ಕರಾವಳಿ

ಫಿಲಾಟೆಲಿ ಕ್ಲಬ್ ಉದ್ಘಾಟನೆ ; ಮಕ್ಕಳಿಗೆ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸದ ಬಗ್ಗೆ ಅರಿವು

Pinterest LinkedIn Tumblr

ಮಂಗಳೂರು ಜನವರಿ 07 : ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವನ್ನು ಬೆಳೆಸುವ ಆಶಯದೊಂದಿಗೆ ಜನವರಿ 06 ರಂದು ಕೇಂದ್ರೀಯ ವಿದ್ಯಾಲಯ 1 ಪಣಂಬೂರು ಶಾಲೆಯಲ್ಲಿ ಫಿಲಾಟೆಲಿ ಕ್ಲಬ್‍ನ ಉದ್ಘಾಟನೆಯನ್ನು ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕ ಹರ್ಷ ಉದ್ಘಾಟಿಸಿದರು.

ಫಿಲಾಟೆಲಿಸ್ಟ್ ಲಕ್ಷ್ಮಣ್ ಪ್ರಭು ಅವರು ಮಕ್ಕಳಿಗೆ ಸ್ಟಾಂಪ್ ಸಂಗ್ರಹಣೆಯ ಹವ್ಯಾಸದ ಕುರಿತು ಮಕ್ಕಳಲ್ಲಿ ಅರಿವನ್ನು ಮೂಡಿಸಿದರು. ಹಾಗೂ ತಮ್ಮ ಅಂಚೆ ಚೀಟಿ ಸಂಗ್ರಹಣೆಯ ಪ್ರದರ್ಶನವನ್ನು ಮಾಡಿದರು. ಶಾಲೆಯ ಪ್ರಿನ್ಸಿಪಾಲ್ ಗಣೇಶ್ ಎಸ್. ಇಂದ್ರಾಲೆ, ಫಿಲಾಟೆಲಿ ಕ್ಲಬ್ ನ ಸೆಕ್ರಟರಿ ಜಗದೀಶ್ ಎಮ್ ಕೆ, ಸಹಾಯಕ ಅಂಚೆ ಅಧೀಕ್ಷಕ ಗ್ರೆಗರಿ ಅವರು ಉಪಸ್ಥಿತರಿದ್ದರು.

ಸೂಚನೆ : ಫಿಲಾಟೆಲಿ ಕ್ಲಬ್ ಆರಂಭಿಸಲು ಆಸಕ್ತ ಶಾಲೆಗಳು ಹಿರಿಯ ಅಂಚೆ ಅಧೀಕ್ಷಕರ ಕಚೇರಿ, ಮಂಗಳೂರು ದೂರವಾಣಿ ಸಂಖ್ಯೆ : 0824-2218400 ನ್ನು ಸಂಪರ್ಕಿಸಲು ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.