ಕರಾವಳಿ

ಕದ್ರಿ ಸಮೀಪದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವೇಶ್ಯಾವಟಿಕೆ ಜಾಲ ಪತ್ತೆ : ಇಬ್ಬರು ಮಹಿಳಾ ಪಿಂಪ್‌ಗಳ ಬಂಧನ

Pinterest LinkedIn Tumblr

ಮಂಗಳೂರು : ನಗರದ ಕದ್ರಿ ಸ್ಮಶಾನ ಬಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಟಿಕೆ ಅಡ್ಡೆಗೆ ದಾಳಿ ಮಾಡಿರುವ ಕದ್ರಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದಾರೆ.

ನಗರದ ಕದ್ರಿ ಸ್ಮಶಾನ ಬಳಿಯ ಮರಿಯನ್ ಸೆಂಟಿನೆಲ್ ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ದಾಳಿ ನಡೆಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪಿಂಪ್ ಗಳಾಗಿದ್ದ ಮುಲ್ಕಿ ನಿವಾಸಿಗಳಾದ ಕಾವ್ಯ (32), ಲಕ್ಷ್ಮಿ (47) ಎಂದು ಹೆಸರಿಸಲಾಗಿದೆ.

ಇದೇ ವೇಳೆ ದಾಳಿ ವೇಳೆ ಸಿಕ್ಕಿರುವ ಓರ್ವ ನೊಂದ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ಯಲ್ಲಿ ಮಂಗಳೂರು ಪೂರ್ವ (ಕದ್ರಿ) ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈ ಮಾರುತಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

 

Comments are closed.