ಕರಾವಳಿ

ಅಯೋಧ್ಯೆ ತೀರ್ಪಿನಿಂದ ಸಂಘರ್ಷವಾದರೆ ಉಪವಾಸ ಕೂರುವೆ – ಪೇಜಾವರ ಶ್ರೀ

Pinterest LinkedIn Tumblr

ಉಡುಪಿ: ಅಯೋಧ್ಯೆ ತೀರ್ಪು ಹಿಂದೂಗಳ ಪರವಾಗಿ ಬರುವ ನಿರೀಕ್ಷೆ ಇದೆ ಆದರೆ ಯಾರೂ ಕೂಡ ವಿಜಯೋತ್ಸವ ಮಾಡಬಾರದು. ನ್ಯಾಯಾಲಯ ನೀಡಿದ ತೀರ್ಪು ಯಾರ ಪರವಾಗಿಯೇ ಬರಲಿ, ಅದನ್ನು ನಾಡಿನ ಜನತೆ ಶಾಂತವಾಗಿ ಸ್ವೀಕರಿಸಬೇಕು. ಒಂದು ವೇಳೆ ಶಾಂತಿ ಭಂಗವಾದರೆ ನಾನು ಉಪವಾಸ ಸತ್ಯಾಗ್ರಹ ಕೂರುತ್ತೇನೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.

ಅವರು ರಾಮ ಮಂದಿರ – ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಶೀಘ್ರದಲ್ಲೇ ಹೊರಬೀಳಲಿದ್ದು ಪತ್ರಿಕಾಗೋಷ್ಟಿ ನಡೆಸಿ ತಮ್ಮ ಅಭಿಪ್ರಾಯ ಹಮ್ಚಿಕೊಂಡರು.

ಕರಾವಳಿಯಲ್ಲಿ ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು ತೀರ್ಪು ಯಾರ ಪರ ಬಂದರೂ ಜನರು ಶಾಂತಿ ಕಾಪಾಡಬೇಕು, ಮೆರವಣಿಗೆ ವಿಜಯೋತ್ಸವದಿಂದ ಘರ್ಷಣೆಗೆ ಅವಕಾಶವಾಗುತ್ತದೆ. ಒಂದು ವೇಳೆ ಶಾಂತಿಭಂಗವಾದಲ್ಲಿ ಉಪವಾಸ ಕುಳಿತುಕೊಳ್ಳುತ್ತೇನೆ ಎಂದು ಹೇಳಿ ಶ್ರೀಗಳು, ಒಂದು ವೇಳೆ ಹಿಂದೂಗಳ ಪರ ತೀರ್ಪು ಬಂದರೆ ರಾಮಮಂದಿರ ನಿರ್ಮಾಣ ಆಗಲಿದೆ ಎಂದರು. ವಿಜಯೋತ್ಸವವನ್ನು ಬೇಕಾದರೆ ಭಕ್ತರು ತಮ್ಮ ಮನೆಗಳಲ್ಲಿ ಪೂಜೆ, ಭಜನೆ ಮಾಡುವ ಮೂಲಕ ಆಚರಿಸಲಿ. ಈ ಮನವಿ ಎಲ್ಲಾ ಹಿಂದು ಪರ ಸಂಘಟನೆಗಳಿಗೂ ಅನ್ವಯಿಸುತ್ತದೆ ಎಂದು ಎಚ್ಚರಿಸಿದ್ದಾರೆ.

Comments are closed.