ಕರಾವಳಿ

ಮಲೇರಿಯಾ, ಡೆಂಗ್ಯೂನಿಂದ ರಕ್ಷಣೆಗಾಗಿ ಮನಪಾದಿಂದ ಉಚಿತ ಸೊಳ್ಳೆ ಪರದೆ ವಿತರಣೆ

Pinterest LinkedIn Tumblr

ಪರಿಸರದಲ್ಲಿ ಶುಚಿತ್ವವನ್ನು ಕಾಪಾಡಿ,ಮಲೇರಿಯಾ, ಡೆಂಗ್ಯೂ ಕಾಯಿಲೆಗಳನ್ನು ತಡೆಗಟ್ಟಿ : ಶಾಸಕ ವೇದವ್ಯಾಸ ಕಾಮಾತ್

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಡಿವಿಬಿಡಿಸಿಒ ಮತ್ತು ಯುಪಿಎಚ್ಸಿ ಬಂದರ್ ವತಿಯಿಂದ ಉಚಿತ ಸೊಳ್ಳೆ ಪರದೆ ವಿತರಣಾ ಕಾರ್ಯಕ್ರಮ ಗುರುವಾರ ಸೆಂಟ್ರಲ್ ವಾರ್ಡಿನ ವಿಟಿ ರಸ್ತೆಯ ವಿಠೋಭ ದೇವಸ್ಥಾನದಲ್ಲಿ ನಡೆಯಿತು.

ಫಲಾನುಭವಿಗಳಿಗೆ ಸೊಳ್ಳೆ ಪರದೆ ವಿತರಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ ವೇದವ್ಯಾಸ ಕಾಮತ್ ಅವರು ನಗರ ಪ್ರದೇಶದಲ್ಲಿನ ನಮ್ಮ ಮನೆ ಪರಿಸರದಲ್ಲಿ ಶುಚಿತ್ವವನ್ನು ಕಾಪಾಡಿ, ನೀರು ನಿಲ್ಲುವಂತಹ ಸ್ಥಳಗಳಲ್ಲಿ ನೀರು ನಿಲ್ಲದಂತೆ ಮುತುವರ್ಜಿ ವಹಿಸಿ ಮಲೇರಿಯಾ, ಡೆಂಗ್ಯೂ ಮುಂತಾದ ಕಾಯಿಲೆಗಳನ್ನು ತಡೆಗಟ್ಟಿ ಮುಂದಿನ ದಿನಗಳಲ್ಲಿ ಕಾಯಿಲೆ ಮುಕ್ತ ಸಮಾಜವನ್ನು ನಿರ್ಮಿಸೋಣ. ಸ್ಥಳೀಯ ಮನಪಾ ಸದಸ್ಯೆ ಪೂರ್ಣಿಮಾ ವಾರ್ಡಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಈ ವಾರ್ಡಿನ ಜನರ ಧ್ವನಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದೆಯೂ ನಿಮ್ಮ ವಾರ್ಡಿನ ಸಮಸ್ಯೆಗಳಿದ್ದಲ್ಲಿ ಪೂರ್ಣಿಮಾ ಅಥವಾ ನನ್ನಲ್ಲಿ ತಿಳಿಸಿದ್ದಲ್ಲಿ ಸೂಕ್ತವಾಗಿ ಸ್ಪಂದಿಸುವುದಾಗಿ ಭರವಸೆ ಇತ್ತರು.

ರವಿಶಂಕರ್ ಮಿಜಾರ್ ಮಾತನಾಡಿ ನಮಗೆ ಕಾಯಿಲೆ ಬಂದ ಮೇಲೆ ಎಚ್ಚೆತ್ತುಕೊಳ್ಳುವ ಬದಲು ಕಾಯಿಲೆ ಬರದಂತೆ ತಡೆಯುವುದೇ ಉತ್ತಮ ಕೆಲಸ. ಸೊಳ್ಳೆ ಪರದೆ ಉಪಯೋಗಿಸುವುದರಿಂದ ಮಲೇರಿಯಾ, ಡೆಂಗ್ಯೂ ಮುಂತಾದ ಹಲವು ರೋಗಗಳಿಂದ ನಮ್ಮನ್ನು ನಾವೇ ರಕ್ಷಿಸಬಹುದಾಗಿದೆ ಎಂದು ಹೇಳಿದರು.

ಪಾಲಿಕೆ ಸದಸ್ಯೆ ಪೂರ್ಣಿಮಾ ಮಾತನಾಡಿ ಮನಪಾ ಉಚಿತವಾಗಿ ವಿತರಿಸುವ ಸೊಳ್ಳೆಪರದೆ ಉತ್ತಮ ಗುಣಮಟ್ಟದಾಗಿದ್ದು ಒಳ್ಳೆಯ ರೀತಿಯಲ್ಲಿ ಬಳಸಿ ಎಂದು ತಿಳಿಸಿದರು.

ವಾರ್ಡಿನ ಹಿರಿಯ ಕಾರ್ಯಕರ್ತರಾದ ರಾಮದಾಸ್ ಪೈ, ರಮೇಶ್ ಕಂಡೆಟ್ಟು, ಮುರಳಿಧರ್ ನಾಯಕ್, ರಮೇಶ್ ಹೆಗ್ಡೆ, ಪೂರ್ಣಿಮಾ ರಾವ್, ಗೋಪಿ ಭಟ್ ಉಪಸ್ಥಿತರಿದ್ದರು

Comments are closed.