ಕರಾವಳಿ

ಮಂಗಳೂರಿನ ಅಮೃತಾನಂದಮಯಿ ಮಠದಲ್ಲಿ ಅಮೃತ ಆರೋಗ್ಯ ಮೇಳ : ವೈದ್ಯಕೀಯ ,ಸ್ವಾಸ್ಥ್ಯ ಸೇವೆಗಳ ಮಹಾ ಸಂಭ್ರಮ 

Pinterest LinkedIn Tumblr

ಮಂಗಳೂರು : ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವೈದ್ಯಕೀಯ ಸೇವಾ ವಿಭಾಗದ ವತಿಯಿಂದ ಭಾನುವಾರ ಬೃಹತ್ ಬಹುವೈವಿಧ್ಯ ವೈದ್ಯಕೀಯ ಹಾಗೂ ಸ್ವಾಸ್ಥ್ಯ ಸೇವೆಗಳ ಮಹಾ ಸಂಭ್ರಮ ಜರುಗಿತು. ಮಠಾಧಿಪತಿ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರ ಸಾರಥ್ಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ದೇವಿಯವರ ನಿರ್ದೇಶನಾನು ಸಾರ ಸುವ್ಯವಸ್ಥಿತ ಸ್ವಾಸ್ಥ್ಯ ಸೇವೆಗಳನ್ನು ಹಮ್ಮಿಕೊಳ್ಳಲಾಯಿತು.

ಪೂರ್ವಾಹ್ನ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಪೂಜೆಸಲ್ಲಿಸಿ ಪ್ರಾರ್ಥನೆಗೈದು ಅಮೃತೇಶ್ವರಿ ಸಭಾಂಗಣದಲ್ಲಿ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರು ಜ್ಯೋತಿ ಬೆಳಗಿಸುವುದರೊಂದಿಗೆ ಚಾಲನೆ ನೀಡಲಾಯಿತು.

ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ದೇವಿ, ಸೇವಾ ಸಮಿತಿಯ ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ,ರೋಟರಿ ಕ್ಲಬ್ ಮಂಗಳೂರು ಅಧ್ಯಕ್ಷ ಶ್ರೀ ಜತಿನ್ ಅತ್ತಾವರ್,ಡಾ.ಸನತ್ ಹೆಗ್ಡೆ, ಕಾರ್ಪೋರೇಟರ್ ಶ್ರೀ ಜಗದೀಶ್ ಶೆಟ್ಟಿ,,ಡಾ.ಸುಚಿತ್ರಾರಾವ್,ಡಾ.ದೇವದಾಸ್, ಸುರೇಶ್ ಅಮಿನ್, ಪಂಕಜ್ ವಸಾನಿ, ಪ್ರೊ.ವಿನೀತಾ ರೈ, ಮೊದಲಾದವರು ವೇದಿಕೆಯಲ್ಲಿದ್ದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಆರೋಗ್ಯ ಇಲಾಖೆಗಳ ವಿವಿಧ ಸೇವಾ ಘಟಕಗಳು, ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ಆಸ್ಪತ್ರೆ, ಅತ್ತಾವರ, ಆಯುಷ್ ಇಲಾಖೆಯ ಆಯುರ್ವೇದ , ಯೆನಪೋಯ ಹೋಮಿಯೋಪತಿ ಆಸ್ಪತ್ರೆ, ಯೆನಪೋಯ ಮೆಡಿಕಲ್ ಕಾಲೇಜು ,ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಬಿಜೈ, ಬಂದರ್,ಕಸಬಾ ಬೆಂಗರೆಗಳ ವಿವಿಧ ತಜ್ಞ ವೈದ್ಯರು, ಶುಶ್ರೂಷಕರು, ಲ್ಯಾಬ್ ಟೆಕ್ನೀಶಿಯನ್ ಗಳು, ಅಲ್ಲದೆ ನೇತ್ರ ,ದಂತ , ಎಲುಬು ಇತ್ಯಾದಿ ವಿವಿಧ ತಜ್ಞ ವೈದ್ಯಕೀಯ ತಂಡಗಳ ಸೇವೆ ಇಲ್ಲಿ ನೀಡಲಾಯಿತು.

