ಕರಾವಳಿ

ಜನಮನಗೆದ್ದ ಪ್ರೋ ಇಂಡಿಯಾ ಮಾಯಿಥಾಯ್ ಚಾಂಪಿಯನ್ ಶಿಪ್ ಪಂದ್ಯಾಟ

Pinterest LinkedIn Tumblr

ಮಂಗಳೂರು, ನವೆಂಬರ್. 24 :: ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನವೆಂಬರ್ 20ರಿಂದ .24ರ ವರೆಗೆ ಆಯೋಜಿಸಲಾದ ಪ್ರೊ ಇಂಡಿಯಾ ಮಾಯ್‌ಥಾಯ್‌ ಚಾಂಪಿಯನ್‌ಶಿಪ್‌ ಪಂದ್ಯಾಟ ಇಂದು ಸಂಜೆ ಸಮಾರೋಪಗೊಳ್ಳಲ್ಲಿದೆ.

ನವೆಂಬರ್ 20ರಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರು ಪಂದ್ಯಾಟಕ್ಕೆ ಚಾಲನೆ ನೀಡಿದ್ದರು. ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌.,ಮಂಗಳೂರು ದಕ್ಷಿಣ ಶಾಸಕ ಹಾಗೂ ಕಾರ್ಯಕ್ರಮ ಸಂಘಟಕ ವೇದವ್ಯಾಸ ಕಾಮತ್‌, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಉದ್ಯಮಿ ಕೆ.ಸಿ.ನ್ಯಾಕ್‌, ಪ್ರಮುಖರಾದ ಸುರೇಶ್ಚಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ, ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಜಗದೀಶ್‌ ಅಧಿಕಾರಿ, ಸುನೀಲ್‌ ಆಚಾರ್‌, ರೂಪೇಶ್‌ ಶೆಟ್ಟಿ, ಚಂದ್ರಹಾಸ್‌ ಶೆಟ್ಟಿ, ರಾಘವೇಂದ್ರ ರಾವ್‌, ಸ್ವರ್ಣಸುಂದರ್‌, ಬಶೀರ್‌ ಬೈಕಂಪಾಡಿ, ಯತೀಶ್‌ ಬೈಕಂಪಾಡಿ, ಸಚಿನ್‌ ರಾಜ್‌ ರೈ, ಬಿಪಿನ್‌ ರಾಜ್‌, ನಿತೀಶ್‌ ಕುಮಾರ್‌, ಮಹೇಶ್‌ ಪಾಂಡ್ಯ, ಡಿ.ಎಂ. ಅಸ್ಲಾಂ, ಚೇತನ್‌, ಬಾಲಕೃಷ್ಣ ಶೆಟ್ಟಿ, ಚೇತನ್‌ ಅಶ್ವಥಾಮ ಉಪಸ್ಥಿತರಿದ್ದರು.

ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರಿಂದ ಪಂದ್ಯಾಟಕ್ಕೆ ಚಾಲನೆ

ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾದ ಈ ಪಂದ್ಯಾಟದಲ್ಲಿ ದೇಶದ 27 ರಾಜ್ಯಗಳ ಸುಮಾರು 450ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.ಇದು ದೇಶದಲ್ಲೇ ಅತ್ತಂತ ದೊಡ್ಡ ಪಂದ್ಯಾಟವಾಗಲಿದ್ದು ಮಂಗಳೂರಿನ ಜನತೆಗೆ ಹೆಮ್ಮೆಯ ವಿಷಯವಾಗಿದೆ. ದ.ಕ ಜಿಲ್ಲೆಯಲ್ಲಿ ಸತತ ಐದು ದಿನ ನಡೆಯುವ ಈ ಪಂದ್ಯಾಟದ ಸಂಪೂರ್ಣ ನಿರ್ಣಾಯಕರು ರಾಷ್ಟ್ರೀಯ ಮೂಯಿಥಾಯಿ ಎಸೋಸಿಯೇಶನ್‌ನವರೇ ಆಗಿದ್ದು ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ .27 ರಾಜ್ಯಗಳ 400ಕ್ಕೂ ಆಧಿಕ ಕ್ರೀಡಾಳುಗಳು ಭಾಗವಹಿಸಿದ್ದು, ಕ್ರೀಡಾಳುಗಳ ಎಲ್ಲಾ ವ್ಯವಸ್ಥೆಗಳನ್ನು (ಊಟ ವಸತಿ) ಮಂಕಿ ಮೆಹಮ್ ಫೈಟ್ ಕ್ಲಬಿನವರು ವಹಿಸಿಕೊಂಡು ಅತ್ತಂತ ವ್ಯವಸ್ಥಿತ ರೀತಿಯಲ್ಲಿ ಪಂದ್ಯಾಟದ ಯಶಸ್ವಿಗೆ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಎಂದು ಮಾಯಿಥಾಯ್ ಎಸೋಶಿಯಸ್‌ನ ರಾಜ್ಯಾಧ್ಯಕ್ಷರಾದ ರಾಜಗೋಪಾಲ್ ರೈ ತಿಳಿಸಿದ್ದಾರೆ.

Comments are closed.