ಕರಾವಳಿ

ಗಂಗೊಳ್ಳಿ: ಮೊವಾಡಿ ಶ್ರೀ ಚೌಡೇಶ್ವರೀ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು!

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಾಸಿ ಸಮೀಪದ ಮೊವಾಡಿ ಮೊವಾಡಿ ಶ್ರೀ ಚೌಡೇಶ್ವರೀ ದೇವಸ್ಥಾನಕ್ಕೆ ಖದೀಮರು ಕನ್ನ ಹಾಕಿದ ಘಟನೆ ನಡೆದಿದ್ದು ಸೋಮವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ಮೊವಾಡಿ ಸಮೀಪದಲ್ಲಿನ ದೇವಸ್ಥಾನ ಇದಾಗಿದ್ದು ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ದೇವಸ್ಥಾನಕ್ಕೆ ಸಂಬಂದಪಟ್ಟ ೩ ಹುಂಡಿಗಳನ್ನು ಒಡೆದು ನಗದು ಕದ್ದಿದ್ದು, ದೇವಿಯ ಚಿನ್ನದ ಆಭರಣವನ್ನು ಕಳವುಗೈದಿದ್ದಾರೆ ಎನ್ನಲಾಗಿದೆ. ಒಡೆದ ಹುಂಡಿಯನ್ನು ದೇವಸ್ಥಾನದ ಸಮೀಪವೇ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಗಂಗೊಳ್ಳಿ ಠಾಣೆ ಉಪನಿರೀಕ್ಷಕ ವಾಸಪ್ಪ ನಾಯ್ಕ್ ಹಾಗೂ ಸಿಬ್ಬಮ್ದಿಗಳು ಭೇಟಿ ನೀಡಿದ್ದು ತನಿಖೆ ಮುಂದುವರೆಸಿದ್ದಾರೆ.

Comments are closed.