ಕರಾವಳಿ

ಮಣಿಪಾಲ ಭಾಗದಲ್ಲಿ ಮನೆ ಕಳವು, ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಖತರ್ನಾಕ್ ಬಂಧನ

Pinterest LinkedIn Tumblr

ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಮನೆ ಕಳ್ಳತನ ಹಾಗೂ ಲ್ಯಾಪ್ ಟಾಪ್ ಕಳ್ಳತನ ಪ್ರಕರಣಗಳು ವರದಿಯಾಗಿದ್ದು ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಹೊಯ್ಗೆಪದವು ಗ್ರಾಮದ ಯೋಗೀಶ್ ಎಂಬಾತನನ್ನು ಮಣಿಪಾಲ ಸಮೀಪದ ಪೆರಂಪಳ್ಳಿ ಬಳಿ ಬಂಧಿಸಿದ್ದು ಮಣಿಪಾಲ ಪೊಲೀಸ್ ಠಾಣೆಯ ವಿವಿಧ ಪ್ರಕರಣಗಳಲ್ಲಿ ಕಳವಾಗಿದ್ದ 133 ಗ್ರಾಂ ಚಿನ್ನಾಭರಣಗಳು, 5 ಲ್ಯಾಪ್ ಟಾಪ್ ಹಾಗೂ 1 ಲಕ್ಷ ರೂಪಾಯಿ ನಗದು ಹಣ ಮತ್ತು ಪ್ರಕರಣಕ್ಕೆ ಬಳಸಿದ ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದ್ದು ಈ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 6 ಲಕ್ಷದ 65 ಸಾವಿರ ಅಂದಾಜು ಆಗಿದೆ.

ಮಣಿಪಾಲ ಭಾಗದ ಮನೆಗಳಲ್ಲಿ ನಡೆದ ಕಳು ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಗಂಭೀರವಾಗಿ ಪರಿಗಣಿಸಿದ್ದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಅವರ ನಿರ್ದೇಶನದಲ್ಲಿ ತಂಡ ರಚನೆ ಮಾಡಿದ್ದುಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ. ಆರ್. ಜೈ ಶಂಕರ್ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ , ಪ್ರೋಬೇಷನರಿ ಪಿಎಸ್ಐ ರಾಜಶೇಖರ್ ವಂದಲಿ, ಸುಮಾ. ಬಿ., ಎಎಸ್ಐ ಶೈಲೇಶ್ ಹಾಗೂ ಸಿಬ್ಬಂದಿಯವರಾದ ದಯಾಕರ್ ಪ್ರಸಾದ್, ಅಬ್ದುಲ್ ರಜಾಕ್,ಥಾಮ್ಸನ್ ಜಡ್ಕಲ್, ಪ್ರಸನ್ನ, ಆದರ್ಶ,ಹೋಮ್ ಗಾರ್ಡ್ ಶ್ರೀನಿವಾಸ ಶೆಟ್ಟಿಗಾರ್ ಹಾಗೂ ಚಾಲಕ ಸುದೀಪ್ ಮೊದಲಾದವರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.