ಕರಾವಳಿ

ವನ ರಾಶಿಯ ನಡುವೆ ಬನಶಂಕರಿ ದೇವಾಲಯ-ದೇವರ ಸೇವೆಯಲ್ಲಿ ದೇವಾಡಿಗ ಕುಟುಂಬ

Pinterest LinkedIn Tumblr

ಕುಂದಾಪುರ: ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅಪರೂಪವೆಂದೇ ಹೇಳ ಬಹುದಾದ ಸಯ್ಯಾದ್ರಿ ಸೇರಗಂಚಿನ ಹಚ್ಚ ಹಸುರಿನ ವನರಾಶಿಯ ಮಡಿಲಲ್ಲಿ ಕುಂದಾಪುರ ತಾಲೂಕು 74ನೆ ಉಳ್ಳೂರು ಗ್ರಾಮದಲ್ಲಿ ಬನಶಂಕರಿ ದೇವಾಲಯ ಇದೆ.

13-14ನೇ ಶತಮಾನದಷ್ಟು ಹಿಂದೆ ಉತ್ತರ ಕರ್ನಾಟಕದ ಬಾದಾಮಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಶಂಕರನಾರಾಯಣಯ್ಯ ಎಂಬವರು ಅಲ್ಲಿಂದ ಉಳ್ಳೂರು-74 ಗ್ರಾಮಕ್ಕೆ ಬಂದು ನೆಲೆಸಿದರು. ಬನಶಂಕರಿ ಅವರ ಆರಾಧ್ಯ ದೇವರಾಗಿದ್ದಳು. ಇವರು ಪ್ರತಿ ವರುಷ ಪುಷ್ಯ ಮಾಸ ಪೂರ್ಣಮಿ ಪರ್ವ ದಿನ ದಂದು ಬಾದಾಮಿಗೆ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದರು.

ತಮ್ಮ ಇಳಿ ವಯಸ್ಸಿನಲ್ಲಿ ದೇವಿಯನ್ನು ಪ್ರಾರ್ಥಿಸಿ ತಮ್ಮ ವಾಸ್ತವ್ಯದ ಸನಿಹ ದಲ್ಲೇ ಶ್ರೀ ದೇವಿಯ ಸಾನಿಧ್ಯವನ್ನು ಅನುಗ್ರಹಿಸುವಂತೆ ಕೇಳಿ ಕೊಂಡಾಗ ಅವರ ಪ್ರಾರ್ಥನೆ ಮನ್ನಿಸಿ ಪ್ರತ್ಯಕ್ಷಳಾದ ದೇವಿಯು ಉಳ್ಳೂರಿನ ಪ್ರಾಕೃತಿಕ ಸಸ್ಯ ಸಂಪತ್ತಿನಿಂದ ಕಂಗೊಳಿಸುವ ಉನ್ನತ ಸ್ಥಾನದಲ್ಲಿ ತನ್ನ ಬಿಂಬ ಸ್ಥಾಪಿಸುವಂತೆ ಅನುಗ್ರಹಿಸಿದಳು. ಇವರ ವಂಶಸ್ಥರು ಇವಾಗಲೂ ಉಳ್ಳೂರಿನಲ್ಲಿದ್ದು ಅವರ ಕುಲ ದೇವರಾದ ಬನಶಂಕರಿಯು ನಂತರ ಗ್ರಾಮ ದೇವತೆಯು ಆದಳು.  ಯುಧಿಷ್ಠಿರ ಶಕ 219ರಂದು ಈ ದೇವಾಲಯವನ್ನು ಜನಮೇಜಯ ರಾಜನು ಕಟ್ಟಿಸಿದನೆಂದು ಹೇಳಲಾಗುತ್ತಿದೆ. ಕ್ರಿ.ಶ. 13-14ನೆ ಶತಮಾನದಷ್ಟು ಹಿಂದೆ ವಿಜಯ ನಗರ ಹಾಗೂ ಕೆಳದಿಯ ಅರಸರ ಕಾಲದಲ್ಲಿ ಆಗಿ ಹೋದ ಶೈವ ಸಂಪ್ರದಾಯ ಹೊಸಂಗಡಿ ಹೊನ್ನೆಯ ಕಂಬಳಿ ಅರಸರು ಕ್ರಿ.ಶ.(1500-1618) ಪುನರ್ ಪ್ರತಿಷ್ಠಾಪಿಸಿ ಜೀರ್ಣೋದ್ಧಾರ ಮಾಡಿದರೆಂಬ ಪ್ರತೀತಿ ಇದೆ.ಈ ದೇವಾಲಯ ಈಗ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ.

