ಪಣಜಿ: ಭಾರತೀಯ ನೌಕಾ ದಳಕ್ಕೆ ಸೇರಿದ ಮಿಗ್ 29 ತರಬೇತಿ ಯುದ್ಧ ವಿಮಾನವೊಂದು ಇಂದು ಬೆಳಗ್ಗೆ ಗೋವಾದ ಗ್ರಾಮ ವೊಂದರಲ್ಲಿ ಪತನಗೊಂಡಿದೆ.ಈ ದುರ್ಘಟನೆಯಲ್ಲಿ ಇಬ್ಬರು ಪೈಲೆಟ್‍ಗಳು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ನೌಕಾ ದಳದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಎಂದಿನಂತೆ ಮಿಗ್ ಪೈಟರ್ ಜೆಟ್ ತರಬೇತಿ ವಿಮಾನ ಮೇಲಕ್ಕೆ ಹಾರಿದ ಸ್ವಲ್ಪ ಹೊತ್ತಿನಲ್ಲೇ ಅಪಘಾತಕ್ಕೀಡಾಯಿತು. ಅದರಲ್ಲಿ ಇಬ್ಬರು ಪೈಲೆಟ್‍ಗಳು ಸುರಕ್ಷಿತವಾಗಿ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾದರು ಎಂದು ಗೋವಾದ ನೇವಿ ಫ್ಲಾಗ್ ಆಫಿಸರ್ ರೇರ್ ಅಡ್ಮಿರಲ್ ಪಿಲಿಪೋಸ್ ಜಾರ್ಜ್ ತಿಳಿಸಿದ್ದಾರೆ.
ಗೋವಾದ ದಬೋಲಿಂ ಬಳಿ ಲಂಗರು ಹಾಕಿರುವ ಐಎನ್‍ಎಸ್ ಹಂಸ ಯುದ್ಧ ನೌಕೆಗೆ ಸೇರಿದ ತರಬೇತಿ ವಿಮಾನ ಇದಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜಸ್ತಾನ , ಗುಜರಾತ್ ವಿವಿಧ ರಾಜ್ಯಗಳಲ್ಲಿ ಭಾರತೀಯ ವಾಯು ಪಡೆಗೆ ಸೇರಿದ ಯುದ್ಧ ವಿಮಾನಗಳು ಪತನಗೊಂಡು ಪೈಲೆಟ್‍ಗಳು ಪಾರಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
Comments are closed.