ಯಕ್ಷಗಾನ ಅಭ್ಯಾಸ ತರಗತಿ ದುಬಾಯಿ -ಅತಿಥಿ ಕಲಾವಿದರ ಸಮ್ಮಿಲನದಲ್ಲಿ ಯಶಸ್ಸು ಕಂಡ ಅಭೂತಪೂರ್ವ ಮಹಿಷಮರ್ಧಿನಿ ಜಗಜ್ಜನನಿ ಯಕ್ಷಗಾನ – ಭಕ್ತಿ-ಗಾನ ರಸಧಾರೆಯಲ್ಲಿ ತೇಲಾಡಿ ಸಂಭ್ರಮಿಸಿದ ಜನಸಾಗರ -ತುಂಬಿ ತುಳುಕಿದ ಸಬಾಂಗಣ-ದುಬಾಯಿಯಲ್ಲೇ ಹೊಸ ದಾಖಲೆಯ ಅನಾವರಣ

ದುಬಾಯಿ, ಆಕ್ಟೋಬರ್.21 : ಯಕ್ಷದ್ರುವ ಪಟ್ಲ ಟ್ರಸ್ಟ್ ನ ದುಬಾಯಿ ಘಟಕ ಮತ್ತು ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಜಂಟಿ ಆಶ್ರಯದಲ್ಲಿ ದುಬಾಯಿ ಕರಾಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ ಹಮ್ಮಿಕೊಂಡ ಪಟ್ಲ ಸಂಭ್ರಮ 2019 ದುಬಾಯಿ ಯಕ್ಷಗಾನ ಇತಿಹಾಸದಲ್ಲೇ, ಕಿಕ್ಕಿರಿದು ಸೇರಿದ ದಾಖಲೆಯ ಜನಸಾಗರ ಮತ್ತು ಒಂದು ಪೂರ್ಣಪ್ರಮಾಣದ ವೃತ್ತಿಪರಮೇಳದ ಪ್ರಸ್ತುತಿಗೆ ಸರಿಮಿಗಿಲಾದ ಪ್ರದರ್ಶನ, ಕರಾರುವಕ್ಕಾದ ಸಮಯಪಾಲನೆ, ಶಿಸ್ತುಬದ್ಧ ವ್ಯವಸ್ಥೆಗಳ ಮೂಲಕ ದುಬಾಯಿ ಯಕ್ಷಗಾನ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ.
ಮಧ್ಯಾಹ್ನ 3.15ಕ್ಕೆ ಸರಿಯಾಗಿ ಶ್ರೀಯುತ ವಾಸುದೇವಭಟ್ ಪುತ್ತಿಗೆ ಮತ್ತು ಲಕ್ಷ್ಮೀಕಾಂತ್ ಭಟ್ಟರ ನೇತೃತ್ವದ ಪುರೋಹಿತರ ತಂಡ ಚೌಕಿಪೂಜೆ ನೆರವೇರಿಸಿದರೆ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಬಾಲಕಲಾವಿದರ ತಂಡ ಮತ್ತು ನೂತನ ವಿದ್ಯಾರ್ಥಿಗಳಿಂದ ಸೊಗಸಾಗಿ ಮೂಡಿಬಂದ ಪೂರ್ವರಂಗ ಪ್ರಸ್ತುತಿ ರಂಗಪ್ರದರ್ಶನಕ್ಕೆ ಚಾಲನೆ ಒದಗಿಸಿತು.
ಆ ಬಳಿಕ ನಡೆದ ಹಾಸ್ಯ ವೈಭವದಲ್ಲಿ ಚಲನಚಿತ್ರ ನಟ ಅರವಿಂದ ಬೋಳಾರ್ ಮತ್ತು ಶ್ರೀಯುತ ದಿನೇಶ್ ಶೆಟ್ಟಿಗಾರ್ ಕೋಡಪದವು ಶ್ರೀಯುತ ಕರುಣಾಕರ ಶೆಟ್ಟಿಗಾರ್ ಕಾಶೀಪಟ್ಣರ ಸುಮಧುರ ಹಾಡುಗಾರಿಕೆಯೊಂದಿಗೆ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗೇಲಿಸಿದರು.
