸುರ ವಧೆ ನಡೆಯಲಿದೆ.

ಜನವರಿ 19 ರಂದು ಪಣಂಬೂರು ಬೀಚಿನಲ್ಲಿ: ಬೆಳಿಗ್ಗೆ 5 ಗಂಟೆಗೆ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ವತಿಯಿಂದ ಯೋಗ ಕಾರ್ಯಕ್ರಮ, ಬೆಳಿಗ್ಗೆ 6 ಗಂಟೆಯಿಂದ ಸ್ವರಾಲಯ ಸಾಧನಾ ಶಿಬಿರ ಇವರಿಂದ ವಯಲಿನ್ ವಾದನ, ಬೆಳಿಗ್ಗೆ 8 ರಿಂದ ಸರ್ಫಿಂಗ್ ಸ್ಪರ್ಧೆ, 8 ಗಂಟೆಗೆ ಸ್ಟ್ಯಾಂಡ್ ಅಪ್ ಪೆಡ್ಲಿಂಗ್, ಬೆಳಿಗ್ಗೆ 10 ಗಂಟೆಗೆ ಹಗ್ಗ ಜಗ್ಗಾಟ, ಮರಳಿನ ಆಕೃತಿ ರಚನೆ ನಡೆಯಲಿದೆ.

ಮಧ್ಯಾಹ್ನ 3 ಗಂಟೆಗೆ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ-ಟೀಂ ಮಂಗಳೂರ್ ವತಿಯಿಂದ, ಸಂಜೆ 5 ಗಂಟೆಗೆ ಕರಾವಳಿ ಉತ್ಸವ ಸಮಾರೋಪ ಸಮರಂಭ, ಸಂಜೆ 6 ಗಂಟೆಗೆ ಉದಯೋನ್ಮುಖ ಚಲನ ಚಿತ್ರ ಹಿನ್ನೆಲೆ ಗಾಯಕಿ ಸುಪ್ರಿಯಾ ಲೋಹಿತ್ ಲೈವ್ ಕಾರ್ಯಕ್ರಮ ನಡೆಯಲಿದೆ.

Comments are closed.