ಕರಾವಳಿ

ತೆಕ್ಕಟ್ಟೆ ಮಾಲಾಡಿಯಲ್ಲಿ ಚಿರತೆ ಪ್ರತ್ಯಕ್ಷ: ಸೆರೆಗಾಗಿ ಬೋನಿಟ್ಟು ಮೇಕೆ ಕಟ್ಟಿದ ಇಲಾಖೆ!

Pinterest LinkedIn Tumblr

ಕುಂದಾಪುರ: ತೆಕ್ಕಟ್ಟೆ ಗ್ರಾಮಪಂಚಾಯತಿ ವ್ಯಾಪ್ತಿಯ ಮಾಲಾಡಿ ದೇವಸ್ಥಾನದ ಸಮೀಪದ ತೋಳಾರ್ ಫ್ಲ್ಯಾಂಟ್ ಅಕೇಶಿಯ ಮರದ ತೋಪಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಚಿರತೆ ಸಂಚಾರ ವ್ಯಾಪಕವಾಗಿದ್ದು ಗುರುವಾರ ಸಂಜೆಯೂ ಕೂಡ ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಚಿರತೆ ಕಂಡು ಹೌಹಾರಿದ್ದಾರೆ.

ಚಿರತೆಯನ್ನು ಗಮನಿಸಿದ ರಿಕ್ಷಾ ಚಾಲಕ ರಮೇಶ್ ಎನ್ನುವವರು ಕೂಡಲೇ ಇತರರಿಗೆ ಮಾಹಿತಿ ನೀಡಿದ್ದು ಗ್ರಾ.ಪಂ ವತಿಯಿಂದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತತ್ ಕ್ಷಣ ಆಗಮಿಸಿದ ಅರಣ್ಯಾಧಿಕಾರಿಗಳು ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯುವ ತಂತ್ರ ಮಾಡಿದ್ದಾರೆ. ಸುಮಾರು ಆರೂವರೆ ಸಾವಿರ ಅಂದಾಜು ಮೌಲ್ಯದ ಮೇಕೆಯನ್ನು ಗ್ರಾ.ಪಂ ಸಂಬಂದಪಟ್ಟವರು ಖರೀದಿಸಿಕೊಟ್ಟಿದ್ದು ಅದನ್ನು ಬೋನಿನೊಳಗಿಟ್ಟು ತೋಪಿನಲ್ಲಿರಿಸಲಾಗಿದೆ. ಶಾಲೆ, ದೇವಸ್ಥಾನ, ಆರೇಳು ಮನೆಗಳಿರುವ ಜನವಸತಿ ಪ್ರದೇಶವಾಗಿದ್ದು ಕೆಲವಾರು ದಿನಗಳಿಂದ ಚಿರತೆ ಸಂಚಾರ ಹೆಚ್ಚಿದ್ದರಿಂದ ಈ ಭಾಗದ ಜನತೆ ಆತಂಕದಲ್ಲಿದ್ದಾರೆ.

ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿ ಉದಯ್, ಅರಣ್ಯ ರಕ್ಷಕ ಶಂಕರ್, ಇಲಾಖಾ ಜೀಪು ಚಾಲಕ ಅಶೋಕ್, ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಕಾಂಚನ್, ಸದಸ್ಯರಾದ ಸಂಜೀವ ದೇವಾಡಿಗ, ವಿಜಯ ಭಂಡಾರಿ, ದಲಿತ ಮುಖಂಡ ಸತೀಶ್ ತೆಕ್ಕಟ್ಟೆ ಮೊದಲಾದವರು ಭೇಟಿ ನೀಡಿದ್ದಾರೆ.

Comments are closed.