ಸಂಭ್ರಮದ ಮುಖ್ಯ ಅಂಗವಾದ ಸಭಾ ಕಾರ್ಯಕ್ರಮ ಸಮಯದ ಮಿತಿಯೊಳಗಡೆ ಎಲ್ಲಿಯೂ ಅತಿಯಾಗದೆ ಅಚ್ಚುಕಟ್ಟಾಗಿ ಮೂಡಿಬಂತು. ಈ ಸಮಾರಂಭದಲ್ಲಿ ಕನ್ನಡ ಚಲನಚಿತ್ರ ರಂಗದ ಬಹು ಬೇಡಿಕೆಯ ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್, ತುಳು ಚಿತ್ರರಂಗದ ಬಹುಬೇಡಿಕೆಯ ನಟ ಅರವಿಂದ ಬೋಳಾರ್, ಮತ್ತು ಶ್ರೀಯುತ ಅರ್ಜುನ್ ಕಾಪಿಕಾಡ್ಮು ಖ್ಯ ಅತಿಥಿಯಾಗಿ ಭಾಗವಹಿಸಿದರು.
ಪುನೀತ್ ರಾಜ್ ಕುಮಾರ್ ರವರು ಪಟ್ಲರ ಸಾಧನಯಿಂದ ಸಂತೋಷಪಟ್ಟು ಪಟ್ಲರ ಯಕ್ಷಾಶ್ರಯ ಯೋಜನೆಗೆ 5 ಲಕ್ಷ ರೂಪಾಯಿಗಳ ಚೆಕ್ನ್ನು ಯಕ್ಷಧ್ರುವ ಪಟ್ಲ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಶ್ರೀಯುತ ಪಟ್ಲ ಸತೀಶ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ವೇದಿಕೆಯಲ್ಲಿ ವೇದಿಕೆಯಲ್ಲಿ ದುಬೈಯ ಖ್ಯಾತ ಉದ್ಯಮಿ, ಚಲನಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ಪ್ರಮುಖರಾದ ಸುಧೀರ್ ಕುಮಾರ್ ಶೆಟ್ಟಿ, ಸುಜಾತ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಅನಂತ ಶೆಣೈ, ಗುಣಶೀಲ ಶೆಟ್ಟಿ, ಹರೀಶ್ ಬಂಗೇರ, ವಾಸುದೇವ ಭಟ್ ಪುತ್ತಿಗೆ, ರಘುರಾಮ ಶೆಟ್ಟಿ ಅಜಮಾನ್, ಪಟ್ಲ ಟ್ರಸ್ಟ್ ದುಬಾಯಿ ಘಟಕದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಮತ್ತು ಕೋಶಾಧಿಕಾರಿ ಹಾಗೂ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಸಂಚಾಲಕರಾದ ಶ್ರೀಯುತ ದಿನೇಶ್ ಶೆಟ್ಟಿ ಕೊಟ್ಟಿಂಜ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಬೇಕಾಗಿದ್ದ ದುಬಾಯಿಯ ಪ್ರಖ್ಯಾತ ವಾಣಿಜ್ಯೋದ್ಯಮಿಗಳಾದ ಶ್ರೀ ರೊನಾಲ್ಡ್ ಕೊಲಾಸೊ ಮತ್ತು ಡಾ.ಬಿ.ಆರ್. ಶೆಟ್ಟಿಯವರು ಅನಿವಾರ್ಯ ಕಾರಣಗಳಿಂದ ಗೈರಾಗಿದ್ದರೂ ಪಟ್ಲ ಟ್ರಸ್ಟ್ ನ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವನ್ನು ಘೋಷಿಸಿದ್ದಾರೆ.

ಶ್ರೀಮತಿ ಪ್ರಿಯ ಹರೀಶ್ ಶೆಟ್ಟಿ ಇವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ನಮ್ಮ ತಂಡದ ಹಿರಿಯ ಸದಸ್ಯ ಶ್ರೀಯುತ ವಿಠಲ ಶೆಟ್ಟಿ ಮತ್ತು ಶ್ರೀಯುತ ರಾಜೇಶ್ ಕುತ್ತಾರು ಸಹಕರಿಸಿ ಧನ್ಯವಾದ ಸಮರ್ಪಣೆ ಮಾಡಿದರು.
