ಕರಾವಳಿ

ಕಂಟೈನರ್ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ 18 ಜಾನುವಾರು ರಕ್ಷಣೆ: ಇಬ್ಬರ ಬಂಧನ

Pinterest LinkedIn Tumblr

ಉಡುಪಿ: ಉಡುಪಿಯಿಂದ ಮಂಗಳೂರು ಕಡೆಗೆ ಕಂಟೈನರ್ ಲಾರಿಯಲ್ಲಿ ಸಾಗಿಸುತ್ತಿದ್ದ 18 ಜಾನುವಾರುಗಳನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಸೋಮವಾರದಂದು ಉಡುಪಿ ಜಿಲ್ಲೆಯ ಕಟಪಾಡಿ ಜಂಕ್ಷನ್ ಬಳಿ ನಡೆದಿದೆ. ಕಂಟೈನರ್ ಲಾರಿ ಚಾಲಕ ದಾವಣಗೆರೆ ಮೂಲದ ತನ್ವೀರ್ ಯಾನೆ ತನ್ವೀರ್ ಅಹಮ್ಮದ್(25) ಹಾಗೂ ದಾವಣಗೆರೆಯ ಹೈದರ್ ಆಲಿ(24) ಬಂಧಿತ ಆರೋಪಿಗಳು. ಅಲ್ಲದೇ ಲಾರಿ ಮಾಲಕ ಇಮ್ರಾನ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಘಟನೆ ವಿವರ: ಉಡುಪಿಯಿಂದ ಮಂಗಳುರು ಕಡೆಗೆ ಲಾರಿಯಲ್ಲಿ ಜಾನುವಾರುಗಳನ್ನು ಪರವಾನಿಗೆ ಇಲ್ಲದೇ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿಯಂತೆ ಕಾಪು ಪೊಲೀಸರು ಕಟಪಾಡಿ ಜಂಕ್ಷನ್ ಬಳಿ ಕಂಟೈನರ್ ಲಾರಿಯನ್ನು ಅಡ್ದಗಟ್ಟಿದ್ದು ಅದರಲ್ಲಿ 10 ಎತ್ತು, 7 ಎಮ್ಮೆ ಮತ್ತು 1 ಕೋಣ ಸೇರಿದಂತೆ ಒಟ್ಟು 18 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಎತ್ತು, ಎಮ್ಮೆ ಹಾಗೂ ಕೋಣವನ್ನು ಬ್ರಹ್ಮಾವರದ ನೀಲಾವರ ಗೋಶಾಲೆಗೆ ರವಾನಿಸಲಾಗಿದೆ.

ಕಾರ್ಯಾಚರಣೆ ತಂಡ..
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್ ಅವರ ಮಾಹಿತಿಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಜೈಶಂಕರ್, ಕಾರ್ಕಳ ಉಪವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕ ಹಾಗೂ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಕಾಪು ಠಾಣಾಧಿಕಾರಿ ರಾಜಶೇಖರ್ ಬಿ ಸಾಗನೂರ್, ಪ್ರೋಬೆಷನರಿ ಪಿ.ಎಸ್.ಐ.ಗಳಾದ ಉದಯರವಿ, ಮಹಾದೇವ್ ಬೋಸ್ಲೆ, ಎ.ಎಸ್.ಐ. ಕರುಣಾಕರ್, ಸಿಬ್ಬಂದಿಗಳಾದ ಗಿರೀಶ್, ಆನಂದ, ಶ್ರೀನಾಥ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳಾದ ನಾಗೇಶ್ ಮತ್ತು ವೆಂಕಟರಮಣ ಈ ಕಾರ್ಯಾಚರಣೆಯಲ್ಲಿದ್ದರು.

Comments are closed.