ಕರಾವಳಿ

ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಹೃದಯಾಘಾತದಿಂದ ವಿಧಿವಶ

Pinterest LinkedIn Tumblr

ಉಡುಪಿ: ಹಿರಿಯ ಪತ್ರಕರ್ತ ರವಿರಾಜ ವಳಲಂಬೆ ಅವರು ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಉಡುಪಿಯ‌ ಕಿನ್ನಿಮುಲ್ಕಿಯಲ್ಲಿರುವ ನಿವಾಸದಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಎದೆ‌ನೋವು‌ ಕಾಣಿಸಿಕೊಂಡ‌ ಹಿನ್ನಲೆಯಲ್ಲಿ ಕೂಡಲೇ ಅವರನ್ನು ನಗರದಲ್ಲಿರುವ ಅಸ್ಪತ್ರೆಗೆ ಕರೆದುಕೊಂಡು‌ ಹೋಗುತ್ತಿದ್ದಾಗ ದಾರಿ ಮಧ್ಯದಲ್ಲೇ ನಿಧನರಾಗಿದ್ದಾರೆ.

ಉಡುಪಿಯಲ್ಲಿ ಮೊದಲಿಗೆ ಈ‌ ಟಿವಿ ವರದಿಗಾರನಾಗಿ ಹಲವು ವರುಷಗಳ‌ ಕಾಲ ಸೇವೆ ಸಲ್ಲಿಸಿದ ರವಿರಾಜ್ ನಂತರ ಸುವರ್ಣ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ‌ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ‌ ಉಡುಪಿಯಲ್ಲಿ ಸ್ಥಳೀಯ ವಾಹಿನಿಯಾದ ಪ್ರೈಮ್ ಟಿವಿ ನಿರ್ದೇಶಕರಾಗಿದ್ದರು.

ಇಬ್ಬರು ಪುತ್ರಿಯರನ್ನು ಹೊಂದಿರುವ ರವಿರಾಜ್ ವಳಲಂಬೆ ಅವರು ಅಪಾರ ಬಂಧು‌ಮಿತ್ರರನ್ನು ಅಗಲಿದ್ದಾರೆ. ಅವರ ಅನಿರೀಕ್ಷಿತ ನಿಧನ ಅವರ ಒಡನಾಡಿಗಳಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ.

Comments are closed.