ಪುಷ್ಪಾಲಂಕಾರದಿಂದ ಸಜ್ಜುಗೊಂಡು ಝಗಮಗಿಸುವ ವಿದ್ಯುದ್ದೀಪಾಲಂಕಾರ, ನವ್ಯ ಉಯ್ಯಾಲೆಗಳ ಜೊತೆ ನಿಮರ್ಿಸಲ್ಪಟ್ಟ ಸಂಪ್ರದಾಯ ಬದ್ಧ ರಂಗಸ್ಥಳದಲ್ಲಿ ದುಬಾಯಿ ಯಕ್ಷಗುರು ಶ್ರೀಯುತ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ನಿದರ್ೇಶನದ ಮಹಿಷಮರ್ಧಿನಿ-ಜಗಜ್ಜನನಿ ಯಕ್ಷಗಾನ ಕಾರ್ಯಕ್ರಮ ಗಾನ ಗಂಧರ್ವ ಯಕ್ಷ ಧ್ರುವ ಪಟ್ಲ ಸತೀಶ ಶೆಟ್ಟರ ಸಾರಥ್ಯ ದಲ್ಲಿ ಅದ್ಭುತವಾಗಿ ಮೂಡಿ ಬಂತು.

ನಮ್ಮ ತಾಯ್ನಾಡಿನಿಂದ ಆಗಮಿಸಿದ ಅತಿಥಿ ಕಲಾವಿದರಲ್ಲಿ ಶ್ರೀಯುತ ಕರುಣಾಕರ ಶೆಟ್ಟಿಗಾರ್ ಕಾಶೀಪಟ್ಣ ಮತ್ತು ಡಾ. ಪ್ರಖ್ಯಾತ್ ಶೆಟ್ಟಿ ಭಾಗವತಿಕೆಯಲ್ಲಿ , ಶ್ರೀಯುತ ಪದ್ಮನಾಭ ಉಪಾಧ್ಯಾಯರು ಮತ್ತು ಶ್ರೀಯುತ ದಯಾನಂದ ಶೆಟ್ಟಿಗಾರ್ ಮಿಜಾರು ಚೆಂಡೆ-ಮದ್ದಳೆಯಲ್ಲಿ ತಮ್ಮ ಚಾಕಚಕ್ಯತೆ-ಕೈಚಳಕ ಸುಮಧುರ ಗಾಯನಗಳಿಂದ ನೆರೆದ ಸಭಾಸದರನ್ನು ರಂಜಿಸಿದರು.
ಶ್ರೀದೇವಿಯ ಪಾತ್ರದಲ್ಲಿ ಅತಿಥಿ ಕಲಾವಿದರಾದ ಶ್ರೀಯುತ ಮುರಳೀಧರ ಶೆಟ್ಟಿಗಾರ್ ಕನ್ನಡಿಕಟ್ಟೆ, ಮಾಲಿನಿ ದೂತ ಹಾಗೂ ಪಾತ್ರಿ ಮುಂತಾದ ಹಾಸ್ಯ ಪಾತ್ರ ಹಾಗೂ ಚಂಡಾಸುರನಾಗಿ ಶ್ರೀಯುತ ದಿನೇಶ ಶೆಟ್ಟಿಗಾರ್ ಕೋಡಪದವು, ಮಹಿಷಾಸುರ ಪಾತ್ರದಲ್ಲಿ ಶ್ರೀಯುತ ಸದಾಶಿವ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಸಚಿನ್ ಅಮೀನ್ ಉದ್ಯಾವರ ರಂಗಸ್ಥಳದಲ್ಲಿ ಬಣ್ಣದ ಲೋಕವನ್ನೇ ಸೃಷ್ಠಿಸಿದರು. ಪ್ರಸಾಧನ ಕಲಾವಿದರಾಗಿ, ಶ್ರೀಯುತ ಗಂಗಾಧರ ಡಿ.ಶೆಟ್ಟಿಗಾರ್ ಮತ್ತು ಶ್ರೀಯುತ ನಿತಿನ್ ಕುಂಪಲ ಮೇಕಪ್- ವೇಷಭೂಷಣಗಳ ಹೊಸ ಸಾಧ್ಯತೆಯನ್ನೇ ದುಬಾಯಿ ಕಲಾರಸಿಕರಿಗೆ ಪರಿಚಯಿಸಿದರು. ನೂತನ ವೇಷಭೂಷಣಗಳು ಪ್ರದರ್ಶನದ ಸೊಬಗು ಹೆಚ್ಚಿಸಿತು.