ಉಂಬಳಿ ನೀಡಲಾಗಿದೆ
ದೇವಾಲಯದ ಹೊರಸುತ್ತಿನಲ್ಲಿ ಪರಿವಾರ ದೇವತೆಗಳಾದ ಭೈರವ, ಭೈರವಿ ,ವೀರಭದ್ರ, ಖಡ್ಗ ರಾಮ ಹಾಗೂ ಸುಬ್ರಹ್ಮಣ್ಯ ಗುಡಿ ಇದೆ. ದೇವಾಲಯದ ಕಟ್ಟು ಕಟ್ಟಳೆ ಕೆಲಸ ಓಲಗ ಉದಲೂ ಹಾಗೂ ಮೇಲು ವಾದ್ಯ ಪಂಚ ವಾದ್ಯಕ್ಕೆಹಾಗೂ ದೇವಾಲಯದ ಒಳಾಂಗಣ ಶುಚಿತ್ವ ದೇವಾಡಿಗರು, ರಥ ರಿಪೇರಿ ಕೆಂಡದ ಹೊಂಡಕ್ಕೆ ಬೆಂಕಿ ಹಾಕಲು ಹಾಗೂ ರಥ ಮುನ್ನೆಡೆಸಲು ವಿಶ್ವ ಕರ್ಮರು, ದೇಗುಲದ ದ್ವಿಕಾಲ ಪೂಜೆಗೆ ಬ್ರಾಹ್ಮಣ(ಅರ್ಚಕ) ಕುಟುಂಬ,ಸಹಾಯಕ ಕಾರ್ಯಕ್ಕೆ ಮಡಿವಾಳ ಕುಟುಂಬ,ಗರೋಡಿ ಪೂಜೆಗೆ ಬಿಲ್ಲವರು ಅಂದು ನೇಮಿಸಿ ಉಂಬಳಿಯಾಗಿ ದೇಗುಲದ ವತಿಯಿಂದ ನೀಡಲಾಯಿತು.ಭೂ ಮಸೂದೆ ಕಾಯ್ದೆ ಯಲ್ಲಿ ದೇಗುಲದ ಭೂಮಿ ಉಳುವವನಿಗೆ ಹೋದರೂ ಇಂದಿಗೂ ಈ ಸಮುದಾಯದವರು ದೇವಾಲಯದ ಹಬ್ಬ ಹರಿದಿನಗಳಲ್ಲಿ ಇಂದು ಸಹ ಶ್ರದ್ಧೆಯಿಂದ ತಮ್ಮ ಸೇವೆ ನಿರ್ವಹಿಸುತ್ತಿದ್ದಾರೆ.

ಉಂಬಳಿ ಭೂಮಿ ಹೋದರೂ ದೇವರ ಸೇವೆ ನಿರಂತರ
ಹಿಂದೆ ನಮ್ಮ ಬನಶಂಕರಿ ದೇಗುಲದ ಸಾಕಷ್ಟು ಉಂಬಳಿ ಭೂಮಿ ದೇವರ ಸೇವೆ ಮಾಡುವ ಸಮುದಾಯಕ್ಕೆ ನೀಡಲಾಗಿದ್ದು ಭೂ ಮಸೂದೆ ಕಾಯ್ದೆ ಯಲ್ಲಿ ಎಲ್ಲ ಭೂಮಿಯು ಹೋಯಿತು. ಆದರೆ ಭೂಮಿ ಪಡೆದ ಫನಾನುಭವಿಗಳು ಈಗಲೂ ಯಾವುದೇ ಪ್ರತಿ ಫಲಾ ಪೇಕ್ಷೆ ಇಲ್ಲದೆ ಹಬ್ಬ ಹರಿದಿನಗಳಲ್ಲಿ ಹಿಂದಿನಿಂದಲೂ ತಮ್ಮ ತಮ್ಮ ಸಮುದಾಯಕ್ಕೆ ಮೀಸಲಿಟ್ಟ ಕೆಲಸವನ್ನು ಇಂದೂ ಮುಂದುವರಿಸುತ್ತಿದ್ದಾರೆ.

