ಕರಾವಳಿ

ಮನಪಾ ಚುನಾವಣೆ : ಮಧ್ಯಾಹ್ನ 3 ಗಂಟೆಗೆ 46.81 ಶೇ. ಮತದಾನ

Pinterest LinkedIn Tumblr

ಮಂಗಳೂರು, ನವೆಂಬರ್ 12 ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಿಗೆ ಇಂದು ನಡೆದ ಚುನಾವಣೆಯು ಬೆಳಗ್ಗೆ 7ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆಗೆ ಮುಕ್ತಯವಾಗಿದೆ. 39 ನೇ ವಾರ್ಡ್ ವಾರ್ಡ್‌ನಲ್ಲಿ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ ಬಿಟ್ಟರೆ ಉಳಿದ ಎಲ್ಲಾ ಕಡೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.

 ಬೆಳಗ್ಗಿನಿಂದ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ 39.50 ಶೇ. ಮತದಾನವಾಗಿದೆ. ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ 46.81 ಶೇ. ಮತದಾನವಾಗಿದೆ. ಈ ವೇಳೆ 91517 ಮಂದಿ ಪುರುಷರು ಹಾಗೂ 94610 ಮಂದಿ ಮಹಿಳೆಯರು ಮತ ಚಲಾಯಿಸಿದ್ದರು.

Comments are closed.