ತಜ್ಞ ವೈದ್ಯಕೀಯ ಸೇವೆಗಳು ಮತ್ತು ಸೇವಾರ್ಥಿಗಳು:

*ಡಾ.ಶರತ್ ಕುಮಾರ್ ಮತ್ತು ತಂಡ- ಸ್ವಯಂ ಪ್ರೇರಿತ ರಕ್ತದಾನ ಶಿಬಿರ
*ಅಸಾಂಕ್ರಾಮಿಕ ರೋಗಗಳು:ಡಾ.ಸುಶ್ಮಾ ಅಡಪ್ಪಾ , ಡಾ.ತಫ್ಸಿಯಾ ಮತ್ತು ತಂಡ
*ನೇತ್ರ ತಪಾಸಣೆ, ಚಿಕಿತ್ಸೆ: ಡಾ.ಅನಿತಾ,ಡಾ.ರಾಧಾಕೃಷ್ಣ, ಡಾ.ರಾಮಾನುಜ ಮತ್ತು ಪಾರಾ ಮೆಡಿಕಲ್ ತಂಡ.
* ಉಚಿತ ಕನ್ನಡಕ ವಿತರಣೆ- ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರದ ಡಾ.ರತ್ನಾಕರ್ ಮತ್ತು ತಂಡ.
*ಮನಸ್ಸಿನ ಆರೋಗ್ಯ- ದುಶ್ಚಟಗಳ ದುಷ್ಪರಿಣಾಮಗಳ ನಿವಾರಣೆ : ಡಾ.ಅನಿರುಧ್ ಮತ್ತು ತಂಡ.
*ಕಿವಿ,ಮೂಗು ಮತ್ತು ಗಂಟಲು: ಡಾ.ಹೇಮಲತಾ, ಆಡಿಯೋಲಜಿ ವಿಭಾಗ ಮತ್ತು ಯೆನಪೋಯ ಆಸ್ಪತ್ರೆಯ ವೈದ್ಯರು.
*ಡಾ.ರಾಜೇಶ್ ಜಿ,ಪ್ರೊಫೆಸರ್, ಡಾ. ನಂದಿತಾ ಶೆಣೈ ಅಸೋಸಿಯೇಟ್ ಪ್ರೊಫೆಸರ್, ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಯನ್ಸಸ್ ಮತ್ತು ಆಸ್ಪತ್ರೆ ,ಅತ್ತಾವರ ಇವರಿಂದ ದಂತ ಚಿಕಿತ್ಸಾ ಸೇವೆ.
*ಚರ್ಮ ರೋಗ -ಡಾ.ನವೀನ್ ಮತ್ತು ತಂಡ
*ಸಾಮಾನ್ಯ ವೈದ್ಯಕೀಯ ಸೇವೆ-ಮಧುಮೇಹ ,ರಕ್ತದ ಒತ್ತಡ ಇತ್ಯಾದಿ ತಪಾಸಣೆ ಡಾ.ರಶ್ಮಿ, ಡಾ.ಶರತ್ ಬಾಬು ಮತ್ತು ತಂಡ
*ಕುಷ್ಠರೋಗ ತಪಾಸಣೆ ವಿಭಾಗದಿಂದ ಒಂದು ಕುಷ್ಠರೋಗ ಎಂದು ಗುರುತಿಸಲ್ಪಟ್ಟಿದೆ.
*ಮಕ್ಕಳ ಚಿಕಿತ್ಸಾ ವಿಭಾಗ-ಡಾ.ಶೈಲಜಾನಂದ್, ಡಾ.ಚಂದನಾ ಮತ್ತು ತಂಡ
* ಆಯುಷ್ ಇಲಾಖೆ- ಮಾತೃ ಆರೋಗ್ಯ ಸೇವೆ, ಆಯುರ್ವೇದ ಚಿಕಿತ್ಸೆ: ಡಾ. ಶೋಭಾರಾಣಿ ,ಡಾ.ಬಸವರಾಜ್ ಮತ್ತು ತಂಡ
*ಹೋಮಿಯೋಪತಿ ಚಿಕಿತ್ಸೆ- ಯೆನಪೋಯ ಹೋಮಿಯೋಪತಿ ಆಸ್ಪತ್ರೆ ವೈದ್ಯರ ತಂಡ
* ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ ಭಂಡಾರಿ ನೇತೃತ್ವದಲ್ಲಿ ನಗರ ಆರೋಗ್ಯ ಕೇಂದ್ರಗಳಿಂದ ಸೇವೆ: ವಿವಿಧ ತಪಾಸಣೆ, ಸಾರ್ವಜನಿಕರಿಗೆ ಆರೋಗ್ಯ ಮಾಹಿತಿ, ಅಗತ್ಯ ಸಲಹೆ-
ಲೇಡಿಹಿಲ್, ಬಿಜೈ, ಬಂದರ್ ಮತ್ತು ಬೆಂಗರೆ ಕೇಂದ್ರಗಳಿಂದ.
*ಎಲುಬಿನ ಸಾಂದ್ರತೆ ತಪಾಸಣೆ :200 ಕ್ಕೂ ಅಧಿಕ ಮಂದಿಗೆ
* ಎಲುಬು ಮತ್ತು ಸಂಧಿಗಳ ರೋಗತಪಾಸಣೆ, ಚಿಕಿತ್ಸೆ- ಡಾ.ಕೆ.ಆರ್.ಕಾಮತ್ ಮತ್ತು ತಂಡ
*ಹೌಸ್ ಕೀಪಿಂಗ್: ರತ್ನಾಕರ್ ಮತ್ತು ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ತಂಡ
*ಹೆಲ್ಪ್ ಡೆಸ್ಕ್: ಬಸವರಾಜ್ ಇವರಿಂದ
* ಹದಿಹರೆಯದವರ ಸಮಸ್ಯೆ (Adolescent clinic)ಡಾ.ಯು.ವಿ.ಶೆಣೈ, ಡಾ.ಹಿರೇಮಠ ಮತ್ತು ತಂಡ
* ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಗುರುತಿನ ಚೀಟಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಯಿತು.
*ಪ್ರೊ.ವಿನೀತ ರೈಯವರ ನೇತೃತ್ವದಲ್ಲಿ ರೋಶನಿ ನಿಲಯದ ಸಮಾಜ ಸೇವಾ ವಿಭಾಗದ ಶಿಕ್ಷಕರು, ವಿದ್ಯಾರ್ಥಿಗಳು
ಜೊತೆ ಸೇರಿ ಅತ್ಯುತ್ತಮ ರೀತಿಯಲ್ಲಿ ಸಮರ್ಪಣಾ ಭಾವದಿಂದ ಸೇವೆಗೈದು ಸ್ವಾಸ್ಥ್ಯ ಸಂಭ್ರಮದ ಮೂಲಕ ಸಾರ್ವಜನಿಕರ ಪ್ರೀತಿಗಳಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ.ಇಂತಹ ಕಾರ್ಯಕ್ರಮಗಳಿಂದ
ಸಂಭವನೀಯ ರೋಗಗಳ ಬಗ್ಗೆ ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನೀಡಲಾಗುವ ಸಲಹೆಗಳು ಆರೋಗ್ಯ ಪೂರ್ಣ ಜೀವನಕ್ಕೆ ಸಹಕಾರಿಯಾಗಿದೆ.

