ಕರಾವಳಿ

ಇಂದು ಮನಪಾ ಚುನಾವಣೆ : ಹಲವೆಡೆ ಬಿರುಸಿನ ಮತದಾನ – ಕೆಲೆವೆಡೆ ನೀರಸ ಮತದಾನ

Pinterest LinkedIn Tumblr

ಮಂಗಳೂರು, ನವೆಂಬರ್.12 : ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ (ಇಂದು) ನವೆಂಬರ್ 12ರಂದು ಬೆಳಗ್ಗೆ 7 ಗಂಟೆಯಿಂದಲೇ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಕೆಲವೆಡೆ ಮತದಾನ ಬಿರುಸಿನಿಂದ ಸಾಗುತ್ತಿದೆ. ಗಾಂಧಿನಗರ ಶಾಲೆ ಸೇರಿದಂತೆ ಕೆಲವು ಮತಗಟ್ಟೆಗಳಲ್ಲಿ ನೀರಸ ಮತದಾನ ಕಂಡು ಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ.ಕಾಮತ್, ಮಾಜಿ ಶಾಸಕ ಜೆ.ಆರ್.ಲೋಬೋ ಸೇರಿದಂತೆ ಹಲವಾರು ಪ್ರಮುಖರು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. 92 ವರ್ಷದ ಹಿರಿಯ ಮಹಿಳೆ ಯಜಿನಿ.ಕುಲಾಸೊ ತಮ್ಮ ಹಕ್ಕನ್ನು ಚಲಾಯಿಸಿದರು.

ಮಾಜಿ ಶಾಸಕ ಜೆ. ಆರ್. ಲೋಬೊ ಸೇಂಟ್ ಸಬೆಸ್ಟಿಯನ್ ಶಾಲೆಯಲ್ಲಿ ಮತ ಚಲಾಯಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ಇಂದು ಚುನಾವಣೆ ನಡೆಯಲಿದ್ದು, ನ.14 ರಂದು ಮತ ಎಣಿಕೆ ನಡೆಯಲಿದೆ. ಮತಗಟ್ಟೆಯ ಸುತ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ

ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಒಟ್ಟು 60 ವಾರ್ಡ್‌ಗಳಿದೆ. ಈ ವಾರ್ಡ್’ಗಳಿಗೆ ಒಟ್ಟು 12 ಚುನಾವಣಾಧಿಕಾರಿ, 12 ಉಪ ಚುನಾವಣಾಧಿಕಾರಿಗಳಿದ್ದಾರೆ. ಒಟ್ಟು 448 ಬೂತ್‌ಗಳಿದ್ದು ಇದಕ್ಕೆ 485 ಪ್ರತಿಯೊಂದು ಬೂತ್‌’ಗೂ ತಲಾ ಒಬ್ಬರಂತೆ ಮತಗಟ್ಟೆ ಅಧ್ಯಕ್ಷ ಅಧಿಕಾರಿ (ಪಿಆರ್‌ಒ), ಸಹಾಯಕ ಅಧ್ಯಕ್ಷಾಧಿಕಾರಿಗಳನ್ನು (ಎಪಿಆರ್‌ಒ) ನೇಮಕ ಮಾಡಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗೆ ಒಟ್ಟು 234 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ 66, ಬಿಜೆಪಿ 94, ಜೆಡಿಎಸ್‌ 14, ಸಿಪಿಐ 1, ಸಿಪಿಎಂ 8, ಎಸ್‌ಡಿಪಿಐ 10, ಜೆಡಿಯು 2, ಡಬ್ಲ್ಯೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 3, ಪಕ್ಷೇತರರು 35 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 180 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಪಾಲಿಕೆಯ 21 ವಾರ್ಡ್ ಗಳಲ್ಲಿ ನೇರಸ್ಪರ್ಧೆ , 24 ವಾರ್ಡ್ ಗಳಲ್ಲಿ ತ್ರಿಕೋನ, 9 ವಾರ್ಡ್ ಗಳಲ್ಲಿ ಚತುಷ್ಕೋನ ಹಾಗೂ 6 ಕ್ಷೇತ್ರಗಳಲ್ಲಿ ಪಂಚಕೋನ ಸ್ಪರ್ಧೆ ಇದೆ.

Comments are closed.