ಕರಾವಳಿ

ಐದು ವರ್ಷಗಳ ಬಳಿಕ ಪಿಲಿಕುಳದಲ್ಲಿ ಮತ್ತೆ ಕಂಬಳ : ಸರಕಾರದ ವತಿಯಿಂದ ನಡೆಯುವ ಏಕೈಕ ಕಂಬಳ

Pinterest LinkedIn Tumblr

ಮಂಗಳೂರು : ನಗರದ ಹೊರವಲಯದ ಮೂಡುಶೆಡ್ಡೆ ಬಳಿ ಇರುವ ಪಿಲಿಕುಳದಲ್ಲಿ ಐದು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಪಿಲಿಕುಳ ಕಂಬಳವನ್ನು ಮರಳಿ ಆರಂಭಿಸಲು ದ.ಕ.ಜಿಲ್ಲಾಡಳಿತ ಒಲವು ತೋರಿದ್ದು, ಜನವರಿ ಅಥವಾ ಫೆಬ್ರವರಿಯಲ್ಲಿ ಆಯೀಜಿಸಲು ತೀರ್ಮಾನಿಸಿದೆ.

ಪಿಲಿಕುಳದಲ್ಲಿ ಸರಕಾರದ ವತಿಯಿಂದ ನಡೆಯುವ ಏಕೈಕ ಜಿಲ್ಲೆಯ ಜಾನಪದ ಕಲೆಯಾದ ಕಂಬಳವನ್ನು ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿಯಲ್ಲ್ಲಿ ನಡೆಸಬಹುದಾಗಿದೆ. ಇದಕ್ಕೆ ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ನಡೆಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಂಬಳಕ್ಕೆ ಬೇಕಾಗುವ ಅನುದಾನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಅನುದಾನದ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ನೀಡಿ, ಆದಷ್ಟು ಬೇಗ ಮಂಜೂರು ಮಾಡಿಸುವಂತೆ ಭರವಸೆ ನೀಡಿದರು.

ಕಂಬಳ ಸಮಿತಿಯಿಂದ ಸಂಪೂರ್ಣ ಸಹಕಾರ ; ಪಿ.ಆರ್ ಶೆಟ್ಟಿ

ಐದು ವರ್ಷಗಳಿಂದ ಕಂಬಳ ನಡೆಯಿದ್ದರಿಂದ ಪಿಲಿಕುಲದ ಗದ್ದೆ ಸಂಪೂರ್ಣ ಬರಡಾಗಿದೆ. ಕಲ್ಲು ಮುಳ್ಳು ತುಂಬಿ ಕೋಣಗಳು ಕಾಲಿಡಲು ಆಗದಂತ ಪರಿಸ್ಥಿತಿ ಇದೆ. ಗದ್ದೆ ಮತ್ತು ಸುತ್ತಮುತ್ತಲ ಪ್ರದೇಶ ಸಮತಟ್ಟು ಮಾಡಿ ಕಂಬಳ ಆಯೋಜಿಸಲು ಕನಿಷ್ಠ ಎರಡು ತಿಂಗಳು ಆಗತ್ಯ. ಜಿಲ್ಲಾಡಳಿತದ ಎಲ್ಲಾ ಕ್ರಮಕ್ಕೆ ಕಂಬಳ ಸಮಿತಿ ಸಹಕಾರ ನೀಡಲಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್ ಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಮುಖ್ಯಕಾರ್ಯನಿವಾಹಣಾಧಿಕಾರಿ ಡಾ ಆರ್ ಸೆಲ್ವಮಣಿ, ಉಳ್ಳಾಲ ಶಾಸಕ ಯು ಟಿ ಖಾದರ್, ಮೂಡಬಿದ್ರೆ ಶಾಸಕ ಊಮಾನಾಥ ಕೋಟ್ಯಾನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.