ಕರಾವಳಿ

ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಮತದಾನ

Pinterest LinkedIn Tumblr

ಮಂಗಳೂರು, ನವೆಂಬರ್ 12: ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಗರದ ಲೇಡಿಹಿಲ್ ನಲ್ಲಿರುವ ಸೈಂಟ್ ಅಲೋಸಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ ಚಲಾಯಿಸಿದರು.

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ, ಇಂದು ಪಾಲಿಕೆಯ 60 ವಾರ್ಡ್​​ಗಳಿಗೆ ಮತದಾನ ನಡೆಯಲಿದೆ. ಈ ಹಿನ್ನೆಲೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗೆ ಒಟ್ಟು 234 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ 66, ಬಿಜೆಪಿ 94, ಜೆಡಿಎಸ್‌ 14, ಸಿಪಿಐ 1, ಸಿಪಿಎಂ 8, ಎಸ್‌ಡಿಪಿಐ 10, ಜೆಡಿಯು 2, ಡಬ್ಲ್ಯೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 3, ಪಕ್ಷೇತರರು 35 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 180 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಪಾಲಿಕೆಯ 21 ವಾರ್ಡ್ ಗಳಲ್ಲಿ ನೇರಸ್ಪರ್ಧೆ , 24 ವಾರ್ಡ್ ಗಳಲ್ಲಿ ತ್ರಿಕೋನ, 9 ವಾರ್ಡ್ ಗಳಲ್ಲಿ ಚತುಷ್ಕೋನ ಹಾಗೂ 6 ಕ್ಷೇತ್ರಗಳಲ್ಲಿ ಪಂಚಕೋನ ಸ್ಪರ್ಧೆ ಇದೆ.

Comments are closed.