ಉಡುಪಿ: ಜಿಲ್ಲೆಯ ಕುಂದಾಪುರದ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಮೇಯಲು ಬಿಟ್ಟ ದನದ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ನಡೆದಿದ್ದು ಮತ್ತೆ ಈ ಭಾಗದಲ್ಲಿ ಚಿರತೆಯು ಆತಂಕ ಸ್ರಷ್ಟಿಸಿದೆ. ಮಾಲಾಡಿ ನಿವಾಸಿ ಪ್ರೇಮಾ ಶೆಟ್ಟಿ ಎನ್ನುವರ ಮನೆಯ ದನವನ್ನು ಸಮೀಪದ ತೋಪಿಗೆ ಮೇಯಲು ಬಿಟ್ಟಿದ್ದು ಚಿರತೆ ದಾಳಿ ಮಾಡಿದೆ.
ಈ ಹಿಂದೆ ಎರಡು ಚಿರತೆ ಸೆರೆ!
ಮಾಲಾಡಿ ಸರಕಾರಿ ಶಾಲೆ, ದೇವಸ್ಥಾನ ಇರುವ ಪ್ರದೇಶದ ಬಳಿಯ ತೋಟದಲ್ಲಿ ಕಳೆದೊಂದೂವರೆ ವರ್ಷದಿಂದ ಚಿರತೆ ಉಪಟಳ ಹೆಚ್ಚಿದೆ. ಜನರ ಕಣ್ಣೆದುರಿಗೆ ಚಿರತೆಗಳು ಪ್ರತ್ಯಕ್ಷವಾಗಿತ್ತು. ಈ ಹಿನ್ನೆಲೆ ಬೋನಿಟ್ಟ ಇಲಾಖೆ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ನಾಲ್ಕು ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಹಾಗೂ ಇದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಅಂದಾಜು ಹತ್ತು ವರ್ಷದ ಗಂಡು ಚಿರತೆಯನ್ನು ಅರಣ್ಯಾಧಿಕಾರಿಗಳು ಬೋನಿಟ್ಟು ಸೆರೆ ಹಿಡಿದಿದ್ದರು.
ಮುಗಿಯದ ಚಿರತೆ ಕಾಟ!
ಇದೇ ಪ್ರದೇಸದಲ್ಲಿ ಎರಡು ಚಿರತೆ ಸೆರೆಯಾಗಿದ್ದು ಇನ್ನೂ ಕೂಡ ಚಿರತೆ ಕಾಟ ತಪ್ಪಿಲ್ಲ. ಒಂದಿಬ್ಬರು ಆಟೋ ಚಾಲಕರು ಚಿರತೆ ಓಡಾಟ ಪ್ರತ್ಯಕ್ಷವಾಗಿ ಕಂಡಿದ್ದಾರೆ. ಅಲ್ಲದೇ ದನವನ್ನು ಸಾಯಿಸಿದ ಈ ಘಟನೆ ಬಳಿಕ ಜನರು ತಿರುಗಾಡಲು ಭಯ ಪಡುವಂತಾಗಿದೆ.
ಬೋನು ಇಡುತ್ತೇವೆ: ಉಪವಲಯ ಅರಣ್ಯಾಧಿಕಾರಿ
ಮಾಲಾಡಿಯಲ್ಲಿ ಮತ್ತೆ ಚಿರತೆ ಓಡಾಟವಿರುವ ಬಗ್ಗೆ ಗಮನಕ್ಕೆ ಬಂದಿದೆ. ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದು ಸೋಮವಾರ ಸಂಜೆ ವೇಳೆಗೆ ಬೋನಿಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸುತ್ತೇವೆಂದು ಉಪವಲಯ ಅರಣ್ಯಾಧಿಕಾರಿ ಉದಯ ‘ಕನ್ನಡಿಗ ವರ್ಲ್ಡ್’ಗೆ ತಿಳಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
ಇದನ್ನೂ ಓದಿರಿ- ತೆಕ್ಕಟ್ಟೆ ಮಾಲಾಡಿಯಲ್ಲಿ ‘ಆಪರೇಶನ್ ಚೀತಾ’ ಸಕ್ಸಸ್; ಬೋನಿಗೆ ಬಿದ್ದ ಹೆಣ್ಣು ಚಿರತೆ!
ತೆಕ್ಕಟ್ಟೆ ಮಾಲಾಡಿಯಲ್ಲಿ ಮತ್ತೆ ಬೋನಿಗೆ ಬಿತ್ತು ‘ಚೀತಾ’..! (Video)
ತೆಕ್ಕಟ್ಟೆ ಮಾಲಾಡಿಯಲ್ಲಿ ಚಿರತೆ ಪ್ರತ್ಯಕ್ಷ: ಸೆರೆಗಾಗಿ ಬೋನಿಟ್ಟು ಮೇಕೆ ಕಟ್ಟಿದ ಇಲಾಖೆ!
ತೆಕ್ಕಟ್ಟೆ ಮಾಲಾಡಿಯಲ್ಲಿ ಚಿರತೆ ಪ್ರತ್ಯಕ್ಷ: ಸೆರೆಗಾಗಿ ಬೋನಿಟ್ಟು ಮೇಕೆ ಕಟ್ಟಿದ ಇಲಾಖೆ!
Comments are closed.