ಕರಾವಳಿ

ದೇವದಾಸ್ ಕಾಪಿಕಾಡ್ ಅವರ ಬಹುನಿರೀಕ್ಷಿತ “ಜಬರದಸ್ತ್ ಶಂಕರ” ತುಳು ಸಿನಿಮಾ ನಾಳೆ ಬಿಡುಗಡೆ

Pinterest LinkedIn Tumblr

ಮಂಗಳೂರು,ನವೆಂಬರ್. 07 : ಜಲನಿಧಿ ಫಿಲ್ಸ್ ಬ್ಯಾನರಿನಲ್ಲಿ ಇದೇ ಮೊದಲ ಬಾರಿಗೆ ಅನಿಲ್ ಕುಮಾರ್ ಮತ್ತು ಲೊಕೇಶ್ ಕೋಟ್ಯಾನ್ ನಿರ್ಮಾಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದಲ್ಲಿ ತಯಾರಾಗಿರುವ ತುಳು ಚಿತ್ರರಂಗ ಬಹುನಿರೀಕ್ಷೆಯಿಂದ ಕಾಯುತ್ತಿರುವ ಹೊಚ್ಚ ಹೊಸ ತುಳು ಸಿನಿಮಾ “ಜಬರದಸ್ತ್ ಶಂಕರ” ನವೆಂಬರ್ 8ರಂದು ಶುಕ್ರವಾರ ಬಿಡುಗಡೆ ಯಾಗಲಿದೆ ಎಂದು ಚಿತ್ರದ ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ “ಜಬರದಸ್ತ್ ಶಂಕರ” ತುಳು ಸಿನಿಮಾ ನಾಳೆ ಕರಾವಳಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಬಿಡುಗಡೆಗೊಳ್ಳಲ್ಲಿದೆ ಎಂದು ಹೇಳಿದರು.

ಅರ್ಜುನ್ ಕಾಪಿಕಾಡ್ ನಾಯಕ ನಟನಾಗಿರುವ “ಜಬರದಸ್ತ್ ಶಂಕರ” ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿದೆ. ಸಾಮಾನ್ಯವಾಗಿ ತುಳು ಚಿತ್ರಗಳಲ್ಲಿ ಹಾಸ್ಯವೇ ಪ್ರಧಾನ ಆಗಿರುತ್ತದೆ. ದೇವದಾಸ್ ಕಾಪಿಕಾಡ್ ಅವರೇ ಕತೆ, ಚಿತ್ರಕತೆ, ಸಂಭಾಷಣೆ, ಹಾಡುಗಳನ್ನು ಬರೆದು ಚಿತ್ರ ನಿರ್ದೇಶನ ಮಾಡಿರುವಾಗ ಹಾಸ್ಯ ಇದ್ದೇ ಇರುತ್ತದೆ.ಆದರೆ, “ಜಬರದಸ್ತ್ ಶಂಕರ” ಕೇವಲ ಹಾಸ್ಯ ಚಿತ್ರವಾಗಿರದೆ ತುಳು ಚಿತ್ರರಂಗಕ್ಕೆ ಹೊಸ ಆಯಾಮ ನೀಡುವ ಮಹತ್ತರವಾದ ಪ್ರಯತ್ನವನ್ನು ಮಾಡಲಾಗಿದೆ. ತುಳು ಚಿತ್ರರಂಗ ಬೆಳೆಯಲಿ ಎಂದು “ಜಬರದಸ್ತ್ ಶಂಕರ” ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು.

ನಾಯಕನಟ ಅರ್ಜುನ್ ಕಾಪಿಕಾಡ್ ಮಾತನಾಡಿ, ದೇವದಾಸ್ ಕಾಪಿಕಾಡ್ ಅವರು ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ತುಳು ಚಿತ್ರರಂಗದ ಮಟ್ಟಿಗೆ ವಿನೂತನ ಶೈಲಿಯಲ್ಲಿ ಮೂಡಿಬಂದಿದೆ.ಖ್ಯಾತ ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಾಸ್ ಮಾದ ತಂಡ ವಿನ್ಯಾಸಗೊಳಿಸಿದ ಸ್ಟಂಟ್ ದೃಶ್ಯಗಳು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ತುಳು ಚಿತ್ರರಂಗಕ್ಕೆ ಹೊಸದಾದ ಫೈಟ್ ದೃಶ್ಯಗಳನ್ನು “ಜಬರದಸ್ತ್ ಶಂಕರ” ನಿಗಾಗಿ ಅಳವಡಿಸಲಾಗಿದೆ ಎಂದು ಹೇಳಿದರು.