ಬೆಳ್ಳಿ ಹಬ್ಬದ ವರ್ಷಾಚರಣೆಗೆ ಅತ್ಯುತ್ತಮ ಸ್ಪೂರ್ತಿ ನೀಡಿದ ಸ್ವಾಸ್ಥ್ಯ ಸಂಭ್ರಮ :

ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಅವರು ಮಾತನಾಡಿ, ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ “ಅಮ್ಮ” ನವರು ಮಂಗಳೂರಿಗೆ ಪ್ರಥಮ ಪಾದಾರ್ಪಣೆ ಮಾಡಿ ಈ ವರ್ಷ ಇಪ್ಪತ್ತೈದನೇ ವರ್ಷವಾಗಿರುವ ಹಿನ್ನೆಲೆ, ಬ್ರಹ್ಮಸ್ಥಾನ ಪ್ರತಿಷ್ಠಾಪನೆಯ 12ನೇ ವರ್ಷ ಹಾಗೂ ಕಳೆದ ಎರಡು ದಶಕಗಳ ಸಮಾಜಮುಖಿ ಸೇವೆಗಳ ಪ್ರಯುಕ್ತ 2020ರಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆನ್ನುವ ನಮ್ಮ ಚಿಂತನೆಗೆ ಈ ಸ್ವಾಸ್ಥ್ಯ ಸಂಭ್ರಮದ ಅಭೂತಪೂರ್ವ ಯಶಸ್ಸು ಸ್ಪೂರ್ತಿದಾಯಕ ವೆನಿಸಿದೆ. ಇಲ್ಲಿ ಸೇವೆಗೈದುಸಹಕರಿಸಿದ ಹಾಗೂ ಆಗಮಿಸಿ ಕಾರ್ಯಕ್ರಮದ ಪ್ರಯೋಜನ ಪಡೆದ ಎಲ್ಲರಿಗೂ ಅಮ್ಮನವರ ಸಂಪೂರ್ಣ ಅನುಗ್ರಹ ದೊರೆಯುವಂತಾಗಲೆಂದು ಆಶಿಸುತ್ತೇವೆ ಎಂದು ಅವರು ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.