ಉಳಿದಂತೆ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಹಿಮ್ಮೇಳ-ಮುಮ್ಮೇಳದ ಕಲಾವಿದರು, ವಿದ್ಯಾಥರ್ಿಗಳು, ನೂತನ ರಂಗಪ್ರವೇಶ ಮಾಡಿದ ಮಕ್ಕಳು, ನೇಪಥ್ಯದ ಕಲಾವಿದರೇ ಮೊದಲಾಗಿ ಒಟ್ಟು 5 ಮಂದಿ ಭಾಗವತರು, 5 ಮಂದಿ ಚೆಂಡೆ-ಮದ್ದಳೆ ವಾದಕರು, 11 ಮಂದಿ ಅತಿಥಿ ಕಲಾವಿದರು ಹೀಗೆ ಎಲ್ಲಾ ಒಟ್ಟು ಸೇರಿ ಸರಿಯಾಗಿ 65 ಮಂದಿ ಕಲಾವಿದರು ಪೂರ್ವರಂಗ -ಉತ್ತರರಂಗ ಸಹಿತ ಸರಿಯಾಗಿ 88 ಪಾತ್ರಗಳನ್ನು ನಿರ್ವಹಿಸಿದರು.
ಈ ಅದ್ದೂರಿಯ ದುಬಾಯಿ ಪಟ್ಲ ಸಂಭ್ರಮ 2019 ರಲ್ಲಿ ಭಾಗವಹಿಸಲೆಂದೇ ಊರಿನಿಂದ ಆಗಮಿಸಿದಂತಹ ಯಕ್ಷಧ್ರುವ ಪಟ್ಲ ಟ್ರಸ್ಟ್ನ ಸದಸ್ಯರಾದ ಶ್ರೀಯುತರುಗಳಾದ ಭಾಸ್ಕರ ರೈ ಕುಕ್ಕುವಳ್ಳಿ, ಜಯರಾಮ ಶೇಖ ಅಡ್ಯಾರ್, ಸಂಕ್ರಾಂತ್ ಎಸ್. ಕಾಂಬ್ಳಿ, ಸತೀಶ್ ಶೆಟ್ಟಿ ಎಕ್ಕಾರು, ರವಿ ಶೆಟ್ಟಿ ಅಶೋಕ ನಗರ, ಶ್ರೀಮತಿ ಅಮಿತ ಮತ್ತು ಶ್ರೀ ಸುಧಾಕರ ಆಚಾರ್ಯ ದಂಪತಿಗಳು ಕಾರ್ಯಕ್ರಮದ ಅಂದ ಹೆಚ್ಚಿಸಿದರು.
ಸುಜಿತ್ ನಮ್ಮ ಕುಡ್ಲ, ಕಾರ್ಯಕ್ರಮದ ನೇರ ಪ್ರಸಾರಕ್ಕೆ ಸಹಕರಿಸಿದರು, ಕನ್ನಡಿಗ ವರ್ಲ್ಡ್ ದುಬಾಯಿಯ ಅಶೋಕ್ ಬೆಳ್ಮಣ್, ನಿವ್ಸ್ ಕನ್ನಡಿಗದ ಕಿರಣ್, ವಿ4 ನಿವ್ಸ್ ನ ಪ್ರಶಾಂತ್ ನಾಯರ್ ಮೊದಲಾದ ಮಾಧ್ಯಮ ಮಿತ್ರರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಪೂರ್ಣ ಸಹಕಾರ ನೀಡಿದರು.
ಕಾರ್ಯಕ್ರಮದ ಮೂಲ ಆಶಯದಂತೆ ಎಲ್ಲಾ ದಾನಿಗಳ ಸಹಕಾರದಿಂದ 17 ಲಕ್ಷಗಳ ದೇಣಿಗೆಯನ್ನು ದುಬಾಯಿ ಘಟಕದ ವತಿಯಿಂದ ಘೋಷಿಸಲಾಯಿತು.
ಚಿತ್ರ : ಆಶೋಕ್ ಬೆಳ್ಮಣ್, ದುಬಾಯಿ
Comments are closed.