ದೇಗುಲದ ದೇವರ ಸೇವೆಯಲ್ಲಿ 80ರ ಹರೆಯದ ಲಕ್ಷ್ಮಿ ದೇವಾಡ್ತಿ
ದೇಗುಲದ ಸುಮಾರು ಅರ್ಧ ಕಿಮೀ.ದೂರದ ಕೇಳಾಮನೆ ಎಂಬ ಕಾಡೊಳಗಿನ ಮನೆ ಇದ್ದರೂ ಎಂತಹ ಗುಡುಗು,ಸಿಡಿಲು,ಮಳೆ,ಬಿರುಗಾಳಿಗೆ ಮೈಯೊಡ್ಡಿ ತನ್ನ ಪೂರ್ವಿಕರು ಹಿಂದೆ ನಡೆಸುತ್ತಿದ್ದ ಕಟ್ಟ ಕಟ್ಟಲೇಯನ್ನು ಇಂದೂ ಮುಂದುವರಿಸುತ್ತಿದ್ದಾರೆ.ದೇಗುಲದ ಒಳಗೆ ಪ್ರತಿ ಶುಕ್ರವಾರ ಮಧ್ಯಾಹ್ನ , ಪ್ರತಿದಿನ ಸಂಜೆ ಶುತಿತ್ವ ಗೊಳಿಸಿ ಘಂಟೆ ಬಾರಿಸದಿದ್ದರೆ ಪುಜೆಯೇ ನಡೆಯುದಿಲ್ಲ. ಕುಟುಂಬದ ಸದಸ್ಯರು ರಥೋತ್ಸವದ ದೇಗುಲದ ಕಟ್ಟು ಕಟ್ಟಳೆ ಸೇವೆಯಲ್ಲಿ ಬಹು ಹಿಂದೆ ನಡೆದಂತೆ ಇಂದೂ ಸೇವೆ ಸಲ್ಲಿಸುವುದು ಇಲ್ಲಿನ ವಿಶೇಷ.

ನನಗೆ ಎಲ್ಲಿವರೆಗೆ ದೇವಿ ಸೇವೆ ಮಾಡಲು ಶಕ್ತಿ ಕೊಡುತ್ತಾಳೋ ಅಲ್ಲಿ ವರೆಗೆ ನಾನು ಈ ಸೇವೆ ಮುಂದುವರಿಸುತ್ತೇನೆ, ನಂತರ ನನ್ನ ಕುಟುಂಬ ವರ್ಗ ಈ ಸೇವೆ ಮುಂದುವರಿಸುತ್ತೆ ಎಂಬ ನಂಬಿಕೆಯಿದೆ.
– ಲಕ್ಷ್ಮಿ ದೇವಾಡ್ತಿ

ದೇಗುಲದ ಹೊರ ಸುತ್ತಿನ ಪರಿವಾರ ದೇವತೆ ಭೈರವ- ಭೈರವಿ ಊರ ಜನರ ಹಸುಗಳು ಹಿಂಡು ತಪ್ಪಿ ಹಟ್ಟಿ(ಕೊಟ್ಟಿಗೆ) ಬರದಿದ್ಫಾಗ, ಹಸು ಕರು ಹಾಕಿ ಹಾಲು ಕೊಡದೆ ಒದೆಯಲು ಪ್ರಾರಂಭಿಸಿದರೆ, ಹಾಲು ಒಪ್ಪಿಸಿ ಹಣ್ಣು ಕಾಯಿ ಸೇವೆ ಈ ದೇವರಿಗೆ ನೀಡುದ್ದಾಗಿ ಪ್ರಾರ್ಥಿಸಿ ಕೊಂಡರೆ ಎಲ್ಲವೂ ನಿರ್ವಿಘ್ನ ವಾಗುತ್ತದೆ.ದೇವರ ಮರದ ಉರ ಗಳಾಗಿದ್ದು ಗೆದ್ದಲು ಹಿಡಿದು ಅಲ್ಲೇ ನಶಿಶಿ ಹೋಗುತ್ತಿದ್ದವು, ನಂತರ ಶಿಲೆಯ ಮೂರ್ತಿ ಮಾಡಲಾಯಿತು.
ಸಂಪಿಗೇಡಿ ಸಂಜೀವ ಶೆಟ್ಟಿ, ಮುಕ್ತೇಸರ ಬನಶಂಕರಿ ದೇವಸ್ಥಾನ

ಕುದುರೆ ಸವಾರ ಖಡ್ಗ ರಾಮನ ಅಂದಿನ ಠೀವಿ ಇಂದು ನೋಡಲು ಅಸಾಧ್ಯ. ಕಂಠಹಾರ, ಕತ್ತಿನಸರ, ನಾಗ ಕರ್ಣ ಕುಂಡಲ,ನೀಳ ನಾಸಿಕ,ಪದಕದ ಸರ, ಭುಜ ಕೀರ್ತಿ,ದೊಡ್ಡ ಮೀಸೆ,ವಿಸ್ತಾರವಾದ ಎದೆ, ಟೊಂಕಪಟ್ಟಿ, ಗತ್ತಿನಲ್ಲಿ ಸಿಕ್ಕಿಸಿದ್ದ ಸೊಂಟ ಕತ್ತಿ, ಸುಂದರ ಕಿರೀಟ ಇದ್ದಿತು.
-ಚಿಟ್ಟೆ ರಾಜಗೋಪಾಲ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಸದಸ್ಯ, ಬನಶಂಕರಿ ದೇಗುಲ ಉಳ್ಳೂರು 74.

Comments are closed.