ವೆನ್ಲಾಕ್ ಆಸ್ಪತ್ರೆಯ ಉನ್ನತ ಮಟ್ಟದ ಸೇವೆಗಳನ್ನು ಎಲ್ಲಾ ವರ್ಗದ ಜನರು ಪಡೆಯಲು ಅರಿವು ಮೂಡಿಸುವ ಪ್ರಯತ್ನ : ಡಾ.ರಾಜೇಶ್ವರಿ ದೇವಿ, ಜಿಲ್ಲಾ ಸರ್ಜನ್.

ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ದೇವಿ ಮಾತನಾಡಿ, ಮಾತಾ ಅಮೃತಾನಂದಮಯಿ ಮಠದಲ್ಲಿ ಆಯೋಜಿಸಿದ ಅಮೃತ ಆರೋಗ್ಯ ಮೇಳ- ಸ್ವಾಸ್ಥ್ಯ ಸಂಭ್ರಮ ಕಾರ್ಯಕ್ರಮವು ವೆನ್ಲಾಕ್ ಆಸ್ಪತ್ರೆಯನ್ನು ಇನ್ನಷ್ಟು ಜನಪರ ಕಾರ್ಯಕ್ರಮಗಳೊಂದಿಗೆ ಇನ್ನಷ್ಟು ಜನಪ್ರಿಯಗೊಳಿಸುವುದು, ಅಲ್ಲಿ ದೊರೆಯುವ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳ ಪರಿಚಯವಿತ್ತು ಜನರು ಸರಕಾರದ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆಯುವಲ್ಲಿ ಸಹಕರಿಸುವುದು ನಮ್ಮ ಉದ್ದೇಶವಾಗಿದೆ .ನಮ್ಮ ಆಶಯಗಳನ್ನು ಸಾಕಾರಗೊಳಿಸಲು ಅಮ್ಮನವರ ದಿವ್ಯ ಸಾನಿಧ್ಯದಲ್ಲಿ ಉತ್ತಮ ಆರಂಭ ದೊರೆತಂತಾಗಿದೆ.ಇದಕ್ಕೆ ಅವಕಾಶವನ್ನು ನೀಡಿದ ಮಠಾಧಿಪತಿ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರಿಗೆ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿದರು. ಮುಂದೆ ಇತರ ಸ್ಥಳಗಳಲ್ಲೂ ಇಂತಹ ಕಾರ್ಯಕ್ರಮ ಆರಂಭಿಸಲು ಇದು ಮಾದರಿ ಎನಿಸಿದೆ ಎಂದರು.

ಸರಕಾರದ ಅಂಧತ್ವ ನಿವಾರಣಾ ಕಾರ್ಯಕ್ರಮದನ್ವಯ ತಪಾಸಣೆ ಮೂಲಕ ಪ್ರಾರಂಭಿಕ ಹಂತದಲ್ಲಿ ಡಯಾಬೆಟಿಕ್ ರೆಟಿನೋಪತಿ, ಕಣ್ಣಿನ ಪೊರೆ ಮೊದಲಾದ ಸಮಸ್ಯೆಗಳನ್ನು ಪತ್ತೆ ಹಚ್ಚಿ ಸಕಾಲದಲಿ ಚಿಕಿತ್ಸೆ ನೀಡಿ ಅಂಧತ್ವ ಬರದಂತೆ ಪ್ರಯತ್ನ ಮಾಡಲಾಗುತ್ತದೆ.

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಗುರುತಿನ ಚೀಟಿಯನ್ನು ವಿತರಣೆ ಮಾಡಿ ಎಲ್ಲಾ ವರ್ಗದ ಜನರಿಗೂ ಪ್ರಯೋಜನಕಾರಿ ಯಾಗಿದ್ದು ಅದರ ಬಗ್ಗೆ ಮಾಹಿತಿ ನೀಡಿ ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ ಎಂದು .ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ದೇವಿ ಹೇಳಿದರು. ಕಾರ್ಯಕ್ರಮದಲ್ಲಿ 2000ಕ್ಕೂ ಅಧಿಕ ಫಲಾನುಭವಿಗಳು ಇದರ ಪ್ರಯೋಜನ ಪಡೆದರು

Comments are closed.