ಕರಾವಳಿ

ಬಹುನಿರೀಕ್ಷಿತ `ರಡ್ಡ್ ಎಕ್ರೆ’ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ

Pinterest LinkedIn Tumblr

ಮಂಗಳೂರು, ಜನವರಿ.10: ಒನ್‌ಲೈನ್ ಸಿನಿಮಾ ಲಾಂಛನದಲ್ಲಿ ಸಂದೇಶ್ ರಾಜ್ ಬಂಗೇರ, ರೋಹನ್ ಕೋಡಿಕಲ್ ನಿರ್ಮಾಣದಲ್ಲಿ ವಿಸ್ಮಯ ವಿನಾಯಕ್ ನಿರ್ದೇಶನದಲ್ಲಿ ತಯಾರಾದ `ರಡ್ಡ್ ಎಕ್ರೆ’ ತುಳು ಸಿನಿಮಾ ನಗರದ ಭಾರತ್ ಮಾಲ್‌ನ್ ಬಿಗ್ ಸಿನಿಮಾಸ್‌ನಲ್ಲಿ ಶುಕ್ರವಾರ ಬಿಡುಗಡೆ ಗೊಂಡಿತು.

ಸಮಾರಂಭವನ್ನು ಶ್ರೀನಿವಾಸ ಯುನಿರ್ವಸಿಟಿಯ ಚಾನ್ಸಿಲರ್ ರಾಘವೇಂದ್ರ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. `ರಡ್ಡ್ ಎಕ್ರೆ’ ಸಿನಿಮಾದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿ. ಪ್ರಾದೇಶಿಕ ಭಾಷೆಯಲ್ಲಿ ಬರುತ್ತಿರುವ ಸಿನಿಮಾಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಸತೀಶ್ ಆಚಾರ್ಯ, ಚಿತ್ರದ ನಿರ್ಮಾಪಕರಾದ ಸಂದೇಶ್ ರಾಜ್ ಬಂಗೇರ, ರೋಹನ್ ಕೋಡಿಕಲ್, ನಿರ್ದೇಶಕ ವಿಸ್ಮಯ ವಿನಾಯಕ್, ರಾಕೇಶ್ ಕದ್ರಿ, ನಟರಾದ ಮೈಮ್ ರಾಮದಾಸ್, ಮಂಜು ರೈ, ಸಂಗೀತ ನಿರ್ದೇಶಕ ಕಿಶೋರ್ ಕುಮಾರ್ ಶೆಟ್ಟಿ, ನಾಯಕಿ ನಟಿ ನಿರೀಕ್ಷಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಆರ್.ಜೆ.ಅರ್ಪಿತ್ ಕಾರ್ಯಕ್ರಮ ನಿರ್ವಹಿಸಿದರು.

`ರಡ್ಡ್ ಎಕ್ರೆ’ ಸಿನಿಮಾ ಉತ್ತಮ ಹಾಸ್ಯ, ಮನರಂಜನೆಯನ್ನೊಳಗೊಂಡಿದ್ದು, ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಪಿವಿ‌ಆರ್, ಸಿನಿಪೊಲೀಸ್, ಉಡುಪಿಯಲ್ಲಿ ಅಲಂಕಾರ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ತೆರೆಕಂಡಿದೆ.

ಈಗಾಗಲೇ ಈ ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. “ಜಾಗೆ ರಡ್ಡ್ ಎಕ್ಕರೆ… ಬೈದೆರ್‌ ಲಪ್ಪೆರೆ… ಜಾಗೆದಕುಲು ಬನ್ನಾಗ ಮಾತ ಒತ್ತರೆ’ ಎಂಬ ಟೈಟಲ್‌ ಸಾಂಗ್‌ ಕ್ಲಿಕ್‌ ಆಗಿದೆ. ಶಶಿರಾಜ್‌ ರಾವ್‌ ಕಾವೂರು ಬರೆದಿರುವ “ಪಗೆಲ್‌ ಕರೀಂಡ್‌… ಮುಗಲ್‌ ಕಬೀಂಡ್‌..’ ಹಾಗೂ “ಇನಿ ದಾನೆ ಕುಸ್ಕೊಂದುಂಡು’ ಹಾಡುಗಳು ಕೂಡ ಗಮನ ಸೆಳೆದಿದೆ. ಮೊದಲ ಬಾರಿಗೆ ಪೃಥ್ವಿ ಅಂಬರ್‌ ಈ ಸಿನೆಮಾದಲ್ಲಿ ಹಾಡಿದ್ದಾರೆ. ದೀಪಕ್‌ ಕೋಡಿಕಲ್‌ ಕೂಡ ಸ್ವರ ನೀಡಿದ್ದಾರೆ. ಕಿಶೋರ್‌ ಕುಮಾರ್‌ ಶೆಟ್ಟಿ ಸಂಗೀತವಿದೆ. ಸಿದ್ದು ಜಿ.ಎಸ್‌. ಛಾಯಾಗ್ರಹಣ. ಕಿಶೋರ್‌ ಶೆಟ್ಟಿ ಸಂಗೀತ, ಸುನದ್‌ ಗೌತಮ್‌ ಹಿನ್ನೆಲೆ ಸಂಗೀತ, ರಾಹುಲ್‌ ವಶಿಷ್ಠ ಸಂಕಲನದಲ್ಲಿ ಕೈಜೋಡಿಸಿದ್ದಾರೆ. ಸುರೇಶ್‌ ನಾಯಕ್‌, ಮಹೇಶ್‌ , ಕಿರಣ್‌ ಶೆಟ್ಟಿ ಸಹಕರಿಸಿದ್ದಾರೆ.