ಚಿತ್ರದ ನಿರ್ಮಾಪಕರಾದ ಅನಿಲ್ ಕುಮಾರ್ ಅವರು ಮಾತನಾಡಿ, ಚಿತ್ರದಿಂದ ಬರುವ ಲಾಭಾಂಶದಲ್ಲಿ ಸ್ವಲ್ಪ ಭಾಗವನ್ನು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ತಿಳಿಸಿದರು.

ತಾರಾಗಣಃ ಅರ್ಜುನ್ ಕಾಪಿಕಾಡ್,ನೀತಾ ಅಶೋಕ್, ರಾಶಿ ಬಾಲಕೃಷ್ಣ, ಸಾಯಿ ಕೃಷ್ಣ ಕುಡ್ಲ, ದೇವದಾಸ್ ಕಾಪಿಕಾಡ್, ಶ್ರೀಕೃಷ್ಣ ಕುಡ್ಲ, ಗೋಪಿನಾಥ್ ಭಟ್, ಸತೀಶ್ ಬಂಡಾಲೆ, ಪ್ರತೀಕ್ ಶೆಟ್ಟಿ, ಮಿಮಿಕ್ರಿ ಶರಣ್, ಸುನೀಲ್ ನೆಲ್ಲಿಗುಡ್ಡೆ, ಲಕ್ಷ್ಮಣ್ ಮಲ್ಲೂರು, ಗೀರೀಶ್ ಶೆಟ್ಟಿ ಕಟೀಲ್, ಸರೋಜಿನಿ ಶೆಟ್ಟಿ, ತಿಮ್ಮಪ್ಪ ಕುಲಾಲ್ ಮತ್ತಿತರರು.

ರಾಜೇಶ್ ಕುಡ್ಲ ಕಾರ್ಯಕಾರಿ ನಿರ್ಮಾಪಕರಾಗಿದ್ದು, ತಾಂತ್ರಿಕ ವರ್ಗದಲ್ಲಿ ಛಾಯಾಗ್ರಾಹಣ ಸಿದ್ದು ಜಿಎಸ್ ಮತ್ತು ಉದಯ ಬಲ್ಲಾಳ್, ಸಂಕಲನ ಸುಜೀತ್ ನಾಯಕ್, ನೃತ್ಯ ಸಂಯೋಜನೆ ಸ್ಟಾರ್ ಗಿರಿ ಮತ್ತು ವಿನಾಯಕ ಆಚಾರ್ಯ, ಸಹ ನಿರ್ದೇಶನ ಪ್ರಶಾಂತ್ ಕಲ್ಲಡ್ಕ, ಕಲೆ ಕೇಶವ ಸುವರ್ಣ, ಕಾಸ್ಟ್ಯೂಮ್ ಶರತ್ ಪೂಜಾರಿ, ಮೇಕ್ ಅಪ್ ಮೋಹನ್, ಕೇಶಾಲಂಕಾರ ಮಮತಾ ಶೆಟ್ಟಿ ಮತ್ತು ಪಿಂಕಿ ಅಮೀನ್ ಮತ್ತಿತರರು. ಅರ್ಜುನ್ ಕಾಪಿಕಾಡ್ ಪ್ರಧಾನ ಸಹನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಮತ್ತೋರ್ವ ನಿರ್ಮಾಪಕ ಲೊಕೇಶ್ ಕೋಟ್ಯಾನ್ ಹಾಗೂ ಚಿತ್ರ ತಂಡ ಮಾಧ್ಯಮ (ಪಿಆರ್‌ಓ) ಸಲಹೆಗಾರ ಜಗನ್ನಾಥ್ ಶೆಟ್ಟಿ ಉಪಸ್ಥಿತರಿದ್ದರು.

Comments are closed.