ಕರಾವಳಿ

ಅಳಪೆ ಉತ್ತರ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು : ಅಳಪೆ ಉತ್ತರ ವಾರ್ಡಿನ ಕನ್ನಗುಡ್ಡೆಯಲ್ಲಿ 20 ಲಕ್ಷ ರೂಪಾಯಿ ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಕನ್ನಗುಡ್ಡೆ ಗೆಳೆಯರ ಬಳಗದ ಬಳಿ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಇಲ್ಲಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿತ್ತು. ಈ ತೋಡಿನ ಮೇಲ್ಭಾಗದಲ್ಲಿ ಕೆಲವು ಮನೆಗಳಿದ್ದು ತೋಡಿನ ತಡೆಗೋಡೆ ಕುಸಿದು ಬೀಳುವ ಆತಂಕವಿತ್ತು. ಅದಕ್ಕಾಗಿ ಅನುದಾನ ಒದಗಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರವು ಬಿಜೆಪಿ ಸರಕಾರದ ಆಡಳಿತ ಬಂದ ಮೇಲೆ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಂಗಳೂರಿನ ಕುರಿತು ವಿಶೇಷ ಕಾಳಜಿಯಿದೆ. ಹಾಗಾಗಿ ಸರಕಾರ ಆಡಳಿತಕ್ಕೆ ಬಂದ ಕೂಡಲೇ ಮಂಗಳೂರು ಮಹಾನಗರ ಪಾಲಿಕೆಗೆ 100 ಕೋಟಿ ಅನುದಾನ ನೀಡಿದ್ದರು. ಇನ್ನು ಮುಂದಿನ ಕಾಮಗಾರಿಗಳಿಗೆ ಮತ್ತಷ್ಟು ಅನುದಾನ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಸ್ಥಳೀಯ ಪಾಲಿಕೆ ಸದಸ್ಯರಾದ ರೂಪಾ ಶ್ರೀ ಪೂಜಾರಿ, ಬಿಜೆಪಿ ಮುಖಂಡರಾದ ವಸಂತ್ ಜೆ ಪೂಜಾರಿ, ಪ್ರವೀಣ್ ನಿಡ್ಡೇಲ್, ಮಾಧವ ಕನ್ನಗುಡ್ಡೆ, ಸಂತೋಷ್ ಹೆಗ್ಡೆ, ರಾಜು, ಕಸ್ತೂರಿ, ಸಾರಿಕಾ, ಜಯಂತ್ ಕುಲಾಲ್, ಅಶ್ವಿತ, ರಘು, ಸತೀಶ್ ಕನ್ನಗುಡ್ಡೆ, ವಿಜಯ್, ಪಾಲಿಕೆ ಅಧಿಕಾರಿ ದರ್ಶನ್ ಹಾಗೂ ಗುತ್ತಿಗೆದಾರ ರಜಾಕ್ ಉಪಸ್ಥಿತರಿದ್ದರು.

Comments are closed.