ತಾರಾಂಗಣ :  ನಾಯಕ ನಟನಾಗಿ ಪೃಥ್ವಿ ಅಂಬರ್‌, ನಾಯಕಿ ಪಾತ್ರದಲ್ಲಿ ನಿರೀಕ್ಷಾ ಶೆಟ್ಟಿ, ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಅರವಿಂದ ಬೋಳಾರ್‌, ನವೀನ್‌ ಡಿ. ಪಡೀಲ್‌, ವಿಸ್ಮಯ ವಿನಾಯಕ್‌, ಪ್ರಕಾಶ್‌ ತೂಮಿನಾಡ್‌, ಉಮೇಶ್‌ ಮಿಜಾರ್‌, ಮಂಜು ರೈ ಮುಳೂರು, ಮೈಮ್‌ ರಾಮ್‌ದಾಸ್‌, ದೀಪಕ್‌ ರೈ ಪಾಣಾಜೆ, ರೂಪಾ ವರ್ಕಾಡಿ, ಶ್ರದ್ಧಾ ಸಾಲ್ಯಾನ್‌, ರವಿ ರಾಮಕುಂಜ, ಅನಿಶಾ ಶರತ್‌, ಸುರೇಶ್‌ ಮಂಜೇಶ್ವರ ನಟಿಸಿದ್ದು, ಶಬರೀಶ್‌ ಕಬ್ಬಿನಾಳೆ, ಯತೀಶ್‌ ಪಸೋಡಿ, ಆರ್‌.ಜೆ. ಅರ್ಪಿತ್‌, ದೀಕ್ಷಿತ್‌ ಕೋಟ್ಯಾನ್‌, ಪ್ರದೀಪ್‌ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ (ಒಂದೊಂದು ಪಾತ್ರದಲ್ಲಿ) ದೀಪಕ್‌ ರಾಜ್‌ ಶೆಟ್ಟಿ, ಸೂರಜ್‌ ಶೆಟ್ಟಿ, ಪ್ರಶಾಂತ್‌ ಸಿ.ಕೆ, ಸೋನಾಲ್ ಮೊಂತೇರೋ ಅಭಿನಯಿಸಿದ್ದಾರೆ.

ಕಥಾ ಸಾರಾಂಶ : “2 ಎಕ್ರೆ’ ಹೆಸರು ಕೇಳುವಾಗ ಇದು ಭೂಮಿಯ ಬಗ್ಗೆ ಅನಿಸಬಹುದು. ಆದರೆ, ಇಲ್ಲಿ ಕಥೆ ಆರಂಭ ಹಾಗೂ ಮುಕ್ತಾಯ ಮಾತ್ರ 2 ಎಕ್ರೆ ಜಾಗದಲ್ಲಿ. ಉಳಿದಂತೆ ಇಲ್ಲಿ ಅನೇಕ ಸಂಗತಿಗಳಿವೆ. ನವೀನ್‌ ಡಿ. ಪಡೀಲ್‌ ಹಾಗೂ ವಿಸ್ಮಯ ವಿನಾಯಕ್‌ ಅಣ್ಣ ತಮ್ಮಂದಿರು. ಅವರಿಗೆ ತಂದೆಯ ಪಾಲಿನ ಆಸ್ತಿ ಸಿಕ್ಕಿರುತ್ತದೆ. ಅದನ್ನು ಡೀಲ್‌ ಮಾಡುವ ಹಾಸ್ಯ ಕಥಾನಕವೇ “2 ಎಕ್ರೆ’ .

Comments are closed.