ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಳಪೆ ದಕ್ಷಿಣ ವಾರ್ಡಿನಲ್ಲಿ ನೂತನ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ಕುರಿತು ಮಾತನಾಡಿದ ಅವರು, ಅಳಪೆ ಹೇಮಾವತಿ ನಗರದಿಂದ ಪರಂಜ್ಯೋತಿ ಭಜನಾ ಮಂದಿರಕ್ಕೆ ತೆರಳುವ ರಸ್ತೆಗೆ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಇಂದು ಗುದ್ದಲಿಪೂಜೆ ನೆರವೇರಿಸಿದ್ದೇವೆ. ಕೆಲವು ತಿಂಗಳ ಹಿಂದೆ ಈ ಪ್ರದೇಶದ ಸಾರ್ವಜನಿಕರು ರಸ್ತೆ ಕಾಮಗಾರಿ ನಡೆಸಿಕೊಡುವಂತೆ ಮನವಿ ಸಲ್ಲಿಸಿದ್ದರು. ಆ ಪ್ರಕಾರ ಕಾಮಕಾರಿಯನ್ನು ಕೈಗೆತ್ತಿಕೊಂಡಿದ್ದು ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದಿದ್ದಾರೆ.
ಅಳಪೆ ದಕ್ಷಿಣ ವಾರ್ಡಿನಲ್ಲಿ ಅನೇಕ ಕಾಮಗಾರಿಗಳಿಗೆ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಅವೆಲ್ಲವನ್ನೂ ಕೂಡ ಕೈಗೆತ್ತಿಕೊಳ್ಳಲಾಗುವುದು ಎಂದಿದ್ದಾರೆ.
ಪಾಲಿಕೆ ಸದಸ್ಯರಾದ ಶೋಭಾ ಪೂಜಾರಿ,ಹಾಗೂ ದಿವಾಕರ್ ಪಾಂಡೇಶ್ವರ, ಮಾಜಿ ಸದಸ್ಯರಾದ ವಿಜಯ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡರಾದ ಭಾಸ್ಕರ್ ಚಂದ್ರ ಶೆಟ್ಟಿ, ವಸಂತ್ ಜೆ ಪೂಜಾರಿ,ಸುಕೇಶ್ ಕುಮಾರ್, ಮಾನಸ ರೈ, ಧರ್ಮಪಾಲ್,ಲತಾ, ದೀಪಕ್, ಸುಜಿತ್ ಕುಮಾರ್, ಪದ್ಮ, ದಿನೇಶಿ ಶೆಟ್ಟಿ, ನವೀನ್ ಚಂದ್ರ, ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.

Comments are closed.