ಕರಾವಳಿ

ವಸತಿರಹಿತರಿಗೆ ಜಾಗ ಹಂಚಿಕೆ : 930 ಬಡ ಕುಟುಂಬಗಳಿಗೆ ದ್ರೋಹ ಬಗೆದ ಕಾಂಗ್ರೆಸ್ – ಶಾಸಕ ಕಾಮತ್ ಆರೋಪ

Pinterest LinkedIn Tumblr

ಮಂಗಳೂರು : ಶಕ್ತಿನಗರ ಸರ್ವೆ ನಂಬ್ರ 82 ರಲ್ಲ್ಲಿ ವಸತಿರಹಿತರಿಗಾಗಿ ಹೌಸಿಂಗ್ ಆಪ್ ಆಲ್ 2022 ಪ್ರಧಾನ ಮಂತ್ರಿ ಅವಾಸ್ ಯೋಜನೆ ಹೌಸಿಂಗ್ ಇನ್ ಪಾರ್ಟನರ್ ಶಿಪ್ ಯೋಜನೆಯಡಿ ಜಿ+3 ಮಾದರಿಯ 930 ವಸತಿ ಗೃಹಗಳ ನಿರ್ಮಾಣದ ಬಗ್ಗೆ ಈಗಾಗಲೇ ಮಂಗಳೂರು ನಗರ ಪಾಲಿಕೆಯಲ್ಲಿ 50 ಕೋಟಿ ರೂಪಾಯಿ ಅನುದಾನ ಮಂಜೂರು ಆಗಿರುತ್ತದೆ. ಆದರೆ ಕಾಯ್ದಿರಿಸಿದ ಜಮೀನು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ (ಡೀಮಡ್ ಪಾರೆಸ್ಟ್) ಬರುವುದೆಂದು ಗೊತ್ತಿದ್ದರೂ ಸಹ ಚುನಾವಣೆಯ ದೃಷ್ಟಿಯಿಂದ ಮಾಜಿ ಶಾಸಕ ಜೆ.ಆರ್.ಲೋಬೊ ರವರು ಆಶ್ರಯ ವಂಚಿತರಿಗೆ ಜಾಗವನ್ನು ಹಂಚಿಕೆ ಮಾಡಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆ.ಆರ್.ಲೋಬೊ ವಸತಿ ರಹಿತರಿಗೆ ಹಂಚಿತ ಮಾಡಲಾದ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಇದುವರೆಗೂ ಸಾದ್ಯವಾಗಲಿಲ್ಲ. ಚುನಾವಣೆಯ ದೃಷ್ಟಿಯಿಂದ ಸಾರ್ವಜನಿಕರ ಕಣ್ಣಿಗೆ ಮಣ್ಣಿರುಚುವ ರೀತಿಯಲ್ಲಿ ಹಂಚಿಕೆ ಮಾಡಿ ಬಡ ಜನರನ್ನು ತ್ರಿಶಂಕು ಸ್ಥಿತಿಯಲ್ಲಿ ನಿಲ್ಲಿಸಿದ್ದಾರೆ ಎಂದರು..

ಸಧ್ಯ ರಾಜ್ಯ ಮತ್ತು ಕೇಂದ್ರ ಸರಕಾರದ ಆದೇಶದ ಪ್ರಕಾರ ಸಂರಕ್ಷಿತ ಅರಣ್ಯ ಪ್ರದೇಶದ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳುತ್ತಿದೆ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಜಾಗದ ಬದಲಿಗೆ ಜಿಲ್ಲೆಯಲ್ಲಿ ಬದಲಿ ಜಾಗವನ್ನು ಕಲ್ಪಿಸಿ ಕೊಡುವುದಾಗಿ ಕೇಳಿದರೂ ಸಹ ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಸಂರಕ್ಷಿತ ಅರಣ್ಯ ಪ್ರದೇಶದ ಜಾಗವನ್ನು ಬದಲಿಸಿ ಇನ್ನಿತ್ತರ ವಿಚಾರಗಳಿಗೆ ಅದನ್ನು ಉಪಯೋಗಿಸಲು ಲೆಕ್ಕ ಕೊಡಬೇಕೆಂದು ಸುಪ್ರೀಂ ಕೋರ್ಟ್ ಅದೇಶವಿದೆ.

ಈ ಜಾಗದಲ್ಲಿ ಕಟ್ಟಡ ನಿರ್ಮಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದು, ಆ ಮೂಲಕ ಜನರ ಭಾವನೆಗಳೊಂದಿಗೆ ಚೆಲ್ಲಾಟ ಮಾಡಿದ್ದು. ಹಲವಾರು ವಸತಿ ರಹಿತ ಕುಟುಂಬಗಳ ಕನಸನ್ನು ನುಚ್ಚು ನೂರು ಮಾಡಿದ್ದು ಕಾಂಗ್ರೇಸ್ ಸಾಧನೆ ಆಗಿದೆ. ಇಂತಹ ಡೊಂಗೀ ಸಾಧನೆಯ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿದರೆ ಇನ್ನೂ ಕೂಡ ಅದೆಷ್ಟೊ ವಸತಿ ರಹಿತ ಕುಟುಂಬಗಳಿಗೆ ಅನ್ಯಾಯವಾಗಬಹುದು.

ಹಿಂದಿನ ಕಾಂಗ್ರೇಸ್ಸ್ ಆಡಳಿತದ ಅವಧಿಯಲ್ಲಿ ಬಡ ಜನರಿಗೆ ಮಾಡಿದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ನಾನು ಈಗಾಗಲೇ ಕಣ್ಣೂರಿನಲ್ಲಿ ೭ ಎಕರೆ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಆರ್.ಟಿ.ಸಿ. ಕಾಲಂ ೯ ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹೆಸರಿನಲ್ಲಿ ಜಮೀನನ್ನು ಕಾಯ್ದಿರಿಸಲು ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಶಾಸಕರು ಹೇಳಿದರು.

Comments are closed.