ಕರಾವಳಿ

ಡಿ.18-25: ಪಚ್ಚನಾಡಿ ಬಂದಲೆ ಶ್ರೀ ಶ್ರೀಮಂತ ರಾಜಗುಳಿಗ ಕ್ಷೇತ್ರದಲ್ಲಿ ನಾಗಮಂಡಲೋತ್ಸವ ಮತ್ತು ಧರ್ಮದೈವಗಳ ಕೋಲೋತ್ಸವ

Pinterest LinkedIn Tumblr

ಮಂಗಳೂರು : ನಗರದ ಪದವಿನಂಗಡಿ ಸಮೀಪದ ಬಂದಲೆ – ಪಚ್ಚನಾಡಿ ಮೂಡುಮನೆ ಗುತ್ತು ಶ್ರೀ ಶ್ರೀಮಂತ ರಾಜಗುಳಿಗ ಕ್ಷೇತ್ರದಲ್ಲಿರುವ ನಾಗಬನದಲ್ಲಿ ಡಿ. 18 ರಿಂದ 25ರ ವರೆಗೆ ಅಷ್ಟಪವಿತ್ರ ನಾಗಮಂಡಲೋತ್ಸವ ವೈಭವ ಮತ್ತು ಧರ್ಮದೈವಗಳ ಕೋಲೋತ್ಸವ ನಡೆಯಲಿದೆ ಎಂದು ನಾಗಮಂಡಲೋತ್ಸವ ಸಮತಿ ಅಧ್ಯಕ್ಷ ಗಣೇಶ್.ಎ.ಬಂಗೇರ ತಿಳಿಸಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ದಿನೇಶ್ ಪೆಜತ್ತಾಯ ಪೂಮಾವರ ಗುತ್ತು ಅವರ ನೇತೃತ್ವದಲ್ಲಿ ನಾಗ ಪ್ರತಿಷ್ಠೆ , ಆಶ್ಲೇಷಾ ಬಲಿ, ತನು ತಂಬಿಲ ಸೇವೆ, ನಾಗತರ್ಪಣ ಸೇವೆ ನಡೆಯಲಿದೆ.

ಡಿ.21ರಂದು ರಾತ್ರಿ 7.30ಕ್ಕೆ ಸಗ್ರಿ ಗೋಪಾಲಕೃಷ್ಣ ಸಾಮಗ ನೇತೃತ್ವದಲ್ಲಿ ಅಷ್ಟ ಪವಿತ್ರ ನಾಗಮಂಡಲೋತ್ಸವ ವೈಭವವು ಮದ್ದೂರು ಕೃಷ್ಣ ಪ್ರಸಾದ ವೈದ್ಯ ಮತ್ತು ಬಳಗದವರಿಂದ, ನಾಗಕನ್ನಿಕೆಯರಾಗಿ ಬಾಲಕೃಷ್ಣ ವೈದ್ಯ ಮತ್ತು ನಟರಾಜ ವೈದ್ಯ ಅವರ ಸಹಯೋಗದಲ್ಲಿ ನಡೆಯಲಿದೆ ಎಂದು ಹೇಳಿದರು.

ಡಿ.23ರಿಂದ 25ರವರೆಗೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಹೂವಿನ ಪೂಜೆ ಸಹಿತ ವಿವಿಧ ಕಾರ್ಯಕ್ರಮ,25ರಂದು ಬೆಳಗ್ಗೆ 10ಕ್ಕೆ ಶ್ರೀ ಶ್ರೀಮಂತ ರಾಜಗುಳಿಗ ದೈವದ ವೈಭವದ ಕೋಲೋತ್ಸವವು ಕ್ಷೇತ್ರದ ಧರ್ಮಧರ್ಶಿಗಳಾದ ತುಳು ರಂಗಭೂಮಿ ಹಾಗೂ ಚಲನಚಿತ್ರರಂಗದ ಖ್ಯಾತ ಕಲಾವಿದ ಸತೀಶ್ ಬಂದಲೆ ಅವರ ನೇತೃತ್ವದಲ್ಲಿ ಸಂಪನ್ನಗೊಳ್ಳಲಿದೆ.

ಕಾರ್ಯಕ್ರಮದ ಯಶಸ್ಸಿಗೆ ಸ್ವಾಗತ ಸಮಿತಿ ರಚಿಸಿದ್ದು, ಈಗಾಗಲೇ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ ಎಂದರು. ಉತ್ಸವದ ದಿನಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಅನಸಂತರ್ಪಣೆ ನಡೆಯಲಿದ್ದು, ನಾಗಮಂಡಲೋತ್ಸವ ದಿನ 60 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಗಣೇಶ್. ಬಂಗೇರ ಅವರು ತಿಳಿಸಿದರು.

ಶ್ರೀ ಶ್ರೀಮಂತ ರಾಜಗುಳಿಗ ಕ್ಷೇತ್ರದ ಧರ್ಮದರ್ಶಿ ಸತೀಶ್ ಬಂದಲೆ ಅವರು ಕ್ಷೇತ್ರದ ಹಿನ್ನೆಲೆ ಹಾಗೂ ಕಾರ್ಯಕ್ರಮಗಳ ಪೂರಕ ಮಾಹಿತಿಗಳನ್ನು ನೀಡಿದರು.  ಪ್ರಚಾರ ಸಮಿತಿ ಸಂಚಾಲಕ ಬಾಲಕೃಷ್ಣ ಪಚ್ಚನಾಡಿ ಉಪಸ್ಥಿತರಿದ್ದರು.

Comments are closed.