ಕುಂದಾಪುರ: ಹೆಬ್ರಿ ತಾಲೂಕಿನ ಬೆಳ್ವೆ ಸಟ್ವಳ್ಳಿ ನಿವಾಸಿ ಸೂರ್ಯನಾರಾಯಣ ಅಲ್ಸೆ (52) ಎಂಬಾತ ತನ್ನ ಪತ್ನಿ ಮಾನಸ (38) ಮಕ್ಕಳಾದ ಸುಧೀಂದ್ರ (14) ಸುಧೀಶ್ (9) ಎನ್ನುವರನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ನಾಲ್ಕು ಮೃತದೇಹಗಳನ್ನು ಬೆಳ್ವೆಯ ಸಟ್ವಳ್ಳಿಯ ನಿವಾಸಕ್ಕೆ ತಂದು ಅಂತಿಮ ವಿಧಿ ನಡೆಸಿ ಮನೆ ಹಿಂಭಾಗದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಇನ್ನು ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಮಾನಸಾ, ಸುಧೀಂದ್ರ ಹಾಗೂ ಸುಧೀಶ್ ಅವರ ತಲೆಭಾಗಕ್ಕೆ ಗಂಭೀರ ಗಾಯವಾಗಿದ್ದು ದೊಣ್ಣೆಯಿಂದ ಹೊಡೆದಿರುವುದು ಖಚಿತವಾಗಿದೆ ಮತ್ತು ಸೂರ್ಯನಾರಾಯಣ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಆದರೆ ದೇಹದಲ್ಲಿ ಯಾವುದೇ ವಿಷದ ಅಂಶ ಕಂಡು ಬಂದಿಲ್ಲ ಎನ್ನಲಾಗಿದ್ದು ಉನ್ನತ ತನಿಖೆಗೆ ಫಾರೆನ್ಸಿಕ್ ವಿಭಾಗಕ್ಕೆ ಕಳಿಸಲಾಗಿದೆ.
‘ರೇಜ್’ ಎನ್ನುವ ಮಾನಸಿಕ ಖಿನ್ನತೆಯಿಂದ ಸೂರ್ಯನಾರಾಯಣ ಬಳಲುತ್ತಿದ್ದ ಎನ್ನಲಾಗಿದ್ದು ಇದಕ್ಕೆ ಕಳೆದ ೫ ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಕೆಲ ಸಮಯದಿಂದ ಮಾತ್ರೆ ತೆಗೆದುಕೊಳ್ಳುವುದು ನಿಲ್ಲಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿರಿ-
ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ-ಕುಂದಾಪುರದ ಬೆಳ್ವೆಯಲ್ಲಿ ಘಟನೆ
ಬೆಳ್ವೆಯಲ್ಲಿ ಬೆಚ್ಚಿ ಬೀಳಿಸಿದ ಮೂರು ಮರ್ಡರ್, ಒಂದು ಸೂಸೈಡ್- ಈ ಮರಣ ಮೃದಂಗದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ (Video)
Comments are closed.