ಕರಾವಳಿ

ಉಳ್ತೂರು ಗೋ ಕಳವು ಪ್ರಕರಣ: ಕೋಟ ಪೊಲೀಸರಿಂದ ಇಬ್ಬರು ದಲ್ಲಾಳಿಗಳ ಬಂಧನ

Pinterest LinkedIn Tumblr

ಕುಂದಾಪುರ: ಉಳ್ತೂರು ಹೊಯ್ಗೆ ಸಾಲು ಎಂಬಲ್ಲಿನ ನಿವಾಸಿ ಪ್ರತಾಪ ಶೆಟ್ಟಿಯವರ ಮನೆಯಲ್ಲಿ ಹೊಸ್ವಿನ್ ಪ್ರಿಸಿಯನ್ (HF) ತಳಿಯ ದನ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕೋಟ ಪೊಲೀಸ್ ಠಾಣಾಧಿಕಾರಿ ನಿತ್ಯಾನಂದ ಗೌಡ ಮತ್ತು ತಂಡ ಬಂಧಿಸಿದೆ.

ಉಳ್ತೂರು ಆಸುಪಾಸಿನವರೇ ಆದ ನಾಗರಾಜ ಹಾಗೂ ಮಾಧವ ಬಂಧಿತ ಆರೋಪಿಗಳು.

ಕಳೆದೊಂದು ವಾರದ ಹಿಂದೆ ಉಳ್ತೂರು ಭಾಗದಲ್ಲಿ ಈ ದನ ಕಳವು ಪ್ರಕರಣ ನಡೆದಿತ್ತು. ನಿರಂತರವಾಗಿ ಗೋ ಕಳವು ನಡೆಯುತ್ತಿದ್ದ ಹಿನ್ನೆಲೆ ಹಿಂದೂ ಪರ ಸಂಘಟನೆಗಳು ಕೂಡ ಆಕ್ರೋಷ ವ್ಯಕ್ತಪಡಿಸಿದ್ದರು. ಅಲ್ಲದೇ ಸ್ಥಳೀಯ ಕೆಲವು ಮಧ್ಯವರ್ತಿಗಳ ಮೇಲೂ ಆರೋಪವಿತ್ತು. ಇದೇ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಅನಾನಾಸ್ಪದ ವ್ಯಕ್ತಿಗಳ ವಿಚಾರಣೆ ಮುಂದುವರೆಸಿದ್ದರು. ಅಂತೆಯೇ ಸದ್ಯ ಇಬ್ಬರನ್ನು‌ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಕೋಟ ಪಿಎಸ್ಐ ನಿತ್ಯಾನಂದ ಗೌಡ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಸ್ಥಳೀಯರು ಹಾಗೂ ಹಿಙದೂಪರ ಸಂಘಟನೆಯವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Comments are closed.