ಕರಾವಳಿ

ಕಂಕನಾಡಿ ವಾರ್ಡ್ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು: ಮಹಾನಗರ ಪಾಲಿಕೆ ವತಿಯಿಂದ ಕಂಕನಾಡಿ ವಾರ್ಡಿಗೆ 1.37.80 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆ ಯಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.

ಕಳೆದ ಕೆಲ‌ ತಿಂಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಕೊನೆಗೊಂಡ ನಂತರ ಸಾರ್ವಜನಿಕರ ಕೋರಿಕೆಯ ಮೇರೆಗೆ ಲೋಕೋಪಯೋಗಿ ಇಲಾಖೆ, ಕೇಂದ್ರ ಸರಕಾರದ 14ನೇ ಹಣಕಾಸು ಅನುದಾನ ವ್ಯವಸ್ಥೆ, ಮಹಾನಗರ ಪಾಲಿಕೆ ಸಾಮಾನ್ಯ ನಿಧಿ, ಮಳೆಹಾನಿ, ಎಸ್.ಎಫ್.ಸಿ ಮುಂತಾದ ವಿವಿಧ ಅನುದಾನಗಳನ್ನು ಜೋಡಿಸಿ ಅಳಪೆ ಮಠದ ಮುಖ್ಯ ರಸ್ತೆಯಿಂದ ರಾಜಕಾಲುವೆಗೆ ಕಾಲು ಸಂಕ ನಿರ್ಮಾಣಕ್ಕೆ 5 ಲಕ್ಷ ರೂ, ನಾಗುರಿಯಲ್ಲಿ 150 ಅಡಿ ಉದ್ದ ಹಾಗೂ 10 ಅಡಿ ಅಗಲದ ರಸ್ತೆ ಕಾಂಕ್ರೀಟೀಕರಣಕ್ಕೆ 3.50 ಲಕ್ಷ ರೂ ಮೀಸಲಿಡಲಾಗಿದೆ ಎಂದು ಹೇಳಿದರು.

ಕಪಿತಾನಿಯೋ – ಪಂಪ್ವೆಲ್ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ 8 ಲಕ್ಷ ರೂ., ಪಂಪ್ವೆಲ್ ಬಳಿಯ ಎಂ.ಐ.ಒ ಕ್ಯಾನ್ಸರ್ ಆಸ್ಪತ್ರೆಗೆ ಸಂಧಿಸುವ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ., ನೆಕ್ಕರೆಮಾರು ಬಳಿ ಕಿರು ಸೇತುವೆ ಹತ್ತಿರ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ, ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯ ರಸ್ತೆ ಬಳಿ ಬೃಹತ್ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ ರೂ., ಪಂಪ್ವೆಲ್ ಬಳಿ ಬೃಹತ್ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ ಎಂದಿದ್ದಾರೆ.

ಜೊತೆಗೆ, ಎಕ್ಕೂರು ಸೇತುವೆಯ ಮುಂದುವರಿದ ಕಾಮಗಾರಿಗೆ 10 ಲಕ್ಷ ರೂ., ಕುಂಟಲಗುಡ್ಡೆ ಕೊರಗಜ್ಜ ದೈವಸ್ಥಾನದ ಬದಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ 6 ಲಕ್ಷ ರೂ., ಕುಂಟಲಗುಡ್ಡೆ ಹಿಂದೂ ಯುವಸೇನೆಯ ಕಚೇರಿ ಬಳಿ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗೆ 8 ಲಕ್ಷ ರೂ., ಕುಂಟಲಗುಡ್ಡೆ ಮುಖ್ಯ ರಸ್ತೆ, ಚರಂಡಿ ಅಭಿವೃದ್ಧಿಗೆ 5 ಲಕ್ಷ ರೂ., ಕಾವುಬೈಲ್ ಬದಿ ರಸ್ತೆ, ಚರಂಡಿ ಅಭಿವೃದ್ಧಿಗೆ 5 ಲಕ್ಷ ರೂ., ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ ಬಳಿ ತಡೆಗೋಡೆ ದುರಸ್ತಿ ಕಾಮಗಾರಿಗೆ 4.63 ಲಕ್ಷ ರೂ., ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ ಬಳಿ ಗಂಗಾ ಬಡಾವಣೆ ಬಳಿ ಚರಂಡಿ ದುರಸ್ತಿ ಕಾಮಗಾರಿಗೆ 4.3 ಲಕ್ಷ ರೂ. ಮೀಸಲಿಡಲಾಗಿದೆ ಎಂದರು.

ಎಕ್ಕೂರು ಗುಡ್ಡ ರಸ್ತೆ ಬಳಿ ರಸ್ತೆ ದುರಸ್ತಿ ಕಾಮಗಾರಿಗೆ 4.94 ಲಕ್ಷ ರೂ., ನಾಗುರಿ ಬಿಲ್ಲವ ಸೇವಾ ಸಮಾಜ ಮಂದಿರದ ಬಳಿ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ., ಗೋರಿಗುಡ್ಡ ಬಸ್ ನಿಲ್ದಾಣ ಬಳಿ ಟೈಲರ್ ಭವನದ ಮುಂದುವರಿದ ಕಾಮಗಾರಿಗೆ 5 ಲಕ್ಷ ರೂ., 4 ಲಕ್ಷ ವೆಚ್ಚದಲ್ಲಿ ಸಾಯಿಬಾಬಾ ಮಂದಿರದ ಬಳಿ ಅಭಿವೃದ್ಧಿ ಕಾಮಗಾರಿಗೆ 4 ಲಕ್ಷ ರೂ., ನೆಕ್ಕರೆಮಾರ್ ಕಟ್ಟೆಪುಣಿಯಲ್ಲಿ ಪರಿಶಿಷ್ಟ ಕಾಲೋನಿ ಬಳಿ ಅಭಿವೃದ್ಧಿ ಕಾಮಗಾರಿಗೆ 16.70 ಲಕ್ಷ ರೂ., ದಂಬೆ ಬಳಿ ಚರಂಡಿ ತಡೆಗೋಡೆ ನಿರ್ಮಾಣ ಕಾಮಗಾರಿ ಸೇರಿದಂತೆ 20ಕ್ಕೂ ಅಧಿಕ ಕಾಮಗಾರಿಗಳಿಗಾಗಿ 137.80 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ, ಶೀಘ್ರವೇ ಎಲ್ಲಾ ಕಾಮಗಾರಿಗಳು ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.

Comments are closed.