ಕರಾವಳಿ

ಕರಾವಳಿ ಉತ್ಸವ : ಕದ್ರಿ ಪಾರ್ಕ್‍ನಲ್ಲಿ ಇಂದು ಮತ್ತು ನಾಳೆ 2 ದಿನಗಳ ಯುವ ಉತ್ಸವ

Pinterest LinkedIn Tumblr

ಮಂಗಳೂರು : ಕರಾವಳಿ ಉತ್ಸವ 2019-20 ರ ಅಂಗವಾಗಿ 2 ದಿನಗಳ ಕರಾವಳಿ ಯುವ ಉತ್ಸವವು ಜನವರಿ 16 ಮತ್ತು 17 ರಂದು ಕದ್ರಿ ಪಾರ್ಕ್‍ನ ತೆರೆದ ರಂಗಮಂದಿರದಲ್ಲಿ ನಡೆಯಲಿದೆ.

ಜನವರಿ 16 ರಂದು ಸಚಿಜೆ 5 ಗಂಟೆಗೆ ಕರಾವಳಿ ಯುವ ಉತ್ಸವದ ಉದ್ಘಾಟನೆ ನಡೆಯಲಿದ್ದು, ಶಾಸಕ ವೇದವ್ಯಾಸ ಕಾಮತ್ ಡಿ. ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ. ಜೆ. ರೂಪ, ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್, ಚಾಂಪಿಯನ್ ಕಾಮನ್ ವೆಲ್ತ್ ಪವರ್ ಲಿಫ್ಟಿಂಗ್ ಪ್ರದೀಪ್ ಕುಮಾರ್ ಆಚಾರ್ಯ, ಖ್ಯಾತ ತುಳು ಚಲನಚಿತ್ರ ನಟಿ ನವ್ಯ ಪೂಜಾರಿ, ಇವರು ಭಾಗವಹಿಸಲಿದ್ದಾರೆ.

ಕರಾವಳಿ ಯುವ ಉತ್ಸವ 2019-20ರ ಅಂಗವಾಗಿ ದ.ಕ. ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಯ ಆಡಿಶನ್‍ನಲ್ಲಿ ಆಯ್ಕೆಗೊಂಡ ವೈಯಕ್ತಿಕ ಮತ್ತು ಸಮೂಹ ಸ್ಪರ್ಧೆಗಳ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿವೆ. 16 ರಂದು ಶಾಸ್ತ್ರೀಯ ಮತ್ತು ಪಾಶ್ಚಾತ್ಯ/(ನವೀನ) ನೃತ್ಯ, ವಾದ್ಯ ಸಂಗೀತ, ಯಕ್ಷ ಯುಗಳ ನೃತ್ಯ ಸ್ಪರ್ಧೆಗಳು ನಡೆಯುತ್ತವೆ ಹಾಗೂ 17 ರಂದು ಲಘು ಸಂಗೀತ, ಶಾಸ್ತ್ರೀಯ ಸಂಗೀತ, ಮೂಕಾಭಿನಯ, ಕಿರುನಾಟಕ, ಜಾನಪದ ನೃತ್ಯ ಹಾಗೂ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆಗಳು ನಡೆಯುತ್ತವೆ.

ಕರಾವಳಿ ಯುವ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮವು 17 ರ ರಾತ್ರಿ 9 ಗಂಟೆಗೆ ನಡೆಯಲಿದ್ದು, ಅಧ್ಯಕ್ಷತೆ ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ, ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ, ಎಂ. ಜೆ. ರೂಪ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಎಸ್, ಡಾ. ಅಪ್ಪಾಜಿ ಗೌಡ ಎಸ್. ಬಿ. ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಚೇರಿ ಮಂಗಳೂರು ಇವರು ಭಾಗವಹಿಸಲಿದ್ದಾರೆ.

ಕರಾವಳಿ ಯುವ ಉತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಅತ್ಯುತ್ತಮ ಕರಾವಳಿ ಕಾಲೇಜು, ಪ್ರಥಮ, ದ್ವಿತೀಯ, ತೃತೀಯ, ಹಾಗೂ ಅತ್ಯುತ್ತಮ ಕರಾವಳಿ ಯುವಕ ಮತ್ತು ಅತ್ಯುತ್ತಮ ಕರಾವಳಿ ಯುವತಿ ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವಿಜೇತರಿಗೆ ಮತ್ತು ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ಕರಾವಳಿ ಯುವ ಉತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಜಂಟಿ ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರಾವಳಿ ಯುವ ಉತ್ಸವದ ಕಾರ್ಯಾಧ್ಯಕ್ಷ ಡಾ. ಪಿ. ದಯಾನಂದ ಪೈ ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್ ಸಿ. ಇವರು ನೀಡಲಿದ್ದಾರೆ.

ಕರಾವಳಿ ಯುವ ಉತ್ಸವವನ್ನು ನಿರ್ವಹಿಸಲು ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ನೋಡಲ್ ಕಾಲೇಜಾಗಿದ್ದು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಶೇಷಪ್ಪ ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಕೃಷ್ಣಪ್ರಭ ಎಂ. ಇವರು ಸಂಚಾಲಕರಾಗಿದ್ದಾರೆ ಎಂದು ಕರಾವಳಿ ಯುವ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

Comments are closed.