ಕರಾವಳಿ

ಅತ್ಯಾಧುನಿಕ ಕಾವಲು ಹಡಗು ‘ವರಾಹ’ ಕರಾವಳಿಯ ಕೋಸ್ಟ್ ಗಾರ್ಡ್ ಕೇಂದ್ರಕ್ಕೆ ಸೇರ್ಪಡೆ

Pinterest LinkedIn Tumblr

ಮಂಗಳೂರು : ಕೋಸ್ಟ್ ಗಾರ್ಡ್ ಕೇಂದ್ರಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಗಸ್ತು ಕಾವಲು ಸೌಲಭ್ಯಗಳನ್ನು ಹೊಂದಿರುವ 96 ಮೀ. ಉದ್ದ 2.100 ಟನ್ ಭಾರ ಹೊಂದಿರುವ ಕಣ್ಗಾವಲು ನೌಕೆ ಐಸಿಜಿಎಸ್ ವರಾಹ ಮಂಗಳವಾರ ನವಮಂಗಳೂರು ಬಂದರಿಗೆ ಆಗಮಿಸಿತು.

ರಾಜ್ಯ ಕರಾವಳಿಯಲ್ಲಿ ಕಣ್ಗಾವಲು, ಗಸ್ತು ಬಲಪಡಿಸುವುದಕ್ಕಾಗಿ ಈ ಅತ್ಯಾಧುನಿಕ ಕಾವಲು ಹಡಗು ‘ ವರಾಹ’ ಕೋಸ್ಟ್ ಗಾರ್ಡ್ ಅನ್ನು ಕೇಂದ್ರಕ್ಕೆ ಮಂಗಳವಾರ ಸೇರ್ಪಡಿಸಲಾಗಿದೆ.

ಸಮುದ್ರ ಮಾರ್ಗದಲ್ಲಿ ಕಳ್ಳಸಾಗಾಣಿಕೆ, ತೈಲ ಸೋರಿಕೆ, ತಪಾಸಣೆ, ಭದ್ರತೆಯ ಕಣ್ಗಾವಲಿಗೆ ಈ ವರಾಹ ಹಡಗನ್ನು ಉಪಯೋಗಿಸಲಾಗುತ್ತದೆ. ಎಲ್ ಆಂಡ್ ಟಿ ಕಂಪೆನಿಯು ಈ ನೂತನ ಹಡಗನ್ನು ನಿರ್ಮಿಸಿದೆ.

ಈ ಹಡಗಿನಲ್ಲಿ 14 ಅಧಿಕಾರಿಗಳು ಮತ್ತು 89 ಸಿಬ್ಬಂದಿಗಳು ಇರಲಿದ್ದು, ಪಶ್ಚಿಮ ಕೋಸ್ಟ್ ಗಾರ್ಡ್ ಕಮಾಂಡಿಂಗ್ ಕೇಂದ್ರದಡಿ ಕಾರ್ಯ ನಿರ್ವಹಿಸಲಿದೆ.

ತುರ್ತು ಸಂದರ್ಭಗಳಲ್ಲಿ 2 ಎಂಜಿನ್ ಗಳ ಹೆಲಿಕಾಪ್ಟರ್ ಹೊತ್ತೊಯ್ಯಬಲ್ಲ ಸಾಮರ್ಥ್ಯವುಳ್ಳ ‘ವರಾಹ’ 30 ಎಂ.ಎಂ ಗನ್, 12.7 ಎಂ.ಎಂ ಗನ್, ರಾಡಾರ್, ಸೆನ್ಸರ್, ಹೈಸ್ಪೀಡ್ ಬೋಟ್ ಗಳನ್ನು ಇದು ಹೊಂದಿರಲಿದೆ. ಅತ್ಯಾಧುನಿಕ ವರಾಹ ಹಡಗಿನ ಆಗಮನದಿಂದ ಕರಾವಳಿ ರಕ್ಷಣೆಗೆ ಹೊಸ ಶಕ್ತಿ ತುಂಬಲಿದೆ.

Comments are closed.