ಕರಾವಳಿ

ಕುದ್ರೋಳಿ ವಾರ್ಡ್ ಅಭಿವೃದ್ಧಿಗೆ 1.22 ಕೋಟಿ ಅನುದಾನ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೇಸ್ ಆಡಳಿತ ಕೊನೆಗೊಂಡ ಮೇಲೆ ಕುದ್ರೋಳಿ ವಾರ್ಡಿನ ಸಾರ್ವಜನಿಕರ ಬೇಡಿಕೆಯಂತೆ ವಿವಿಧ ಕಾಮಗಾರಿಗಳಿಗೆ 1.22 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.

ಅಲ್ಪ ಸಂಖ್ಯಾತ ಕಲ್ಯಾಣ ನಿಧಿಯಿಂದ 60 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಕುದ್ರೋಳಿ ಸಿಪಿಸಿ ಕಂಪೌಂಡ್`ನಲ್ಲಿ ಒಳ ಚರಂಡಿ ಅಭಿವೃದ್ಧಿಗೆ 10 ಲಕ್ಷ, ಕುದ್ರೋಳಿ ಪ್ರೊಟೆಸ್ಟೆಂಟ್‌ ಚರ್ಚ್ ಬಳಿ ಇರುವ ಕಂಬಳ ಕ್ರಾಸ್ ಬಳಿ ಮಾಟ್ರಿಸ್ ಅಪಾರ್ಟ್ಮೆಂಟ್ ಬಳಿ 500 ಮೀಟರ್ ರಸ್ತೆ ಅಗಲೀಕರಣ ಹಾಗೂ ಒಳ ಚರಂಡಿ ರಚನೆ ಕಾಮಗಾರಿಗೆ 10.ಲಕ್ಷ, ಕರ್ಬಲ್ಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ, ವಿಶ್ರಾಂತಿ ನಿಲಯ ಚರ್ಚ್ ಬಳಿ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ ಅನುದಾನವನ್ನು ಜೋಡಿಸಲಾಗಿದೆ.

ಮಳೆಹಾನಿ ಪರಿಹಾರ ನಿಧಿಯಿಂದ 10 ಲಕ್ಷ ಬಿಡುಗಡೆಯಾಗಿದ್ದು ಬರ್ಕೆಯಿಂದ ಆಟೋಮೆಟ್ರಿಕ್ಸ್ ಅಪಾರ್ಟ್ಮೆಂಟ್ ವರೆಗೆ ರಾಜಕಾಲುವೆಯ ತಡೆಗೋಡೆ ದುರಸ್ತಿ ಕಾಮಗಾರಿಗೆ ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ವಿಶೇಷ ಅನುದಾನದಡಿ 30 ಲಕ್ಷ ಒದಗಿಸಲಾಗಿದೆ. ಅಳಕೆ ಮಾರುಕಟ್ಟೆಯ ಮುಂದುವರಿದ ಅಭಿವೃದ್ಧಿ ಕಾಮಗಾರಿಗಳಿಗೆ 30 ಲಕ್ಷ ಅನುದಾನ ನೀಡಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಿಂದ 15 ಲಕ್ಷ ಬಿಡುಗಡೆಗೊಳಿಸಲಾಗಿದೆ. ಬೊಕ್ಕಪಟ್ಣ ಶಾಲೆಯ ಬಳಿ ಮಳೆನೀರು ಚರಂಡಿ ಕಾಮಗಾರಿಗೆ 5 ಲಕ್ಷ, ಕುದ್ರೋಳಿ ಬಳಿ ಚರಂಡಿ ಕಾಮಗಾರಿಗೆ 5 ಲಕ್ಷ, ಕುದ್ರೋಳಿ ಬಳಿ ಒಳಚರಂಡಿ ಕೊಳವೆ ಮತ್ತು ಚರಂಡಿ ಕಾಮಗಾರಿ 5 ಲಕ್ಷ ನೀಡಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 4 ಲಕ್ಷ ಅನುದಾನ ನೀಡಲಾಗಿದ್ದು, ಕಂಪತ್ತ್ ಪಳ್ಳಿ ಮುಖ್ಯರಸ್ತೆಯಿಂದ ಕವಲೊಡೆದ ರೆಹಮತ್ ನಗರ,ಹೈದರಾಲಿ ಕಾಂಪೌಂಡ್,ಟಿಪ್ಪುಸುಲ್ತಾನ್ ನಗರ ಮತ್ತು ಜಾಮಿಯಾ ಮಸೀದಿಯ ಬಳಿ ಎಬಿಡಿ ಕೊಳವೆಯಿಂದ ಲಿಂಕಿಂಗ್ ಕಾಮಗಾರಿ ಮತ್ತು ಕೊಳವೆ ವಿಸ್ತರಣೆ ಕಾಮಗಾರಿಗೆ 2.50 ಲಕ್ಷ, ಕುದ್ರೋಳಿ ಪರಿಸರದ ನೀರಿನ ಅಭಿವೃದ್ಧಿಗಾಗಿ ಕೊಳವೆ ಲಿಂಕಿಂಗ್ ಕಾಮಗಾರಿಗೆ 1.50 ಲಕ್ಷ ಅನುದಾನ ನೀಡಲಾಗಿದೆ. ಹಾಗೂ ಈ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದೆ.

ತನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಜಿ.ಟಿ ರೋಡ್ ಮೋಡ ಪಟ್ಲ ಧೂಮಾವತಿ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಬಳಿ ಅಭಿವೃದ್ಧಿ ಕಾಮಗಾರಿಗೆ 3 ಲಕ್ಷ ನೀಡಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

Comments are closed.